ಕಡಮಜಲು ಸುಭಾಸ್ ರೈಯವರ 73 ನೇ ಹುಟ್ಟುಹಬ್ಬ

0

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಜೊತೆಗೆ ಹುಟ್ಟುಹಬ್ಬ ಸಂಭ್ರಮ -ಮೂವರು ಸಾಧಕರಿಗೆ ಸನ್ಮಾನ

ಸಂತ ಫಿಲೋಮಿನಾ ಕಾಲೇಜಿಗೆ ರೂ. 1 ಲಕ್ಷ ದೇಣಿಗೆ

ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿನ್ನದ ಪದಕ‌ ವಿಜೇತ ಕೃಷಿಕ ಕಡಮಜಲು ಸುಭಾಸ್ ರೈಯವರ 73 ನೇ ಹುಟ್ಟುಹಬ್ಬವನ್ನು ಸರಳವಾಗಿ ಫೆ. 6 ರಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆಯವರ ಜೊತೆ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಆಚರಿಸಲಾಯಿತು.


ಕಾರ್ಯಕ್ರಮವನ್ನು ಬಿಜೆಪಿ ಮಾಜಿ ಮಂಡಲಾಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ ದಂಪತಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಸುಭಾಸ್ – ಸುದರ್ಶನ್ ಹುಟ್ಟುಹಬ್ಬ ಸುಭಾಸ್ ರೈ ಯವರ 73 ನೇ ಮತ್ತು ಸುದರ್ಶನ್ ಮೂಡಬಿದ್ರೆಯವರ 43 ನೇ ಹುಟ್ಟುಹಬ್ಬವನ್ನು ಈರ್ವರೂ ಜೊತೆಯಾಗಿ ಕೇಕ್ ಕತ್ತರಿಸುವುದರ ಮೂಲಕ ಸಂಭ್ರಮಾಚರಿಸಿಕೊಂಡರು.


ಆರು ‘ಎಸ್’ ಗಳಿಂದ ಮೂವರು ‘ಎಸ್’ ಗಳಿಗೆ ಸನ್ಮಾನ


ಇದೇ ವೇಳೆ ನಿವೃತ್ತ ಪ್ರಾಂಶುಪಾಲರಾದ ಬಿ.ವಿ. ಸೂರ್ಯನಾರಾಯಣ ದಂಪತಿ, ‌ನಿವೃತ್ತ ಪೊಲೀಸ್ ಸಿಬಂದಿ ಸುರೇಶ್ ರೈ ದಂಪತಿ, ಪತ್ರಕರ್ತ ಸುಧಾಕರ ಸುವರ್ಣ ರವರನ್ನು ಕಡಮಜಲುರವರು ಸನ್ಮಾನಿಸಿ ಗೌರವಿಸಿದರು. ಕಡಮಜಲುರವರ ಬೀಗರಾದ ಚಂದ್ರಶೇಖರ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ಚಂದ್ರಶೇಖರ್ ಶೆಟ್ಟಿ ಕುಟುಂಬಿಕರು ಕಡಮಜಲು ಸುಭಾಸ್ ರೈ ಮತ್ತು ಪ್ರೀತಿ ಎಸ್. ರೈ ದಂಪತಿಯನ್ನು ಹುಟ್ಟುಹಬ್ಬದ ಶುಭಾಶಯದ ಸಲುವಾಗಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಸಂಜೀವ ಮಠಂದೂರುವರು ಮಾತನಾಡಿ ‘ಸುಭಾಸ್ ರೈ ಯವರನ್ನು ನೋಡಿದಾಗ ಖುಷಿಯಾಗುತ್ತದೆ. ಕೃಷಿಕನ ಬದುಕು ಹೇಗೆ ಮಾದರಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರದ್ದು ಅಪರೂಪದ ವ್ಯಕ್ತಿತ್ವ. ಮೊಟ್ಟ ಮೊದಲ ಬಾರಿಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿಯನ್ನು ಕೃಷಿಕ ಅನ್ನದಾತನಿಗೆ ನೀಡಬೇಕೆಂಬ ನಮ್ಮ ಆಶಯದಂತೆ ಮೊದಲ ಪ್ರಶಸ್ತಿಯನ್ನು ಕಡಮಜಲುರವರಿಗೆ ನೀಡಿ ಗೌರವಿಸಿದ್ದೆವು. ಕೃಷಿಕನನ್ನು ಸಮಾಜ ಗೌರವಿಸಬೇಕು. ಸರಕಾರ ಗೌರವಿಸಬೇಕು. ಮುಂದಿನ ಬಾರಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಅವರ ಪಾಲಿಗೆ ಬರಲು ಎಲ್ಲಾ ಅರ್ಹತೆ ಇದೆ’ ಎಂದು ಹೇಳಿ ಶುಭಾಶಿಸಿದರು.

ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆಯವರು ಮಾತನಾಡಿ ‘ಪೂರ್ವಜನ್ಮದ ಭಾಗ್ಯ ನನ್ನ ಪಾಲಿಗೆ ಬಂದಿದೆ. ವೈಯುಕ್ತಿಕ ಜೀವನದಲ್ಲಿ ನಾನು ಕಂಡಿರುವ ಅನೇಕ ಕುಟುಂಬಗಳಲ್ಲಿ ಸುಭಾಸ್ ರೈ ಕುಟುಂಬದಲ್ಲಿರುವ ಸಾಮ್ಯತೆ, ಒಗ್ಗಟ್ಟು, ಭಾವನಾತ್ಮಕ ಸಂಬಂಧ ಬೇರೆಲ್ಲೂ ನೋಡಿಲ್ಲ.
ಇಂತಹ ಕುಟುಂಬ, ಮನೆತನದಿಂದ ದೇಶದ ಸಂಸ್ಕೃತಿ ಉಳಿದಿದೆ. ಯುವಕರನ್ನು ನಾಚುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಶ್ರಮಕ್ಕೆ ತಕ್ಕಂತೆ ಗೌರವ ಸಿಗಬೇಕಾಗಿದೆ. ಅನೇಕ ಗೌರವಗಳು ಈಗಾಗಲೇ ಅವರಿಗೆ ದೊರೆತಿವೆ. ಇನ್ನೂ ಉನ್ನತ ಮಟ್ಟದ ಗೌರವ ಸನ್ಮಾನ ಮುಂದಿನ ಬಾರಿ ಸಿಗಲಿದೆ ಎಂಬ ಆತ್ಮವಿಶ್ವಾಸ‌ ನಮಗಿದೆ’ ಎಂದರು.
ವೇದಿಕೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ‌ ತಿಮ್ಮಪ್ಪ ಶೆಟ್ಟಿ ‌ಶುಭಾಶಯ ಸಲ್ಲಿಸಿದರು.

ಹುಟ್ಟುಹಬ್ಬ ಆಚರಿಸಿಕೊಂಡು, ಸಾಧಕರನ್ನು ಸನ್ಮಾನಿಸಿ, ಚೆಕ್ ಹಸ್ತಾಂತರಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಕಡಮಜಲು ಸುಭಾಸ್ ರೈಯವರು ‘ನನ್ನನ್ನು ರೈತ ಎಂದು ಗುರುತಿಸಿದ್ದು ಶಾಸಕರು. ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದ್ದಾರೆ. ಅವರೂ ಒಬ್ಬ ಕೃಷಿಕ. ಆ ಬಳಿಕ ಈ ಕೃಷಿಕ ಅನೇಕ ಎತ್ತರಕ್ಕೆ ಏರಿದ್ದಾನೆ. ಈ ರೈತನನ್ನು ವಿಜಯಕರ್ನಾಟಕ ‘ಸೂಪರ್ ಸ್ಟಾರ್’ ಮಾಡಿಸಿದೆ. ಸನ್ಮಾನಗಳು ನನ್ನಲ್ಲಿ ಜೀವನೋಲ್ಲಾಸ ಹೆಚ್ಚಿಸಿದೆ. ಮುಗೆರೋಡಿ ‘ಅಣ್ಣ’ ಬರಬೇಕೆಂದು ಆಶೆ ಇತ್ತು. ನನ್ನ ರಾಜಕೀಯದಲ್ಲಿ ರಾಮ-ಭರತ, ರಾಮ-ಲಕ್ಷ್ಮಣರಂತಿದ್ದ ಒಡನಾಡಿ ಮುಗೇರೋಡಿ ಬಾಲಕೃಷ್ಣ ರೈಯವರು ಬಂದಿರುವುದು ಅತೀವ ಸಂತಸ ತಂದಿದೆ.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಯುವ ಮೋರ್ಚಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ಸುಭಾಸ್ ರೈಯವರ ಬಂಧುಗಳು ಮತ್ತು ಮನೆಯವರು ಪಾಲ್ಗೊಂಡರು.

ತಂದೆ ಕಲಿತ ಕಾಲೇಜಿಗೆ ಮಗನಿಂದ ಕೊಡುಗೆ


ಕಡಮಜಲು ಸುಭಾಸ್ ರೈಯವರು ವ್ಯಾಸಂಗ ಮಾಡಿದ ಸಂತ ಫಿಲೋಮಿನಾ ಕಾಲೇಜಿಗೆ ಕಡಮಜಲುರವರ ಪುತ್ರ ಅಮೆರಿಕದಲ್ಲಿ ಉದ್ಯೋಗಿಯಾಗಿರುವ ವಿಫುಲ್ ಎಸ್‌. ರೈ ನೀಡಿರುವ ಕೊಡುಗೆಯಾದ ರೂ. 1 ಲಕ್ಷ ಮೊತ್ತದ ಚೆಕ್‌ನ್ನು ಕಡಮಜಲುರವರು ಹಸ್ತಾಂತರಿಸಿದರು‌. ಸಂತ ಫಿಲೊಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಿಲ್ಮೆತ್ತಾರು ಜಗಜ್ಜೀವನ್ ದಾಸ್ ರೈ, ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ತೇಜಸ್ವಿ ಭಟ್, ವ್ಯವಹಾರ ವಿಭಾಗದ ಮುಖ್ಯಸ್ಥ ಮುಂಡಾಳಗುತ್ತು ಪ್ರಶಾಂತ್ ರೈ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here