ಪುತ್ತೂರು: ಮಂಗಳೂರು ಗೋಕರ್ಣನಾಥೇಶ್ವರ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಹಾಗೂ ಕಾಪಿನಾಡು ಕುಮಾರಧಾರಾ ಫಾರ್ಮ್ಸ್‌ನ ವಿಜಯಕುಮಾರ್ ಸೊರಕೆ ಹಾಗೂ ಶ್ರೀಮತಿ ಸುಕೃಪಾ ದಂಪತಿ ಚಾರ್ವಾಕ ಗ್ರಾಮದ ಕಾಪಿನಕಾಡು ಕುಮಾರಧಾರಾ ಫಾರ್ಮ್ಸ್‌ನಲ್ಲಿ ನೂತನವಾಗಿ ನಿರ್ಮಿಸಿದ ಗೃಹ ವಿಜಯಲಕ್ಷ್ಮೀ ಮ್ಯಾನ್ಶನ್ ಇದರ ಪ್ರವೇಶೋತ್ಸವವು ಫೆ.9 ರಂದು ಜರಗಲಿದೆ.
ನೂತನ ಗೃಹದ ಪ್ರವೇಶೋತ್ಸವ ಪ್ರಯುಕ್ತ ಫೆ.8 ರಂದು ಸಂಜೆ ದೇವತಾ ಪ್ರಾರ್ಥನೆ, ಆಚರ್ಯವರಣ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಇಂದ್ರಾದಿ ದಿಕ್ಪಾಲಕ ಬಲಿ, ಪ್ರಸಾದ ವಿತರಣೆ, ಫೆ.9 ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ತುಳಸೀ ಪ್ರತಿಷ್ಠೆ, ದ್ವಾರ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ಭೋಜನ ನೆರವೇರಲಿರುವುದು ಎಂದು ಕುಮಾರಧಾರಾ ಫಾರ್ಮ್ಸ್‌ನ ವಿಜಯಕುಮಾರ್ ಸೊರಕೆ ಹಾಗೂ ಶ್ರೀಮತಿ ಸುಕೃಪಾ ದಂಪತಿ, ಪುತ್ರಿ ಡಾ|ನಿಧಿಕಾ ವಿ.ಸೊರಕೆ, ಪುತ್ರ ಸಿಎ ತೇಜಸ್ ವಿ.ಸೊರಕೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.