ರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಚಿನ್ನದ ಪದಕ ವಿಜೇತೆ ವಿವೇಕಾನಂದ ಸಿ.ಬಿ.ಎಸ್.ಇ ಶಾಲೆಯ ಧನ್ಯಶ್ರೀಗೆ ಸನ್ಮಾನ

0

ಪುತ್ತೂರು: ನೆಹರುನಗರದ ವಿವೇಕಾನಂದ ಸಿ.ಬಿ.ಎಸ್.ಇ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಧನ್ಯಶ್ರೀ ಎಚ್.ಪಿ.ರವರ ಹಲವಾರು ಸಾಧನೆಗಳನ್ನು ಗುರುತಿಸಿ ಫೆ.2ರಂದು, ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಸಮಾರಂಭ ನಡೆಸಲಾಯಿತು.

ಪ್ರಕಾಶ್. ಎಚ್.ಕೆ (ಉಪ್ಪಿನಂಗಡಿ ಇಂದ್ರಪ್ರಸ್ಥ ಕಾಲೇಜಿನ ಪ್ರಾಂಶುಪಾಲರು) ಹಾಗೂ ಮಾಲಿನಿ. ಕೆ.ಎನ್ (ಕಲ್ಲಾರಕೋಡಿ ಪ್ರೌಢಶಾಲೆಯಲ್ಲಿ ಶಿಕ್ಷಕಿ) ಅವರ ಪುತ್ರಿಯಾದ ಧನ್ಯಶ್ರೀ ಇವರು, ಜನವರಿ 29 ರಂದು ಗುಜರಾತ್‌ನ ರಾಜ್‌ಕೋಟ್ ಎಂಬಲ್ಲಿ ನಡೆದ, INSEF ರಾಷ್ಟ್ರೀಯ ವಿಜ್ಞಾನ ಮೇಳದ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿ “NOVEL GUM FROM APIS TRIGONA WAX” ಎಂಬ ವಿಷಯದಲ್ಲಿ ಚಿನ್ನದ ಪದಕ ಗಳಿಸಿದ್ದು ಇವರನ್ನು ಸ್ವಾಗತಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಮಾತನಾಡಿ ಯಾರಿಗೂ ಯಾವುದೂ ಅಸಾಧ್ಯವಲ್ಲ; ಸಾಧನೆಗೆ ಒಂದು ಗುರಿ ಹಾಗೂ ಪರಿಕಲ್ಪನೆ ಇರಬೇಕು ಎಂದು ಹೇಳಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ. ಕೆ. ಮಾತನಾಡಿ ಧನ್ಯಶ್ರೀಯ ರಾಷ್ಟ್ರಮಟ್ಟದ ಸಾಧನೆಗಳನ್ನು ಶ್ಲಾಘಿಸಿ, ಎಲ್ಲರೂ ಈ ತೆರನಾದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ತನ್ಮೂಲಕ ಹೊಸ ಹೊಸ ಅನುಭವಗಳನ್ನು ಪಡೆಯಬೇಕು ಎಂದು ನುಡಿದರು. ಪ್ರಕಾಶ್ ಎಚ್.ಕೆ. ಮಾತನಾಡಿ ನಮ್ಮ ಮಗಳ ಸಾಧನೆಯು ತಮ್ಮೆಲ್ಲರಿಗೂ ಸಲ್ಲುತ್ತದೆ. ಏನನ್ನಾದರೂ ಸಾಧಿಸಬೇಕೆಂದರೆ ಓಬ್ಸರ್ವ್ ಮಾಡಲು ಆರಂಭಿಸಬೇಕು ಎಂದರು.

ಧನ್ಯಶ್ರೀಯವರ ಸಾಧನೆಯ ಹಾದಿ: ಕಳೆದ ಎರಡು ವರ್ಷಗಳಿಂದ ಸತತವಾಗಿ NCSC ಸ್ಪರ್ಧೆಯಲ್ಲಿ ಭಾಗವಹಿಸಿ, ಉನ್ನತ ಸಾಧನೆಯನ್ನು ಮಾಡಿದುದಲ್ಲದೇ, IRIS ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿಶೇಷ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. 2021-22 INSPIRE AWARD ನಲ್ಲಿ ವಿಜಯಿಯಾಗಿ 10,೦೦೦/- ನಗದು ಬಹುಮಾನ ಗಳಿಸಿದ ಸಾಧನೆ ಇವರದು. ಇತ್ತೀಚೆಗೆ ಮೂಡಬಿದ್ರೆ ಆಳ್ವಾಸ್ ಸಂಸ್ಥೆಯಲ್ಲಿ ಜರುಗಿದ ಅಂತಾರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿಯಲ್ಲಿ ನಡೆದ IMAP ಸೈನ್ಸ್ ಫೇರ್‌ಲ್ಲಿ ಭಾಗವಹಿಸಿ, ಚಿನ್ನದ ಪದಕ ಹಾಗೂ ನಗದು ಬಹುಮಾನವನ್ನು ಪಡೆದಿರುತ್ತಾರೆ. ಇವರ ಈ ಎಲ್ಲಾ ಸಾಧನೆಗಳನ್ನು ಗುರುತಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕರ್ನಾಟಕ ಕೊಡಮಾಡುವ ” ಕೆಳದಿ ಚೆನ್ನಮ್ಮ” ಪ್ರಶಸ್ತಿಗೆ ಕೂಡಾ ಆಯ್ಕೆಯಾಗಿರುವ ಹೆಮ್ಮೆ ಈಕೆಯದ್ದು. ಹಲವು ಸಾಧನೆಗಳನ್ನು ಮಾಡಿದ ಸಾಧಕಿ ಧನ್ಯಶ್ರೀಗೆ ಗಣ್ಯರೆಲ್ಲರ ಸಮಕ್ಷಮದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಸಿಂಧೂ ವಿ.ಜಿ. ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿ ಸಂಚಾಲಕ ಭರತ್ ಪೈ, ಖಜಾಂಚಿ ಅಶೋಕ್ ಪ್ರಭು ಹಾಗೂ ಸದಸ್ಯರಾದ ಶಂಕರಿ ಶರ್ಮ, ಪ್ರೀತಿ ಶಣೈ, ಪ್ರಕಾಶ್ ಚಂದ್ರ, ನಿರೀಕ್ಷಿತ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here