ಪುತ್ತೂರು: ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಪ್ರತಿಷ್ಟಿತ ಸಹಕಾರಿ ಸಂಸ್ಥೆ, ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಇದರ ಸಂಯುಕ್ತ ಆಶ್ರಯದಲ್ಲಿ 10 ರಿಂದ 12 ರ ತನಕ 3 ದಿನಗಳ ಕಾಲ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆಯಲಿರುವ 5ನೇ ’ಕೃಷಿ ಯಂತ್ರ ಮೇಳ 2023’ ಹಾಗೂ ’ಕನಸಿನ ಮನೆ’ ಎನ್ನುವ ಬೃಹತ್ ಪ್ರದರ್ಶನದ ಪ್ರಚಾರದ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ಮತ್ತು ವಿವೇಕಾನಂದ ವಿದ್ಯಾಸಂಸ್ಥೆಯ ವತಿಯಿಂದ ಆಕರ್ಷಕ ಸ್ತಬ್ಧಚಿತ್ರದೊಂದಿಗೆ ಜಾಥಾ ಕಾರ್ಯಕ್ರಮ ಫೆ. 8ರಂದು ನಡೆಯಿತು.
ಆರಂಭದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕುಡ್ಗಿ ಅವರು ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಬಳಿ ಕ್ಯಾಂಪ್ಕೋ ಸ್ಥಾಪಕರಾದ ವಾರಣಾಸಿ ಸುಬ್ರಾಯ ಭಟ್ ಅವರ ಭಾವಚಿತ್ರದ ಮುಂದೆ ಜಾಥಾವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಬಳಿಕ ದರ್ಬೆ ವೃತ್ತದಲ್ಲಿ ಕ್ಯಾಂಪ್ಕೋ ಧ್ವಜವನ್ನು ವಿವೇಕಾನಂದ ವಿದ್ಯಾಸಂಸ್ಥೆಯ ಮುಖ್ಯಸ್ಥರಿಗೆ ಹಸ್ತಾಂತರಿಸುವ ಮೂಲಕ ಅಧಿಕೃತ ಜಾಲನೆ ನೀಡಿದರು. ಜಾಥಾವು ಕೂರ್ನಡ್ಕದಿಂದ ದರ್ಬೆ ವೃತ್ತವಾಗಿ ಮುಖ್ಯರಸ್ತೆಯಲ್ಲಿ ಸಾಗಿ ಕಿಲ್ಲೆ ಮೈದಾನದಲ್ಲಿ ಸಮಾಪನಗೊಂಡಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ.ಕೃಷ್ಣ ಭಟ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕುಡ್ಗಿ,ವ್ಯವಸ್ಥಾಪಕ ನಿರ್ದೇಶಕ ಎಚ್.ಎಮ್.ಕೃಷ್ಣ ಕುಮಾರ್, ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ರಾಘವೇಂದ್ರ ಭಟ್ ಕೆದಿಲ, ದಯಾನಂದ ಹೆಗ್ಡೆ, ಎಂ.ಡಿ. ಕೃಷ್ಣಕುಮಾರ್, ಕೃಷಿ ಯಂತ್ರ ಮೇಳ ಕಾರ್ಯಕ್ರಮದ ಆಯೋಜಕ ರವಿಕೃಷ್ಣ ಕಲ್ಲಾಜೆ, ವಿವೇಕಾನಂದ ಸಂಸ್ಥೆಯ ವಿಶ್ವಾಸ್ ಶೆಣೈ, ಟಿ.ಎಸ್ ಸುಬ್ರಹ್ಮಣ್ಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ಸತ್ಯನಾರಾಯಣ ಭಟ್, ಮುರಳಿಧರ ಭಟ್,ನಿರ್ದೇಶಕರಾದ ಸಂತೋಶ್ ಕುತ್ತಮೊಟ್ಟೆ,ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ಕೊಂಕೋಡಿ ಕೃಷ್ಣನಾರಾಯಣ ಭಟ್ ಸಹಿತ ಹಲವಾರು ಮಂದಿ ಪ್ರಮುಖರು ಹಾಗು ಕ್ಯಾಂಪ್ಕೋ ಸಿಬ್ಬಂದಿಗಳು, ವಿವೇಕಾನಂದ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡರು.