ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯ ವಿಸ್ತರಿತ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯು ಫೆ. 9 ರಂದು ಜರಗಿತು. ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯರವರು ಪೂಜಾ ವಿಧಿ ವಿಧಾನವನ್ನು ನೇರವೇರಿಸಿದರು.
ಸವಣೂರಿನ ಅಭಿವೃದ್ಧಿಗೆ ಪೂರಕ- ಗಣೇಶ್ ನಿಡ್ವಣ್ಣಾಯ
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲರವರು ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆಯನ್ನು ನೇರವೇರಿಸಿ, ಮಾತನಾಡಿ ಸುಮಾರು 90 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಂಘದ ವಿಸ್ತರಿತ ಕಟ್ಟಡವು ಒಂದು ವರ್ಷದೊಳಗೆ ಪೂರ್ಣಗೊಂಡು, ಲೋಕಾರ್ಪಣೆಗೊಳ್ಳಲಿದೆ. ಈ ಕಟ್ಟಡ ನಿರ್ಮಾಣದ ಮೂಲಕ ಸವಣೂರಿನ ಅಭಿವೃದ್ಧಿಗೆ ಮತ್ತಷ್ಟು ಪೂರಕವಾಗಲಿದೆ ಎಂದು ಹೇಳಿ, ಸಂಘದ ಅಭಿವೃದ್ಧಿಯಲ್ಲಿ ಎಲ್ಲರೂ ಮತ್ತಷ್ಟು ಸಹಕಾರವನ್ನು ನೀಡಿ ಎಂದು ಹೇಳಿದರು.
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೆಶಕರುಗಳಾದ ಉದಯ ರೈ ಮಾದೋಡಿ, ಕರುಣಾಕರ ಪೂಜಾರಿ ಪಟ್ಟೆ, ತಿಮ್ಮಪ್ಪ ಗೌಡ ಮುಂಡಾಲ, ಮಹಾಬಲ ಶೆಟ್ಟಿ ಕೊಮ್ಮಂಡ, ಪ್ರಕಾಶ್ ರೈ ಸಾರಕರೆ, ಸೋಮನಾಥ ಕನ್ಯಾಮಂಗಲ, ನಿರ್ಮಾಲ ಕೇಶವ ಗೌಡ ಅಮೈ, ವೇದಾವತಿ ಕೆಡೆಂಜಿ, ತನಿಯಪ್ಪ ನಾಯ್ಕ ಕಾರ್ಲಾಡಿ, ಚೇತನ್ ಕುಮಾರ್ ಕೋಡಿಬೈಲು, ಎಸ್‌ಸಿಡಿಸಿಸಿ ಬ್ಯಾಂಕ್ ಪ್ರತಿನಿಧಿ ವಸಂತ್ ಎಸ್, ಸವಣೂರು ಜಿನ ಬಸದಿಯ ಅರ್ಚಕ ಶ್ರೇಯಾಂಸ್ ಇಂದ್ರ, ಸಂಘದ ಮಾಜಿ ಅಧ್ಯಕ್ಷರುಗಳಾದ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ, ಶೀನಪ್ಪ ಗೌಡ ಬೈತಡ್ಕ, ಪಿ.ಡಿ.ಗಂಗಾಧರ್ ರೈ ದೇವಸ್ಯ, ಚೆನ್ನಪ್ಪ ಗೌಡ ನೂಜಿ, ಮಾಜಿ ನಿರ್ದೆಶಕರುಗಳಾದ ಸವಣೂರು ಎನ್ ಸುಂದರ ರೈ, ನಾರಾಯಣ ಗೌಡ ಪೂವ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಎ.ಕೃಷ್ಣ ರೈ ಪುಣ್ಚಪ್ಪಾಡಿ, ಕೃಷ್ಣಕುಮಾರ್ ರೈ ದೇವಸ್ಯ, ಸವಣೂರು ಗ್ರಾ.ಪಂ, ಅಧ್ಯಕ್ಷೆ ರಾಜೀವಿ ಶೆಟ್ಟಿ ಕೆಡೆಂಜಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೂಜಾಜೆ, ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಸದಸ್ಯರುಗಳಾದ ಗಿರಿಶಂಕರ ಸುಲಾಯ ದೇವಸ್ಯ, ತೀರ್ಥರಾಮ್ ಕೆಡೆಂಜಿ, ರಫೀಕ್ ಎಂ.ಎ, ಮಾಂತೂರು, ಅಬ್ಬುಲ್ ರಜಾಕ್ ಕೆನರಾ, ಮಾಜಿ ಸದಸ್ಯ ಸತೀಶ್ ಬಲ್ಯಾಯ, ಸವಣೂರು ಬೆನಸ ರಬ್ಬರ್ ಸೊಸೈಟಿ ಅಧ್ಯಕ್ಷ ಕೆಡೆಂಜಿಗುತ್ತು ಪ್ರವೀಣ್ ಕುಮಾರ್, ಕಾರ‍್ಯದರ್ಶಿ ಅಚ್ಚುತ ಎ, ಬೆಳಂದೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾರಾಯಣ, ಸದಸ್ಯರುಗಳಾದ ಮೋಹನ್ ಅಗಳಿ, ಜಯಂತ್ ಅಭೀರ, ಮಾಜಿ ಸದಸ್ಯ ಸಂಪತ್ ಕುಮಾರ್ ರೈ ಪಾತಾಜೆ, ಎಸ್‌ಸಿಡಿಸಿಸಿ ಬ್ಯಾಂಕ್ ಸವಣೂರು ಶಾಖಾ ಮೇನೇಜರ್ ವಿಶ್ವನಾಥ್, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸವಣೂರು ಶಾಖಾ ಮೇನೇಜರ್ ಇಂದಿರಾ ಎಚ್ ಶೆಟ್ಟಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾನೂನು ಸಲಹೆಗಾರರಾದ ಮಹೇಶ್ ಕೆ.ಸವಣೂರು, ಸೂರ‍್ಯ ನಾರಾಯಣ ಭಟ್, ಪ್ರವೀಣ್ ಬಂಬಿಲ,
ಸವಣೂರು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅರ್ತಿಕೆರೆ, ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಬಾಲಕೃಷ್ಣ ರೈ ದೇವಸ್ಯ, ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಯಶವಂತ್ ಕಳುವಾಜೆ, ಮಾಸ್ ಸಂಸ್ಥೆಯ ಮ್ಯಾನೇಜರ್ ಯತೀಶ್, ಬೆಳಿಯಪ್ಪ ಗೌಡ ಚೌಕಿಮಠ, ಯತೀಂದ್ರ ಶೆಟ್ಟಿ ಮಠ, ಸವಣೂರು ಹಾಲು ಉತ್ವಾದಕರ ಸಹಕಾರ ಸಂಘದ ನಿರ್ದೇಶಕರುಗಳಾದ ಸುಪ್ರೀತ್ ರೈ ಖಂಡಿಗ, ಪ್ರಜ್ವಲ್ ಕೆ.ಆರ್ ಕೋಡಿಬೈಲು, ದೇವಪ್ಪ ಗೌಡ ಕನ್ನಡಕುಮೇರು, ಮಾಸ್ ಸಂಸ್ಥೆಯ ಮ್ಯಾನೇಜರ್ ಯತೀಶ್, ಅನ್ನಪೂರ್ಣಪ್ರಸಾದ್ ರೈ ಬೈಲಾಡಿ, ದುರ್ಗಾಪ್ರಸಾದ್ ಕಲ್ಪತ್ತಾರು, ಜಯಪ್ಪ ಗೌಡ, ಸಂತೋಷ್ ಶೆಟ್ಟಿ ಕಲಾಯಿ, ಸತೀಶ್ ಮಾರ್ಕಾಜೆ, ಬಾಲಚಂದ್ರ ರೈ ಕೆರೆಕೋಡಿ,ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಬಾಲಕೃಷ್ಣ, ಮಹಾಲಿಂಗ ಭಟ್ ಕುಕ್ಕುಜೆ, ರಾಮ ಶರ್ಮ, ಕೆ.ಟಿ.ಭಟ್, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಕಾರ‍್ಯದರ್ಶಿ ಸಂಕಪ್ಪ ರೈ ಕಲಾಯಿ, ಕಟ್ಟಡದ ಗುತ್ತಿಗೆದಾರರಾದ ಪುತ್ತೂರು ದಕ್ಷ ಕನ್‌ಸ್ಟ್ರಕ್ಷನ್‌ನ ಇಂಜಿನಿಯರ್ ರವೀಂದ್ರ ರೈ ಸಹಿತ ನೂರಾರು ಮಂದಿ ಭಾಗವಹಿಸಿದರು.
