ಫೆ. 10-13: ಮೊಡಪ್ಪಾಡಿ ಗುತ್ತು ಶ್ರೀ ಜಠಾಧಾರಿ ದೈವದ ಮಹಿಮೆ, ಪರಿವಾರ ದೈವಗಳ ನೇಮೋತ್ಸವ

0

ಪುತ್ತೂರು: ಮೊಡಪ್ಪಾಡಿ ಗುತ್ತು ತರವಾಡು ಮನೆ ಮತ್ತು ಶ್ರೀ ಜಠಾಧಾರಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಜಠಾಧಾರಿ ಮಹಿಮೆ ಮತ್ತು ಪರಿವಾರ ದೈವಗಳ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ. 10ರಿಂದ 13 ರವರೆಗೆ ನಡೆಯಲಿದೆ.


ಫೆ. 10 ರಂದು ಸಂಜೆ ಮಹಾಸುದರ್ಶನ ಹೋಮ, ಫೆ. 11 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ನಾಗತಂಬಿಲ, ದೈವಗಳಿಗೆ ತಂಬಿಲ ಸೇವೆ ನಡೆದು ಶ್ರೀ ವೆಂಕಟರಮಣ ದೇವರ ಹರಿಸೇವೆ ನಡೆಯಲಿದೆ. ರಾತ್ರಿ ಶ್ರೀ ಜಠಾಧಾರಿ ಹಾಗೂ ಪರಿವಾರ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಶ್ರೀ ಜಠಾಧಾರಿ ದೈವದ ಮಹಿಮೆ ನಡೆಯಲಿದೆ.


ಫೆ. 12 ರಂದು ಬೆಳಿಗ್ಗೆ ಪಂಜುರ್ಲಿ ದೈವದ ನೇಮ, ಮಧ್ಯಾಹ್ನ ಧೂಮಾವತಿ ದೈವದ ನೇಮ, ಸಂಜೆ ಬ್ರಾಂತಾಯ ಹಾಗೂ ಗುಳಿಗ ದೈವಗಳ ನೇಮ ನಡೆಯಲಿದೆ.


ಫೆ. 13 ರಂದು ರಾತ್ರಿ ಶ್ರೀ ಜಠಾಧಾರಿ ದೈವದ ಭಂಡಾರ ತೆಗೆದು ಅನ್ನಸಂತರ್ಪಣೆ ಜರಗಿ ಬಳಿಕ ಶ್ರೀ ಜಠಾಧಾರಿ ದೈವದ ಹರಕೆ ಮಹಿಮೆ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ದೈವಗಳ ಪ್ರಸಾದ ಸ್ವೀಕರಿಸುವಂತೆ ಮೊಡಪ್ಪಾಡಿ ಗುತ್ತು ತರವಾಡು ಶ್ರೀ ಜಠಾಧಾರಿ ದೈವ ಹಾಗೂ ಪರಿವಾರ ದೈವಗಳ ದೈವಸ್ಥಾನದ ಯಜಮಾನ ತಿಮ್ಮಪ್ಪ ರೈ ಮೊಡಪ್ಪಾಡಿ ಗುತ್ತು ಹಾಗೂ ಮೊಡಪ್ಪಾಡಿ ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here