ಮರಿಗಳನ್ನು ಸೇರಿದ ತಾಯಿ ಶ್ವಾನ- ಸಂತೃಪ್ತಿಯ ನಗು ಬೀರಿದ ಸಂತೋಷ್‌ ರೈ

0

(ಬಂಪರ್‌ನಲ್ಲಿ ಸಿಲುಕಿಕೊಂಡು 70ಕೀ.ಮೀ ಸಂಚರಿಸಿ ಬದುಕುಳಿದ ಶ್ವಾನದ ಮುಂದುವರಿದ ಭಾಗ)

ಪುತ್ತೂರು: ಕಾರಿನ ಬಂಪರ್ ಒಳಗೆ ಸಿಲುಕಿ 70 ಕಿಲೋಮೀಟರ್ ಸಾಗಿ ಬದುಕಿ ಬಂದ ಶ್ವಾನವೊಂದರ ಸುದ್ದಿಯೊಂದು ಇತ್ತೀಚಿಗೆ ಭಾರೀ ವೈರಲ್ ಆಗಿತ್ತು. ತನ್ನ ಮರಿಗಳಿಂದ ಬೇರ್ಪಟ್ಟ ಆ ಶ್ವಾನವನ್ನು ಹೇಗಾದರೂ ಮಾಡಿ ಮತ್ತೆ ಮರಿಗಳೊಂದಿಗೆ ಸೇರಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಜನರೂ ಆಗ್ರಹಿಸಿದ್ದರು. ಇದೀಗ ಈ ಶ್ವಾನ ಮತ್ತೆ ಮರಿಗಳನ್ನು ಸೇರಿದೆ.


ಸುಳ್ಯ ಸಮೀಪದ ಬಳ್ಪ ಉಪ ವಲಯ ಅರಣ್ಯಾಧಿಕಾರಿಯಾಗಿರುವ ಸಂತೋಷ್ ರೈಯವರು ವಾಸವಿದ್ದ ಅರಣ್ಯ ಇಲಾಖೆಗೆ ಸಂಬಂಧಪಟ್ಟ ವಸತಿಗೃಹಕ್ಕೆ ಈ ಶ್ವಾನವು ನಿತ್ಯ ಬರ್ತಾ ಇತ್ತು. ಅದಕ್ಕೆ ಸಂತೋಷ್ ರೈ ಮತ್ತು ಅವರ ಪುಟ್ಟ ಮಗಳು ಸಾನ್ವಿ ನಿತ್ಯ ಆಹಾರವನ್ನೂ ಹಾಕುತ್ತಿದ್ದರು. ಈ ನಾಯಿಗೆ ಪುಟ್ಟ ಮರಿಗಳೂ ಇದ್ದವು. ಆದರೆ ಬಳ್ಪದಲ್ಲಿ ರಸ್ತೆ ಅಪಘಾತವಾಗಿ ಕಾರಿನ ಬಂಪರ್ ಒಳಗೆ ಸೇರಿದ ಶ್ವಾನ ಸುಮಾರು 70 ಕಿ.ಮಿ ದೂರದ ಪುತ್ತೂರಿಗೆ ಸೇರಿತ್ತು. ಇತ್ತ ಕಡೆ ಶ್ವಾನ ನಾಪತ್ತೆಯಾಗಿರುವ ಕುರಿತು ಸಂತೋಷ್ ರೈ ಅವರಿಗೆ ಮಾಹಿತಿ ತಿಳಿದು ಮಾರನೆ ದಿನ ಶ್ವಾನ ಪುತ್ತೂರಿಗೆ ಸೇರಿದ ವಿಚಾರವೂ ತಿಳಿಯಿತು. ಅವರ ಮಗಳು ಸಾನ್ವಿ ಕೂಡಾ ಶ್ವಾನವನ್ನು ಮತ್ತೆ ಮನೆಗೆ ತರುವಂತೆ ಒತ್ತಾಯಿಸಿದ ಹಿನ್ನಲೆಯಲ್ಲಿ ಸಂತೋಷ್ ರೈ ಅವರು ಪುತ್ತೂರಿಗೆ ಬಂದು ಶ್ವಾನಕ್ಕಾಗಿ ಹುಡುಕಾಡಿ ಮನೆಯೊಂದರ ಬಳಿ ಇರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ತೆರಳಿ ಶ್ವಾನವನ್ನು ಮತ್ತೆ ಅದರ ಮರಿಗಳೊಂದಿಗೆ ಸೇರಿಸಿದ್ದಾರೆ.
ಮರಿಗಳಿಂದ ಅಗಲಿದ ತಾಯಿ ಶ್ವಾನ ಮತ್ತೆ ಮರಿಗಳನ್ನು ಸೇರಿದೆ.

LEAVE A REPLY

Please enter your comment!
Please enter your name here