ಜೆ. ಇ. ಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

0

ಉಪ್ಪಿನಂಗಡಿ: 2022-23ರ ಜೆ. ಇ. ಇ ಪ್ರವೇಶ ಪರೀಕ್ಷೆಯಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಆಶಿಕಾ ಎಮ್, ಲಿಖಿನ್ ಎಚ್ ಎಸ್, ಜೋಯಿಸ್ ಅನ ಜೆಕೋಬ್, ಧನರಾಜ್, ಲಾವಣ್ಯ ಪಿ ಎಮ್, ಗೌಡ ಜೀವನ್ ಕಾರಿಯಪ್ಪ ಮತ್ತು ವೈಭವಿ ಕೆ ಇವರು ಉತ್ತಮ ಸಾಧನೆಗೈದಿರುತ್ತಾರೆ. ದೇಶದಾದ್ಯಂತ ನಡೆದ ಈ ಪರೀಕ್ಷೆಯಲಿ ಒಟ್ಟು 8.60 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಆಶಿಕಾ ಎಮ್ 92.31 ಪರ್ಸಂಟೈಲ್, ಲಿಖಿನ್ ಎಚ್ ಎಸ್ – 92 ಪರ್ಸಂಟೈಲ್, ಜೋಯಿಸ್ ಅನ ಜೆಕೋಬ್ 90.35 ಪರ್ಸಂಟೈಲ್ , ಧನರಾಜ್ 90 ಪರ್ಸಂಟೈಲ್, ಲಾವಣ್ಯ ಪಿ ಎಮ್ ೮೮ ಪರ್ಸಂಟೈಲ್, ಗೌಡ ಜೀವನ್ ಕಾರಿಯಪ್ಪ – 82ಪರ್ಸಂಟೈಲ್ ಹಾಗೂ ವೈಭವಿ ಕೆ 85 ಪರ್ಸಂಟೈಲ್ ಗಳಿಸಿದ್ದಾರೆ.

ಈ ಫಲಿತಾಂಶವು ಅತ್ಯಂತ ಆಶಾದಾಯಕವಾಗಿದ್ದು ಸಂಸ್ಥೆಯ ಒಟ್ಟು ಪರೀಕ್ಷೆ ಬರೆದ 18 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿರುವುದು ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಹಿರಿಮೆಯಾಗಿದೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ಜೆ. ಇ. ಇ ಅರ್ಹತೆಯನ್ನು ಪಡೆಯುತ್ತಿದ್ದು ಪ್ರಸಕ್ತ ಸಾಲಿನಲ್ಲೂ ಈ ವಿದ್ಯಾರ್ಥಿಗಳು ಪ್ರಶಸಂಸನೀಯ ಸಾಧನೆಯನ್ನು ಮಾಡಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎಚ್. ಕೆ. ಪ್ರಕಾಶ್ ರವರು ಈ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here