ನಾಳೆ(ಫೆ.9) ಮುಂಡೂರು ಹಾ.ಉ.ಸ. ಸಂಘದ ಅಮೃತಧಾರ ವಿಸ್ತೃತ ಕಟ್ಟಡದ ಪ್ರವೇಶೋತ್ಸವ, ಸಾಂದ್ರಶೀತಲೀಕರಣ ಘಟಕದ ಉದ್ಘಾಟನೆ

0

ಪುತ್ತೂರು: ಸುಮಾರು 37 ವರ್ಷಗಳ ಇತಿಹಾಸವಿರುವ ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ’ಅಮೃತಧಾರ’ ವಿಸ್ತೃತ ಕಟ್ಟಡದ ಪ್ರವೇಶೋತ್ಸವ ಹಾಗೂ ’ಸಾಂದ್ರಶೀತಲೀಕರಣ’ ಘಟಕದ ಉದ್ಘಾಟನೆಯು ಫೆ.9ರಂದು ಬೆಳಿಗ್ಗೆ10.30ಕ್ಕೆ ನಡೆಯಲಿದೆ.

ಸರ್ವೆ ಹಾಗೂ ಮುಂಡೂರು ಗ್ರಾಮಗಳ ವ್ಯಾಪ್ತಿಯ ರೈತರಿಗೆ ಕೃಷಿಯ ಜೊತೆಗೆ ಪಶುಸಂಗೋಪನೆಯನ್ನು ವ್ಯವಹಾರಿಕವಾಗಿ ಬಳಸುವ ಉದ್ದೇಶದಿಂದ 1987ರಲ್ಲಿ ಸಂಘವು ಪ್ರಾರಂಭಗೊಂಡಿತು. ಸಂಘವು ಬೆಳೆದು ಮುಂದೆ ಮಂಜೂರುಗೊಂಡ ಸ್ವಂತ ನಿವೇಶನದಲ್ಲಿ ಅಮೃತಧಾರ ಕಟ್ಟಡ ನಿರ್ಮಿಸಿ 1996ರಲ್ಲಿ ಉದ್ಘಾಟನೆಗೊಂಡಿದೆ. ಇದೀಗ ಅಮೃತಧಾರ ಕಟ್ಟಡದ ವಿಸ್ತರಣೆಯೊಂದಿಗೆ ದ.ಕ ಹಾಲು ಉತ್ಪಾದಕರ ಒಕ್ಕೂಟದ ಸಹಕಾರದಿಂದ ಸಾಂದ್ರಶೀತಲೀಕರಣ ಘಟಕವನ್ನು ನಿರ್ಮಿಸಲಾಗಿದೆ.

ಅಮೃತಧಾರ ವಿಸ್ತೃತ ಕಟ್ಟಡವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಸಾಂದ್ರಶೀತಲೀಕರಣ ಘಟಕವನ್ನು ಉದ್ಘಾಟಿಸಲಿದ್ದಾರೆ. ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ನಾಮಫಲಕ ಅನಾವರಣಗೊಳಿಸಲಿದ್ದಾರೆ. ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ದ.ಕ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ನಿರಂಜನ್ ಬಾವಂತಬೆಟ್ಟು, ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್, ಸವಿತಾ ಎನ್.ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಿ. ಅಶೋಕ್, ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಪುರಂದರ ಗೌಡ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ಆರ್ ರಾವ್, ದ.ಕ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ, ಉಪ ವ್ಯವಸ್ಥಾಪಕ ಡಾ.ಡಿ.ಆರ್ ಸತೀಶ್ ರಾವ್, ಬಿ.ಎಂಸಿ ಉಪ ವ್ಯವಸ್ಥಾಪಕ ಡಾ.ಕೇಶವ ಸುಳಿ, ಪಶು ವೈದ್ಯಾಧಿಕಾರಿ ಡಾ.ಅನುದೀಪ್ ಹಾಗೂ ವಿಸ್ತರಣಾಧಿಕಾರಿ ನಾಗೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್, ಉಪಾಧ್ಯಕ್ಷ ಉಮೇಶ್ ಗುತ್ತಿನಪಾಲು, ಕಾರ್ಯದರ್ಶಿ ಜಿನ್ನಪ್ಪ ಸಾಲ್ಯಾನ್ ಹಾಗೂ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here