ಪುತ್ತೂರು: ಸವಣೂರು- ಬೆಳ್ಳಾರೆ ರಸ್ತೆಯ ಪರಣೆಯಿಂದ ಒಂದು ಕಿ.ಮೀ, ದೂರದಲ್ಲಿ ಪ್ರಕೃತಿ ರಮಣಿಯ ಪ್ರದೇಶದಲ್ಲಿ ಕಂಗೊಳಿಸುತ್ತಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಫೆ 7 ಮತ್ತು 8 ರಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳರವರ ನೇತೃತ್ವದಲ್ಲಿ ಜರಗಲಿದೆ.
ಫೆ. 7 ರಂದು ಬೆಳಿಗ್ಗೆ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಮದ್ಯಾಹ್ನ ಕಲಾಶಾಭಿಷೇಕ, ದೇವರುಗಳ ಪ್ರತಿಷ್ಠಾದಿನದ ಪೂಜೆ, ಮಹಾಪೂಜೆ, ಪಲ್ಲ ಪೂಜೆ, ನಡೆಯಲಿದೆ. ಮಧ್ಯಾಹ್ನ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರ ಸೇವಾರ್ಥ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ರಿಂದ ದೀಪಾರಾಧನೆ, ತಾಯಂಬಕ ಸೇವೆ, ರಂಗಪೂಜೆ,ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ ನಡೆಯಲಿದೆ. ಗ್ರಾಮಸ್ಥರು ಮತ್ತು ಪರವೂರ ದಾನಿಗಳ ಸೇವಾರ್ಥವಾಗಿ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಫೆ. 8 ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ವೈದಿಕ ಮಂತ್ರಾಕ್ಷತೆ ನಡೆಯಲಿದೆ. ಮಧ್ಯಾಹ್ನ ಸವಣೂರುಗುತ್ತು ಕುಟುಂಬಸ್ಥರ ಸೇವಾರ್ಥವಾಗಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತದಾರರಾದ ಸವಣೂರುಗುತ್ತು ಡಾ| ರತ್ನಾಕರ ಶೆಟ್ಟಿ ಮತ್ತು ಕುಟುಂಬಸ್ಥರು, ಆಡಳಿತ ಸಮಿತಿಯ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ, ಉತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಕಾರ್ಯದರ್ಶಿ ದಯಾನಂದ ಮಾಲೆತ್ತಾರು, ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ ಹಾಗೂ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ಸುಣ್ಣಾಜೆರವರುಗಳು ತಿಳಿಸಿದ್ದಾರೆ.
ಫೆ. ೮ ರಂದು ಶ್ರೀ ಉಳ್ಳಾಲ್ತಿ ದೈವಕ್ಕೆ ನೇಮೋತ್ಸವ
ಫೆ. 8 ರಂದು ದೇವಸ್ಥಾನದ ಪಕ್ಕದಲ್ಲಿರುವ ಶ್ರೀ ಉಳ್ಳಾಲ್ತಿ ಗುಡಿಯಲ್ಲಿ ರಾತ್ರಿ 8 ರಿಂದ ಶ್ರೀ ಉಳ್ಳಾಲ್ತಿ ದೈವಕ್ಕೆ ನೇಮೋತ್ಸವ ನಡೆಯಲಿದೆ. ಕವಿತಾ ವಿ. ಶೆಟ್ಟಿ ಮತ್ತು ದೇಷ್ನಾ ಶೆಟ್ಟಿ ಬೆಂಗಳೂರುರವರ ಸೇವಾರ್ಥವಾಗಿ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಇದೇ ದಿನ ರಾತ್ರಿ ವಿಸ್ಮಿತಾ ಸಾಜನ್ ಹೆಗ್ಡೆರವರಿಂದ ಶ್ರೀ ಉಳ್ಳಾಲ್ತಿ ದೈವಕ್ಕೆ ಹರಿಕೆ ನೇಮೋತ್ಸವ ನಡೆಯಲಿದೆ.