ಶಿರಾಡಿ: ಬೈಕ್‌ಗಳ ನಡುವೆ ಡಿಕ್ಕಿ, ಸವಾರನಿಗೆ ಗಾಯ

0

ನೆಲ್ಯಾಡಿ: ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಒಂದು ಬೈಕ್‌ನ ಸವಾರ ಹಾಗೂ ಸಹಸವಾರ ಗಾಯಗೊಂಡಿರುವ ಘಟನೆ ಫೆ.5ರಂದು ರಾತ್ರಿ ಶಿರಾಡಿ ಗ್ರಾಮದ ಮಿತ್ತನಾಜೆ ಎಂಬಲ್ಲಿ ನಡೆದಿದೆ.


ಬೈಕ್ ಸವಾರ ಸಿಜೋ ಜೆ(52ವ.)ಹಾಗೂ ಸ ಸಹವಾರ ಶಿಂಡೋ ಎಂಬವರು ಗಾಯಗೊಂಡವರಾಗಿದ್ದಾರೆ. ಮೂಲತ: ಕೇರಳ ನಿವಾಸಿಯಾಗಿರುವ ಸಿಜೋ ಅವರು ಸುಮಾರು ಒಂದೂವರೇ ವರ್ಷದಿಂದ ಕಡಬ ತಾಲೂಕು ಶಿರಾಡಿ ಗ್ರಾಮದ ಶಿರ್ವತಡ್ಕ ಎಂಬಲ್ಲಿ ಶಾಲಿ ಎಂಬವರ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದು ಫೆ.5ರಂದು ರಾತ್ರಿ ತನ್ನ ದ್ವಿಚಕ್ರ ವಾಹನ (ಕೆಎ-೨೧-ಇಡಿ-೦೨೪೨)ದಲ್ಲಿ ಶಿಂಡೋ ಎಂಬವರನ್ನು ಕುಳ್ಳಿರಿಸಿಕೊಂಡು ಶಿರ್ವತಡ್ಕ ಕಡೆಯಿಂದ ಶಿರಾಡಿ ಪೇಟೆಗೆ ಬರುತ್ತಿದ್ದ ವೇಳೆ ಮಿತ್ತನಾಜೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಶಿರಾಡಿ ಕಡೆಯಿಂದ ಪದಂಬಳ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ(ಕೆಎ-೨೧-ಎಲ್-೫೯೬೮)ದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಘಟನೆಯಲ್ಲಿ ಸಿಜೋ ಅವರ ಕಾಲು, ಕೈಗಳಿಗೆ ಗಾಯವಾಗಿದೆ. ಸಹಸವಾರ ಶಿಂಡೋ ಹಾಗೂ ಇನ್ನೊಂದು ಬೈಕ್‌ನ್ಲಿದ್ದ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದೆ. ಘಟನೆ ಕುರಿತಂತೆ ಸಿಜೋ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here