ಕಡಬ: ಇಲ್ಲಿನ ಪಂಜ ರಸ್ತೆಯಲ್ಲಿರುವ ಯೋಗಕ್ಷೇಮ ವಾಣಿಜ್ಯ ಸಂಕೀರ್ಣದಲ್ಲಿ ಆರೋಗ್ಯ ಪ್ಲಸ್, ಡಿಜಿಟಲ್ ಎಕ್ಸ್‌ರೇ, ಪಾಲಿಕ್ಲಿನಿಕ್ ಫೆ.2ರಂದು ಶುಭಾರಂಭಗೊಂಡಿತು. ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆಯವರು ಕ್ಲಿನಿಕ್‌ನ್ನು ಉದ್ಘಾಟಿಸಿ ಮಾತನಾಡಿ, ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಕಡಬದಲ್ಲಿ ಎಕ್ಸ್‌ರೇ ಹಾಗೂ ಎಕ್ಸರೇ ತಜ್ಞರು ಲಭ್ಯವಿರುವುದು ಉತ್ತಮ ಬೆಳವಣಿಗೆ, ಇದರ ಪ್ರಯೋಜನ ಎಲ್ಲರಿಗೂ ಸಿಗುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಉಪಸ್ಥಿತರಿದ್ದ ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು, ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ, ಡಾ| ಶತಾನಂದ ಪ್ರಸಾದ್ ರಾವ್, ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಅವರುಗಳು ಮಾತನಾಡಿ ಶುಭ ಹಾರೈಸಿದರು. ಡಾ| ಗೌರವ್ ಬಿ. ಶೆಟ್ಟಿ ಹಾಗೂ ಡಾ| ಸಂಗೀತಾ ಕೆ.ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನ್ ಎಲ್. ಶೆಟ್ಟಿರವರು ಸ್ವಾಗತಿಸಿ, ವಂದಿಸಿದರು. ಶ್ರದ್ದಾ ಎಲ್.ರೈ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಚಿಕಿತ್ಸಾ ತಜ್ಞ ಡಾ. ಅಜಯ್ ಕುಮಾರ್, ವಿಕೀರಣ ಕ್ಯಾನ್ಸರ್ ತಜ್ಞ ಡಾ. ಕೃಷ್ಣರಾಜ್ ಹೆಚ್.ಕೆ., ವೈದ್ಯಕೀಯ ಕ್ಯಾನ್ಸರ್ ಚಿಕಿತ್ಸಾ ತಜ್ಞ ಡಾ. ರಾಮನಾಥ ಶೆಣೈ, ಕೆ.ಎಂ.ಸಿ.ಯ ಮಾರ್ಕೆಟಿಂಗ್ ಮುಖ್ಯಸ್ಥ ರಾಕೇಶ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಫೆ.12ರಂದು ಉಚಿತ ಸ್ಕ್ರೀನಿಂಗ್ ತಪಾಸಣೆ, ಮಾಹಿತಿ ಶಿಬಿರ
ಆರೋಗ್ಯ ಪ್ಲಸ್ ಪಾಲಿ ಕ್ಲಿನಿಕ್ ನೇತೃತ್ವದಲ್ಲಿ ವಿವಿಧ ಸಂಸ್ಥೆಯ ಆಶ್ರಯದಲ್ಲಿ ಉಚಿತ ಸ್ಕ್ರೀನಿಂಗ್ ತಪಾಸಣೆ ಮತ್ತು ತಿಳುವಳಿಕೆ ನೀಡುವ ಶಿಬಿರವು ನಡೆಯಲಿದೆ. ಶಿಬಿರದಲ್ಲಿ ಸ್ತ್ರೀಯರ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ, ಸ್ತ್ರೀಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ತಪಾಸಣೆ, ವೀಡಿಯೋ ಪ್ರದರ್ಶನ ಮೂಲಕ ಮಾಹಿತಿಯನ್ನು ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.