
ಉಪ್ಪಿನಂಗಡಿ: ಅರಫಾ ವಿದ್ಯಾಕೇಂದ್ರ ಉಪ್ಪಿನಂಗಡಿ ಇಲ್ಲಿನ 10 ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಹಿಶಾಮ್ ಅಲ್‌ಬಾಶಿತ್‌ರವರು ತಯಾರಿಸಿದ ವಿಜ್ಞಾನ ಮಾದರಿಯು 2022-23ನೇ ಸಾಲಿನ ರಾಜ್ಯಮಟ್ಟದ ‘ಇನ್‌ಸ್ಪೈಯರ್ ಅವಾರ್ಡ್’ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿದೆ. ಇವರು ತಯಾರಿಸಿದ ವಿಜ್ಞಾನ ಮಾದರಿ ಏರ್ ಕೂಲರ್ ಕೊಂಬೋ ಆಗಿದೆ. ಇವರಿಗೆ ವಿಜ್ಞಾನ ಶಿಕ್ಷಕಿಯರಾದ ರಹೀಶ ಹಾಗೂ ಜೊಯ್ಲಿನ್ ರೆಬೆಲ್ಲೋರವರು ಮಾರ್ಗದರ್ಶನ ನೀಡಿದ್ದರು.
