ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಮಣೇಲ್ ಶ್ರೀನಿವಾಸ ನಾಯಕ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳ ಭೇಟಿ

0

ಪುತ್ತೂರು: ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಸುಸ್ಥಿರ ಕೃಷಿ, ಸಾವಯವ ಹಾಗೂ ಪರಿಸರ ಸ್ನೇಹಿ ಕೃಷಿ ವ್ಯವಸ್ಥೆಯ ಬಗ್ಗೆ ಸಂದರ್ಶನಕ್ಕಾಗಿ ಮಂಗಳೂರಿನ ಮಣೇಲ್ ಶ್ರೀನಿವಾಸ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನ ವಿದ್ಯಾರ್ಥಿನಿಯರು ಫೆ. 4 ರಂದು ಭೇಟಿ‌ ನೀಡಿದರು.

ಕಡಮಜಲು ಸುಭಾಸ್ ರೈಯವರು ಸಾವಯವ ಮತ್ತು ಸಮಗ್ರ‌ ಕೃಷಿಯ ಬಗ್ಗೆ ಮಾಹಿತಿ ನೀಡಿ‌ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ಎಂಬಿಎ ವಿದ್ಯಾರ್ಥಿನಿಯರಾದ ಅಖಿಲಾ ದೇರ್ಲ, ಅನುಶ್ರೀ ಶೆಟ್ಟಿ ಊರ್ವ, ಲೆನಿಶಾ ಶರೀನ್ ಪೇರಿಸ್ ಜೋಕಟ್ಟೆ, ಸಾಂಡ್ರಾ ಸುಪ್ರಿಯಾ ವಾಮಂಜೂರು ಹಾಗೂ ವೃಕ್ಷ ಬೋಂದೇಲ್ ಭಾಗವಹಿಸಿದರು.

ಸಾವಯವ ಕೃಷಿಯ ಬಗ್ಗೆ 22 ಪ್ರಶ್ನೆಗಳಿಗೆ ವೈಜ್ಞಾನಿಕ ಕೃಷಿಕ ಕಡಮಜಲುರವರು ವಿವರವಾದ ಸಮಗ್ರ ಉತ್ತರ ನೀಡಿದರು. ಸಾವಯವ ಕೃಷಿಯ ಮನೋಭೂಮಿಕೆ, ಸಾವಯವ ಕೃಷಿಯಿಂದ ಲಾಭನಷ್ಟ, ಸಾವಯವ ಗೊಬ್ಬರ ತಯಾರಿಸುವ ವಿಧಾನ, ಮಣ್ಣಿನ ಫಲವತ್ತತೆಗೆ ಸಾವಯವ ಕೃಷಿಯಿಂದಾಗುವ ಪ್ರಯೋಜನ, ಸಾವಯವ ಉತ್ಪನ್ನಗಳ ಬಳಕೆ, ಸಾವಯವ ಆಹಾರ ಉತ್ಪನ್ನಗಳಾದ ಅಕ್ಕಿ, ಗೋಧಿ, ಜೋಳ, ರಾಗಿ ಮತ್ತು ತರಕಾರಿಗಳ ಬೆಳೆ ಮತ್ತು ಬೆಲೆಯ ಬಗ್ಗೆ ಮಾಹಿತಿ, ಸಾವಯವ ಕೃಷಿಯ ಬಗ್ಗೆ ಇರುವ ಗೊಂದಲ ಇತ್ಯಾದಿ ಪ್ರಶ್ನೆಗಳಿಗೆ ಉದಾಹರಣೆ ಸಹಿತವಾಗಿ ಸುಮಾರು 1 ತಾಸು ಕಾಲ ಸೂಕ್ತ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರೀತಿ ಎಸ್. ರೈ ಕಡಮಜಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here