ಬಡಗನ್ನೂರುಃ ಗ್ರಾ.ಪಂ ನ ಕುಡಿಯುವ ನೀರಿನ ಕೊಳವೆ ಬಾವಿಯಿಂದ 500 ಮೀಟರ್ ಅಂತರದಲ್ಲಿ ಇರುವ ಕೊಳವೆ ಬಾವಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡುವಂತೆ ಮೆಸ್ಕಾಂ ಇಲಾಖೆ ಬರೆಯಲು ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
.ಗ್ರಾ.ಪಂ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವ ಫಲಾನುಭಿಗಳು ಪಂಚಾಯತ್ ಕುಡಿಯುವ ನೀರಿನ ಕೊಳವೆ ಬಾವಿಯಿಂದ 500 ಮೀಟರ್ ಅಂತರದಲ್ಲಿ ತೆಗೆಯಬೇಕು.ಮೆಸ್ಕಾಂ ಇಲಾಖೆ ಕೊಳವೆ ಬಾವಿಗಳಿಗೆ ವಿದ್ಯುತ್ ಅಳವಡಸಲು ಅನುಮತಿ ನೀಡುವ ಸಂದರ್ಭದಲ್ಲಿ ಪಂಚಾಯತ್ ಕುಡಿಯುವ ನೀರಿನ ಕೊಳವೆ ಬಾವಿಯಿಂದ 500 ಮೀಟರ್ ದೂರದಲ್ಲಿ ಇದ್ದರೆ ಮಾತ್ರ ಅನುಮತಿ ಪತ್ರ ನೀಡಬೇಕು ಈ ಬಗ್ಗೆ ಮೆಸ್ಕಾಂ ಇಲಾಖೆಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ಕಾರ್ಯಕ್ರಮ ಬ್ಯಾನರ್ ಅಳವಡಿಸುವ ಸಂದರ್ಭದಲ್ಲಿ ಗ್ರಾ.ಪಂ ನ ಅನುಮತಿ ಪಡೆದುಕೊಳ್ಳಬೇಕು ಮತ್ತು ಕಾರ್ಯಕ್ರಮದ ಮರುದಿನವೇ ಕಡ್ಡಾಯವಾಗಿ ತೆರವು ಗೊಳಿಸಬೇಕು ಈ ಬಗ್ಗೆ ನಿರ್ಣಯ ಮಾಡಲಾಯಿತು.ಗ್ರಾ.ಪಂ ಮಟ್ಟದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣ ಸಂದರ್ಭದಲ್ಲಿ ಬಚ್ಚಲು ಗುಂಡಿ ನಿರ್ಮಾಣ ಕಡ್ಡಾಯಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.
ವಸತಿ ಯೋಜನೆಯಲ್ಲಿ ಮನೆ ಪಡೆದುಕೊಂಡ ಫಲಾನುಭಿಗಳ ಎರಡು ಮನೆ ಕೆಲಸ ಪೂರ್ಣಗೊಂಡಿದೆ. ಕೆಲವು ಅಡಿಪಾಯ ಹಂತದಲ್ಲಿ ,ಕೆಲವು ಗೋಡೆ ಹಂತದಲ್ಲಿದೆ , ಇನ್ನೂ ಕೆಲವು ಫಲಾನುಭಿಗಳು ಯಾವುದೇ ಕೆಲಸ ಪ್ರಾರಂಭ ಮಾಡಿಲ್ಲ. ಅದುದರಿಂದ ಮುಂದಿನ ಸೋಮವಾರದೊಳಗೆ ಅಡಿಪಾಯ ಮಾಡಿ ಪೋಟೋ ತಂದು ಒಪ್ಪಿಸಬೇಕು. ಇಲ್ಲದೆ ಇದ್ದಲ್ಲಿ ನಿಗಮದಿಂದ ರದ್ದುಗೊಳಿಸಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಸಭೆಯಲ್ಲಿ ತಿಳಿಸಿದರು.