ಎಲ್ಲರ ಸಹಕಾರ ಅಗತ್ಯ- ಚಂದ್ರಶೇಖರ್
ಸವಣೂರು ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಸಂಘದ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಪ್ರಧಾನ ಕಚೇರಿಯ ವಿಸ್ತಾರಿತ ಕಟ್ಟಡ ನಿರ್ಮಾಣ ಆಗುವುದರಿಂದ ಸವಣೂರಿನ ಅಭಿವೃದ್ಧಿಗೆ ಕೊಡುಗೆಯಾಗಲಿದೆ. ವಿಸ್ತರಿತ ಕಟ್ಟಡದಲ್ಲಿ ಜಿನಸು ಅಂಗಡಿ, ಡಿಜಿಟಲ್ ಸೇವಾ ಕೇಂದ್ರ, ಸರ್ಜಿಕಲ್ ಐಟಂ ಮಾರಾಟ ಸೇರಿದಂತೆ ತಳ ಅಂತಸ್ತಿನಲ್ಲಿ 5 ಅಂಗಡಿ, ಮೇಲಿನ ಅಂತಸ್ತಿನಲ್ಲಿ 5 ಅಂಗಡಿ ಕೋಣೆ, ಆಡಳಿತ ಮಂಡಳಿಯ ಸಭಾ ಭವನದ ಹಾಲ್ ಇರುತ್ತದೆ ಎಂದು ಹೇಳಿ ಎಲ್ಲರೂ ಸಹಕಾರವನ್ನು ಕೋರಿದರು.
ಸಂಘದ ಉಪ ಕಾರ‍್ಯನಿರ್ವಹಣಾಧಿಕಾರಿ ಜಲಜಾ ಎಚ್ ರೈ, ಸಂಘದ ಬೆಳಂದೂರು ಶಾಖಾ ವ್ಯವಸ್ಥಾಪಕ ಪಕೀರ ಹಾಗೂ ಸಂಘದ ಸಿಬ್ಬಂದಿಗಳು ಕಾರ‍್ಯಕ್ರಮದಲ್ಲಿ ಸಹಕರಿಸಿದರು.
ಒಂದು ವರ್ಷದೊಳಗೆ ಲೋಕರ್ಪಣೆ, ವಿಸ್ತರಿತ ಕಟ್ಟಡದಲ್ಲಿ 10 ಅಂಗಡಿ ಕೋಣೆಗಳು
ಸವಣೂರು ಕೃಷಿ ಪತ್ತಿನ ಸಹಕಾರ ಸಂಘದ ವಿಸ್ತರಿತ ಕಟ್ಟಡವು 90 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಒಂದು ವರ್ಷದೊಳಗೆ ಲೋಕಾರ್ಪಣೆಗೊಳ್ಳಲಿದೆ. ಈ ಕಟ್ಟಡದಲ್ಲಿ ಸುಸಜ್ಜಿತವಾದ ಜಿನಸು ಅಂಗಡಿ, ಡಿಜಿಟಲ್ ಸೇವಾ ಕೇಂದ್ರ, ಸರ್ಜಿಕಲ್ ಐಟಂ ಮಾರಾಟ ಕೇಂದ್ರ ಸೇರಿದಂತೆ ಒಟ್ಟು 10 ಅಂಗಡಿ ಕೋಣೆಗಳು ತೆರೆಯಲಿದೆ. ಪುತ್ತೂರು ದಕ್ಷ ಕನ್‌ಸ್ಟ್ರಕ್ಷನ್‌ನ ಇಂಜಿನಿಯರ್ ರವೀಂದ್ರ ರೈರವರು ಕಟ್ಟಡದ ಗುತ್ತಿಗೆದಾರರಾಗಿರುತ್ತಾರೆ. ಸವಣೂರಿನ ಅಭಿವೃದ್ಧಿಗೆ ಪೂರಕವಾಗಿ ಕಟ್ಟಡ ನಿರ್ಮಾಣವಾಗಲಿದೆ. ಸಂಘದ ಅಭಿವೃದ್ದಿಯಲ್ಲಿ ಎಲ್ಲರ ಸಹಕಾರ ಅತೀ ಅಗತ್ಯ.
ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ
ಸವಣೂರು ಕೃಷಿ ಪತ್ತಿನ ಸಹಕಾರ ಸಂಘ