ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ವಿಟ್ಲ ಶಾಖೆ ಉದ್ಘಾಟನೆ

0

ಬಂಟ್ವಾಳ: ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಮೆಲ್ಕಾರ್ ಇದರ 6ನೇ ವಿಟ್ಲ ಶಾಖೆಯನ್ನು ವಿಟ್ಲದ ರಸ್ಕಿನ್ಹಾ ಕಾಂಪ್ಲೆಕ್ಸ್ ನಲ್ಲಿ ಫೆ 5 ರಂದು ಪುತ್ತೂರು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿ ಒಂದು ಗ್ರಾಮದ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆ, ಶಾಲೆ, ಅಂಚೆ ಕಚೇರಿ ಇತ್ಯಾದಿಗಳು ಪ್ರಾಥಮಿಕ ಅವಶ್ಯಕತೆಗಳಾಗಿವೆ, ಕರಾವಳಿ ಜಿಲ್ಲೆ ಸಹಕಾರಿ ಕ್ಷೇತ್ರದ ಕಾಶಿ, ವಾಣಿಜ್ಯ ಬ್ಯಾಂಕುಗಳಷ್ಟೆ ಶಕ್ತಿಶಾಲಿ ಎಂದರು. ಗ್ರಾಹಕರಿಗೆ ಒಳ್ಳೆಯ ಸೌಲಭ್ಯ ನೀಡುವ ಮಟ್ಟಕ್ಕೆ ಸಹಕಾರಿ ಸಂಘಗಳು ಇಂದು ಬೆಳೆದಿದೆ. ಜನರಿಗೆ ಬದುಕು, ಉದ್ಯೋಗ ಆರ್ಥಿಕ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿ ಆಗಿದೆ. ವಿಟ್ಲ ಅಡಿಕೆ ಬೆಳೆಗಾರರ ಊರು, ಇಲ್ಲಿ ಆರ್ಥಿಕ ಶಕ್ತಿಗೆ ತೊಂದರೆ ಇಲ್ಲ, ಠೇವಣಿಗೆ ಶೇ.10 ಪ್ರತಿಫಲ ಘೋಷಿಸಿರುವುದು ವಿಶೇಷ ಆಕರ್ಷಣೆ ಎಂದರು. ಇದೇ ಸಂದರ್ಭದಲ್ಲಿ ಶಾಸಕರು ಠೇವಣಿ ಪತ್ರ ಬಿಡುಗಡೆ ಮಾಡಿದರು.

ಸಹಕಾರಿಯ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಸಭೆಯ ಅಧ್ಯಕತೆ ವಹಿಸಿ ಸ್ವಾಗತಿಸಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶದಂತೆ ಸಹಕಾರಿಯು ಬೆಳೆದು ಬಂದಿದೆ. ಹತ್ತು ಕೋಟಿ ವ್ಯವಹಾರವನ್ನು ಸೊಸೈಟಿ ಮಾಡಿದ್ದು ಉತ್ತಮ ಡಿವಿಡೆಂಡ್ ನೀಡಿದೆ. ಹತ್ತು ಮಂದಿ ಸಿಬ೦ದಿಗಳಿದ್ದಾರೆ, ಆರನೇ ಶಾಖೆಯನ್ನು ವಿಟ್ಲದಲ್ಲಿ ಆರಂಭಿಸುವ ಮೂಲಕ ಇನ್ನಷ್ಟು ವ್ಯವಹಾರಕ್ಕೆ ಮುಂದಡಿ ಇಡುತ್ತಿದ್ದೇವೆ ಎಂದರು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವಿಟ್ಲ ಅರಮನೆಯ ಬಂಗಾರು ಅರಸರು ಭದ್ರತಾ ಕೋಶ ಉದ್ಘಾಟಿಸಿದರು.

ಉದ್ಯಮಿಗಳಾದ ಸುಭಾಶ್ಚಂದ್ರ ನಾಯಕ್, ಬಿ. ಸತೀಶ್ ಕುಮಾರ್ ಆಳ್ವ , ಸಂಜೀವ ಪೂಜಾರಿ ನಿಡ್ಯ , ವಿಟ್ಟ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಜಗನ್ನಾಥ ಸಾಲ್ಯಾನ್ ಶುಭ ಹಾರೈಸಿದರು.
ಗಣ್ಯರಾದ ಹರೀಶ್ ಸಿ.ಹೆಚ್, ಕನ್ಯಾನ ದೇಲಂತಬೆಟ್ಟು ಸಂತ ಪೌಲರ ದೇವಾಲಯದ ಧರ್ಮಗುರು ಸುನಿಲ್ ಪ್ರವೀಣ್‌ ಪಿಂಟೋ, ಸಹಕಾರಿಯ ಉಪಾಧ್ಯಕ್ಷ ರಮೇಶ್ ಅನ್ನಪ್ಪಾಡಿ, ನಿರ್ದೇಶಕ ಕೆ. ಸಂಜೀವ ಪೂಜಾರಿ ಉಪಸ್ಥಿತರಿದ್ದರು.

ಇತ್ತೀಚೆಗೆ ನಿಧನರಾದ ಸಹಕಾರಿಯ ಮಾಜಿ ಅಧ್ಯಕ್ಷ, ನಿರ್ದೇಶಕ ದಿ| ಕೆ. ಸೇಸಪ್ಪ ಕೋಟ್ಯಾನ್ ಅವರ ಆತ್ಮಕ್ಕೆ ಶಾಂತಿ ಕೋರಿ ಸಭೆಯಲ್ಲಿ ಪ್ರಾರ್ಥಿಸಲಾಯಿತು.

ನಿರ್ದೇಶಕರಾದ ಉಮೇಶ ಸುವರ್ಣ ತುಂಬೆ, ರತ್ನಾಕರ ಪೂಜಾರಿ ಮೆಲ್ಕಾರ್, ತುಳಿಸಿ ಇರಾ, ಲಕ್ಷೀ ಪೆರ್ವ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಶಾಖಾ ವ್ಯವಸ್ಥಾಪಕ ಹೇಮಂತ ಕುಮಾರ್, ಕಟ್ಟಡ ಮಾಲಕರಾದ ಜೊನ್ಸನ್ ರಸ್ಕಿನ್, ಐರಿನ್ ಡಿ ಸೋಜ ಪಾಲ್ಗೊಂಡಿದ್ದರು.

ನಿರ್ದೇಶಕ ರತ್ನಾಕರ ಪೂಜಾರಿ ನಾಡಾರ್ ವಂದಿಸಿದರು. ಅಶ್ವಿನಿ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here