ಗ್ರಾ.ಪಂ ಗುಮಾಸ್ತ ಜಯಾಪ್ರಸಾದ ರೈ ರವರ ಮುಂಭಡ್ತಿ ಗೊಂಡು ತೆರವಾದ ಸ್ಥಾನಕ್ಕೆ ಸರಕಾರದ ಸುತ್ತೋಲೆ ಪ್ರಕಾರ ಜೇಷ್ಠತೆ ಆಧಾರದಲ್ಲಿ ಅಯ್ಕೆ ಮಾಡಿ ಜಿ.ಪಂ ಗೆ ಕಳಿಸುವ ಇಲ್ಲಿ ಯಾರು ಎಂಬುದು ಪ್ರಶ್ನೆ ಅಲ್ಲ ಅರ್ಹತೆಯುಳ್ಳವರನ್ನು ಮುಂಭಡ್ತಿ ಆದೇಶ ಮಾಡುತ್ತಾರೆ ನಾವು ಅರ್ಹರ ಅಯ್ಮೆ ಪಟ್ಟಿ ನಿರ್ಣಯ ಮಾಡಿ ಕಳಿಸಿಕೊಡುವುದು ಅಷ್ಟೇ ಕೆಲಸ.ನಿರ್ಣಯ ತೆಗೆದುಕೊಂಡರೆ ನಾನು ಜಿ.ಪಂ ಗೆ ಕಳಿಸಿಕೊಡುತ್ತೇನೆ ಎಂದು ಪಿಡಿಒ ವಸೀಮ ಗಂಧದ ಸಭೆಯ ಗಮನಕ್ಕೆ ತಂದರು. ಉಪಾಧ್ಯಕ್ಷ ಸಂತೋಷ್ ಆಳ್ವ ಈ ಬಗ್ಗೆ ಪ್ರತಿಕ್ರಿಯಿಸಿ ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಿತ್ತು. ಆದರೆ ಅಯ್ಕೆ ವಿಚಾರದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ . ಆ ಸುತ್ತೋಲೆಯನ್ನು ರದ್ದು ಪಡಿಸಿದೆ.ಎಂದು ಪಿಡಿಒ ರವರ ಗಮನಕ್ಕೆ ತಂದರು. ಬಗ್ಗೆ ಗಮನಕ್ಕೆ ಬಂದಿಲ್ಲ ಅದರೂ ಸರ್ಕಾರದ ನಿಯಮ ಪಾಲಿಸಬೇಕು. ಎಂದು ಹೇಳಿದರು.ಸದಸ್ಯ ವೆಂಕಟೇಶ್ ಕನ್ನಡ್ಕ. ಗುಮಾಸ್ತರ ಹುದ್ದೆ ನೇರ ನೇಮಕಾತಿ ಆಗಬೇಕು ಎಂದು ಒತ್ತಾಯಿಸಿದರು
ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯ ರವಿರಾಜ ರೈ ಸಜಂಕಾಡಿ ಜೆಷ್ಠತೆ ಆಧಾರದಲ್ಲಿ ಜಿ.ಪಂ ಗೆ ಪಟ್ಟಿ ಅರ್ಹತೆಯುಳ್ಳವರನ್ನು ಅವರು ಅಯ್ಕೆ ಮಾಡುತ್ತಾರೆ. ಎಂದರು. ಈ ಬಗ್ಗೆ ಉಪಾಧ್ಯಕ್ಷ ಸಂತೋಷ್ ಆಳ್ವ ಪ್ರತಿಕ್ರಿಯಿಸಿ ಹಾಗಿದ್ದರೆ ಕಳೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿದೆ ಅಲ್ವಾ ಅವತ್ತು ಕಳಿಸಬಹುದಿತ್ತು ಏಕೆ ಕಳಿಸಿಲ್ಲ ಎಂದು ಪ್ರಶ್ನಿಸಿದರು ಇವರೊಂದಿಗೆ ಸದಸ್ಯರಾದ ವೆಂಕಟೇಶ್ ಕನ್ನಡ್ಕ ಹಾಗೂ ಕುಮಾರ ಅಂಬಟೆಮೂಲೆ ಧ್ವನಿ ಗೂಡಿಸಿದರು . ಈ ವಿಚಾರದಲ್ಲಿ ಸದಸ್ಯರೊಳಗೆ ಮಾತಿಗೆ ಮಾತು ಬೆಳೆದು ಕೆಲವೊಮ್ಮೆ ಏಕವಚನದಲ್ಲಿ ಸಂಭವಿಸಿದ ಘಟಣೆಯು ನೆಡೆಯಿತು.
ಈ ಮಧ್ಯೆ ಪ್ರವೇಶಿಸಿ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಸಣ್ಣ ಪುಟ್ಟ ವಿಚಾರ ಕಿತ್ತಾಡುವುದಾದರೆ ನಾನು ಮುಂದೆ ಸಭೆಗೆ ಬರುದಿಲ್ಲ ತಾವೇ ಸಭೆ ನಡೆಸಿ ಎಂದಾಗ ಚರ್ಚೆವಿರಾಮ ಗೊಂಡಿತು. ಬಳಿಕ ಗುಮಾಸ್ತ ಹುದ್ದೆಗೆ ನೇಮಕಾತಿ ವಿಚಾರದಲ್ಲಿ ಜಿ.ಪಂ ಗೆ ಪತ್ರ ಬರೆದುಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.
ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಧರ್ಮೇಂದ್ರ ಕುಲಾಲ್ ಪದಡ್ಕ, ಪದ್ಮನಾಭ ಕನ್ನಡ್ಕ, ರವಿಚಂದ್ರ ಸಾರೆಪ್ಪಾಡಿ, ಕುಮಾರ ಅಂಬಟೆಮೂಲೆ, ಲಿಂಗಪ್ಪ ಮೋಡಿಕೆ, ವೆಂಕಟೇಶ್ ಕನ್ನಡ್ಕ, ದಮಯಂತಿ ನೆಕ್ಕರೆ, ಹೇಮಾವತಿ ಮೋಡಿಕೆ, ಪುಷ್ಷಲತಾ ದೇವಕಜೆ, ಸುಶೀಲ ಪಕ್ಯೋಡು, ಸವಿತಾ ನೆರೋತ್ತಡ್ಕ, ಸಂಜಾತ ಎಂ, ಜ್ಯೋತಿ ಅಂಬಟೆಮೂಲೆ, ಕಲಾವತಿ ಪಟ್ಲಡ್ಕ, ಉಪಸ್ಥಿತರಿದ್ದರು.