ಪುತ್ತೂರು: ಮನೆಯ ಮಾಡು ಕುಸಿದು ಅಪಾರ ನಷ್ಟ ಸಂಭವಿಸಿದ ಘಟನೆ ಮುಂಡೂರು ಗ್ರಾಮದ ಪೊನೋನಿ ಎಂಬಲ್ಲಿ ಫೆ 7ರಂದು ನಡೆದಿದೆ.
ಪೊನೋನಿ ನಿವಾಸಿ ಲೂಯಿಸ್ ಡಿಸೋಜಾ ಅವರ ಮನೆಯ ಮಾಡು ಇಂದು ಬೆಳಿಗ್ಗೆ ಆಕಸ್ಮಿಕವಾಗಿ ಕುಸಿದು ಅಂದಾಜು ರೂ.1 ಲಕ್ಷ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮನೆ ಮಂದಿ ಮನೆಯ ಹೊರಗಡೆ ಇರುವಾಗ ಈ ಘಟನೆ ನಡೆದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಸ್ಥಳಕ್ಕೆ ಮುಂಡೂರು ಗ್ರಾಮ ಆಡಳಿತ ಅಧಿಕಾರಿ ತುಳಸಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಂಡೂರು ಗ್ರಾ.ಪಂ ಸದಸ್ಯ ಉಮೇಶ್ ಗೌಡ ಅಂಬಟ ಅವರು ಸ್ಥಳದಲ್ಲೇ ಇದ್ದುಕೊಂಡು ಮನೆಯವರಿಗೆ ಅಗತ್ಯ ಸಹಕಾರ ನೀಡಿದ್ದಾರೆ.