ರಾಮಕುಂಜ ಪ.ಪೂ.ಕಾಲೇಜು, ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘ
ಅಧ್ಯಕ್ಷ; ಅಶೋಕ್ ಕೊಯಿಲ, ಕಾರ್ಯದರ್ಶಿ: ಪ್ರವೀಣ್‌ಕುಮಾರ್, ಕೋಶಾಧಿಕಾರಿ: ನವೀನ್‌ಕುಮಾರ್

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.

ಅಧ್ಯಕ್ಷರಾಗಿ ನಿವೃತ್ತ ಹಿರಿಯ ಪಶುವೈದ್ಯ ಪರೀಕ್ಷಕ ಅಶೋಕ್ ಕೊಯಿಲ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಶಿಕ್ಷಕ ಪ್ರವೀಣ್ ಕುಮಾರ್ ಕೆ. ಹಾಗೂ ಕೋಶಾಧಿಕಾರಿಯಾಗಿ ಸಮರ್ಥ ನಿಧಿಯ ಎಂಡಿ ನವೀನ್ ಕುಮಾರ್ ಕೆ. ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಕನಕರಾಜ್, ಗಣೇಶ್ ಕೆ ಮತ್ತು ಕೇಶವ, ಜೊತೆಕಾರ್ಯದರ್ಶಿಯಾಗಿ ಲೋಕನಾಥ ರೈ, ಚೇತನ್, ಕ್ರೀಡಾ ಸಂಯೋಜಕರಾಗಿ ಪ್ರದೀಪ್ ಕುಮಾರ್, ಪ್ರಶಾಂತ್ ಕುಮಾರ್, ಸಾಂಸ್ಕೃತಿಕ ಸಂಯೋಜಕರಾಗಿ ಪಿ.ಎಸ್. ನಾರಾಯಣ್, ಪರಮೇಶ್ವರ ಅವರು ಆಯ್ಕೆಯಾದರು. ಇಪ್ಪತ್ತು ಮಂದಿ ಹಿರಿಯ ವಿದ್ಯಾರ್ಥಿಗಳನ್ನು ಸಂಘದ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಕಾಲೇಜಿನ ಪ್ರಾಂಶುಪಾಲರು, ಶಾಲೆಯ ಮುಖ್ಯಗುರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here