ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕರಸೇವೆ ಮೂಲಕ ಹಂಚು ಜೋಡಣೆ

0

ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿದ್ದು ಬ್ರಹ್ಮಕಲಶೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ. ದೇವಸ್ಥಾನದ ಸುತ್ತುಪೌಳಿ ಗೋಪುರಕ್ಕೆ ಹಂಚು ಹೊದಿಸುವ ಕೆಲಸ ಹಾಗೂ ಶಾಸ್ತಾರ ಗುಡಿಯ ಮಾಡು ಜೋಡಣೆ  ಕಾರ್ಯ ನಡೆಯುತ್ತಿದೆ. ಊರಿಗೆ ಊರೇ ಸೇರಿ ಅಭೂತ ಪೂರ್ವವಾಗಿ ಸುತ್ತು ಪೌಳಿ ಗೋಪುರಕ್ಕೆ  ಹಂಚು ಜೋಡಣೆ ಕಾರ್ಯ ನಡೆಯಿತು.   

ಸುಮಾರು 50೦ಕ್ಕೂ ಮಿಕ್ಕಿ  ಕರಸೇವಕರಿಂದ ಶ್ರಮದಾನ:
ದೇವಸ್ಥಾನದ ಸುತ್ತುಪೌಳಿಗೆ  ಹಂಚು ಜೋಡಿಸುವ ಕಾರ್ಯ ನಡೆದಿದ್ದು ಸಮಾರು 500 ಕ್ಕೂ ಹೆಚ್ಚು ಕರಸೇವಕರು ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮದ ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಸದಸ್ಯರು, ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ನಿಡ್ಪಳ್ಳಿ ಒಕ್ಕೂಟದ ಸದಸ್ಯರು,  ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು, ನವೋದಯ ಸ್ವ ಸಹಾಯ ಸಂಘದ ಸದಸ್ಯರು, ಒಡಿಯೂರು ಸ್ವ- ಸಹಾಯ ಸಂಘದ ಸದಸ್ಯರು, ವಿವಿಧ ಭಜನಾ ಮಂಡಳಿ ಸದಸ್ಯರು ಹಾಗೂ ಊರ ಪರವೂರ ಭಕ್ತಾದಿಗಳು ಕರಸೇವೆಯಲ್ಲಿ ಭಾಗವಹಿಸಿದ್ದರು.
ಸಾಂಪ್ರದಾಯಿಕ ತಟ್ಟಿ ರಚನೆ: 
ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ವಿಶೇಷವಾಗಿ ನಡೆಸುವ ಉದ್ದೇಶದಿಂದ ದೇವಸ್ಥಾನದ ಒಳಾಂಗಣಕ್ಕೆ ಹಾಗೂ ಹೊರಾಂಗಣಕ್ಕೆ ಸಂಪೂರ್ಣವಾಗಿ ತೆಂಗಿನ ಗರಿ ತಟ್ಟಿಯಿಂದಲೇ ಚಪ್ಪರ ನಿರ್ಮಾಣ ಮಾಡುವ ನಿಟ್ಟಿನಲ್ಲಿ  ಸುಮಾರು 10 ಸಾವಿರ ದಂಡು ತಟ್ಟಿ ಹೆಣೆಯುವ ಕಾರ್ಯ ದೇವಸ್ಥಾನದ ವಠಾರದಲ್ಲಿ ಸ್ವ ಸಹಾಯ ಸಂಘದ ಸದಸ್ಯರಿಂದ ಹಾಗೂ ಊರವರಿಂದ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸಿ.ಯಚ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು  ಮತ್ತು ಸಮಿತಿ ಸದಸ್ಯರು ಹಾಗೂ ಊರಿನವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here