ಪುತ್ತೂರು: ಕಳೆದ 5 ವರ್ಷಗಳಿಂದ ಪ್ರತೀ ವರ್ಷ ಪುತ್ತೂರು ತಾಲೂಕಿನಲ್ಲಿ ಇಹ್ಸಾನ್ ಫೌಂಡೇಶನ್ ನಡೆಸಿಕೊಂಡು ಬರುತ್ತಿರುವ ‘ಸಾಂತ್ವಾನ ಜಾಗೃತಿ ಸರಳ ವಿವಾಹ ಕಾರ್ಯಕ್ರಮ’ ಜ.29ರಂದು ಕೆಮ್ಮಾಯಿ ಬದ್ರಿಯಾ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.
ಸೈಯ್ಯದ್ ಅಹ್ಮದ್ ಪೂಕೋಯ ತಂಙಳ್ ಅವರ ಗೌರವಾಧ್ಯಕ್ಷತೆಯಲ್ಲಿ ನಿಖಾಹ್ ನಡೆಸಿದರು. ನಂತರ ದುಃಆ ನೆರವೇರಿಸಿ ಮಾತನಾಡಿದ ಅವರು ಇಹ್ಸಾನ್ ಫೌಂಡೇಶನ್ ಕಳೆದ 5 ವರ್ಷಗಳಿಂದ ನಡೆಸುತ್ತಿರುವ (ಇಲ್ಲಿಯವರೆಗೆ ಒಟ್ಟು 27 ಜೋಡಿ) ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದ ಬೆನ್ನೆಲುಬು ದಾನಿಗಳಾಗಿದ್ದಾರೆ. ಒಂದು ಹೆಣ್ಣಿಗೆ ಬಾಳು ಸಿಗುವ ಕಾರ್ಯಕ್ಕೆ ನೆರವಾಗುವವರು ಅಲ್ಲಾಹನ ಇಷ್ಟ ದಾಸರು. ಮುಂದೆಯೂ ಈ ಕಾರ್ಯಕ್ಕೆ ಹೆಚ್ಚಿನ ನೆರವನ್ನು ನೀಡಿ ಸಹಕರಿಸಬೇಕು ಎಂದು ಹೇಳಿದರು.
ಉದ್ಘಾಟಿಸಿದ ಕೆಮ್ಮಾಯಿ ಮಸೀದಿಯ ಖತೀಬ್ ಇರ್ಷಾದ್ ಸಖಾಫಿ ಮಾತನಾಡಿ ಇಹ್ಸಾನ್ ಫೌಂಡೇಶನ್ ಕಳೆದ 5 ವರ್ಷಗಳಲ್ಲಿ 27 ಜೋಡಿ ಸಾಮೂಹಿಕ ವಿವಾಹ ಕಾರ್ಯ ಮಾಡಿದೆ. ಅದಲ್ಲದೆ ಬಹಳ ಸರಳವಾಗಿ ಪ್ರತಿವರ್ಷ ಒಂದೊಂದು ಮಸೀದಿಗಳಲ್ಲಿ ಈ ಮದುವೆ ನಡೆಸುತ್ತಿದೆ ಇದೊಂದು ಮಾದರಿ ಯೋಜನೆ ಎಂದು ಶ್ಲಾಘಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೂರ್ನಡ್ಕ ಮಸೀದಿ ಖತೀಬ್ ವಿ.ಎಂ ಉನೈಸ್ ಫೈಝಿ ಮಾತನಾಡಿ ಸತ್ಯವಿಶ್ವಾಸಿಯ ಮನಸ್ಸನ್ನು ಸಂತೋಷಗೊಳಿಸುವುದಾಗಿದೆ. ಸತ್ಕಾರ್ಯಗಳಲ್ಲಿ ಶ್ರೇಷ್ಠವಾದ ಸತ್ಕರ್ಮ. ಇಹ್ಸಾನ್ ಫೌಂಡೇಶನ್ ಸಂಸ್ಥೆ ನಡೆಸುವ ಕಾರ್ಯ ಮಾದರಿಯಾಗಿದೆ ಎಂದರು.
ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಎ.ಕೆ. ಬಶೀರ್ ಹಾಜಿ ಮಾತನಾಡಿ ಇಹ್ಸಾನ್ ಫೌಂಡೇಶನ್ ಮಾಡುತ್ತಿರುವ ಈ ಕಾರ್ಯ ಮಹತ್ತರವಾದದ್ದು, ಇನ್ನು ಮುಂದೆಯೂ ನಮ್ಮ ಜಮಾತ್ ಇಂತಹ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.
ಈ ಸಾಮೂಹಿಕ ಮದುವೆ ಕಾರ್ಯಕ್ಕೆ ಊಟದ ವ್ಯವಸ್ಥೆ, ಸ್ವಯಂ ಸೇವಕರು ಸೇರಿದಂತೆ ಅನೇಕ ನೆರವನ್ನು ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿ ಆಡಳಿತ ಕಮಿಟಿ ಮತ್ತು ಖಿದ್ಮತುಲ್ ಇಸ್ಲಾಮ್ ಯಂಗ್ಮೆನ್ಸ್ ಅಸೋಸಿಯೇಷನ್ ವತಿಯಿಂದ ನೀಡಿರುವುದನ್ನು ಇಹ್ಸಾನ್ ಫೌಂಡೇಶನ್ ಅಧ್ಯಕ್ಷ ಹಮೀದ್ ಸೋಂಪಾಡಿ ಶ್ಲಾಘಿಸಿದರು.
ಊಟೋಪಚಾರದ ಉಸ್ತುವಾರಿಯನ್ನು ಜಮಾತ್ ಕಮಿಟಿಯ ಲತೀಫ್ ಹಾಜಿ, ಹಸನ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ ಅರಮನೆ, ಮಸ್ತಾಮ್ ಉಮ್ಮರ್ ಹಾಜಿ, ಅಶ್ರಫ್ ಹಾಜಿ, ಯಂಗ್ಮೆನ್ಸ್ ಅಧ್ಯಕ್ಷ ಇಸ್ಮಾಯಿಲ್ ಕೆಮ್ಮಾಯಿ, ಅಝೀಝ್ ಟೋಪ್ಕೋ, ಸಂಶುದ್ದೀನ್, ಹಕೀಂ ಡಿ.ಕೆ ವಹಿಸಿದ್ದರು. ಮಹಿಳೆಯರ ವಿಭಾಗದಲ್ಲಿ ಕೆಮ್ಮಾಯಿ ಮದ್ರಸ ವಿದ್ಯಾರ್ಥಿನಿಯರು ಸ್ವಯಂ ಸೇವಕರಾಗಿ ಸಹಕರಿಸಿದರು. ಇಹ್ಸಾನ್ ಫೌಂಡೇಶನ್ನ ಪಿ.ಬಿ. ಅಬ್ದುಲ್ಲಾ ಹಾಜಿ, ಆರಿಫ್ ಸಾಲ್ಮರ, ರಝಾಕ್ ಆರ್.ಪಿ, ಸಿರಾಜುದ್ದೀನ್ ಹಾಜಿ, ಹಂಝಾ ಹಾಜಿ ಚೊಯ್ಸ್, ಡಾ.ಸರ್ಫ್ರಾಜ್ ಇಸ್ಮಾಯಿಲ್, ಶಾಫಿ ಹಾಜಿ, ಶಮೀರ್, ಶುಕೂರ್ ಸಹಕರಿಸಿದರು. ಇಕ್ಬಾಲ್ ಸ್ವಾಗತಿಸಿದರು. ಹನೀಫ್ ಹಾಜಿ ಉದಯ ಮತ್ತು ಇಮ್ತಿಯಾಝ್ ಪಾರ್ಲೆ ಕಾರ್ಯಕ್ರಮ ನಿರೂಪಿಸಿದರು.