ಮುಂಡೂರು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ಸನ್ಮಾನ

0

ಮುಂಡೂರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಅಧ್ಯಕ್ಷತೆ ವಹಿಸಿದ್ದರು. ದತ್ತಿನಿಧಿ ಪ್ರಾಯೋಜಕರಾದ ಉದಯಕುಮಾರ್ ಪಜಿಮಣ್ಣು ದೀಪ ಪ್ರಜ್ವಲನ ಮಾಡಿ ಉದ್ಘಾಟಿಸಿದರು. ಮುಂಡೂರು ಶಾಲಾ ಹಿರಿಯ ವಿದ್ಯಾರ್ಥಿ ಎಂ.ಪಿ ಜಯರಾಮ್ ಅವರು ಸ್ಥಾಪನೆ ಮಾಡಿರುವ ಪಜಿಮಣ್ಣು ಶ್ರೀನಿವಾಸ ರಾವ್ ಕಾವೇರಮ್ಮ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನೀಡಲಾಗುವ ವಿದ್ಯಾರ್ಥಿ ವೇತನವನ್ನು ಎಂ.ಪಿ ಜಯರಾಮ್ ಅವರ ಸಹೋದರ, ಟ್ರಸ್ಟಿನ ಅಧ್ಯಕ್ಷ ಎಂ.ಪಿ ಬಾಲಕೃಷ್ಣ ಅವರು ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಿದರು.

ಅತಿಥಿಗಳಾಗಿ ಎಸ್‌ಡಿಎಂಸಿ ಯ ನಾಮನಿರ್ದೇಶಿತ ಸದಸ್ಯರಾದ ಉಮೇಶ್ ಅಂಬಟ, ಗ್ರಾ.ಪಂ ಸದಸ್ಯ ದುಗ್ಗಪ್ಪ ಕಡ್ಯ, ಕ್ರೀಡಾ ಚಟುವಟಿಕೆಗಳ ಬಹುಮಾನದ ಪ್ರಾಯೋಜಕರಾದ ಕೃಷ್ಣರಾಜ ವೈಲಾಯ ಹಾಗೂ ಶಾಲಾ ಮುಖ್ಯ ಗುರು ವಿಜಯ ಪಿ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಟ್ರಸ್ಟ್‌ನ ಸ್ಥಾಪಕರಾದ ಶಾಲಾ ಹಿರಿಯ ವಿದ್ಯಾರ್ಥಿ ಎಂ ಪಿ ಜಯರಾಮರವರು ಮಧ್ಯಾಹ್ನದ ಭೋಜನ ವ್ಯವಸ್ಥೆಯ ಪ್ರಾಯೋಜಕರಾಗಿ ಸಹಕರಿಸಿದರು.

ಸನ್ಮಾನ-ಬಹುಮಾನ ವಿತರಣೆ
ಅಕ್ಷರ ದಾಸೋಹದ ಮುಖ್ಯ ಅಡುಗೆಯವರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಮುಖ್ಯ ಅಡುಗೆಯವರಾದ ಬೇಬಿ, ಪವರ್‌ಮ್ಯಾನ್‌ಗಳಾದ ರವಿಚಂದ್ರ ಹಾಗು ಸಂತೋಷ್ ವೇಗಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡಾ ಚಟುವಟಿಕೆಗಳು ಹಾಗೂ ಪಠ್ಯ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶಾಲಾ ಮುಖ್ಯ ಗುರು ವಿಜಯ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ಬಿ ವಂದಿಸಿದರು. ಸಹ ಶಿಕ್ಷಕಿ ನಾಗವೇಣಿ ಹಾಗೂ ಶಿಕ್ಷಕ ಅಬ್ದುಲ್ ಬಶೀರ್ ಕೆ ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು ದೈ.ಶಿ.ಶಿಕ್ಷಕಿ ಬಿ.ವನಿತ ಹಾಗೂ ಟಿಜಿಟಿ ಶಿಕ್ಷಕ ರವೀಂದ್ರ ಶಾಸ್ತ್ರಿ ಸಹಕರಿಸಿದರು. ಸಹ ಶಿಕ್ಷಕಿ ಶಶಿಕಲಾ ಹಾಗೂ ಜಿಪಿಟಿ ಶಿಕ್ಷಕಿ ಸಂಧ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here