ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈಯವರ ಜನ್ಮದಿನದ ಪ್ರಯುಕ್ತ ಫಿಲೋಮಿನಾ ಕಾಲೇಜಿಗೆ ರೂ.1 ಲಕ್ಷ ದೇಣಿಗೆ ಹಸ್ತಾಂತರ

0

ಪುತ್ತೂರು:ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ದೇಶಭಕ್ತ ಎನ್.ಎಸ್ ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈಯವರ 73ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿಗೆ ಫಿಲೋಮಿನಾ ಕಾಲೇಜಿನ ಕಂಪ್ಯೂಟರ್ ಶಿಕ್ಷಣ ನಿಧಿಗೆ ರೂ.1 ಲಕ್ಷ ಮೊತ್ತದ ದೇಣಿಗೆಯ ಚೆಕ್ ಅನ್ನು ಕಾಲೇಜಿನ ಪ್ರಾಂಶುಪಾಲರಾದ ವಂ|ಆಂಟನಿ ಪ್ರಕಾಶ್ ಮೊಂತೇರೊರವರಿಗೆ ಹಸ್ತಾಂತರಿಸಿದರು.

ಕಡಮಜಲು ಸುಭಾಶ್ ರೈಯವರ ಪುತ್ರ, ಆಮೇರಿಕದಲ್ಲಿ ಉದ್ಯೋಗಸ್ಥರಾಗಿರುವ ವಿಫುಲ್ ಎಸ್ ರೈಯವರು ತಮ್ಮ ತಂದೆ ವಿದ್ಯಾಭ್ಯಾಸ ಮಾಡಿರುವ ಫಿಲೋಮಿನಾ ಕಾಲೇಜಿಗೆ ತಂದೆಯ ಜನ್ಮದಿನದ ಪ್ರಯುಕ್ತ ಈ ದೇಣಿಗೆ ನೀಡಿ ಆದರ್ಶ ಮೆರೆದಿದ್ದಾರೆ. ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ರವರು ಕಾಲೇಜಿನ ಹಿರಿಯ ವಿದ್ಯಾರ್ಥಿ ಕಡಮಜಲು ಸುಭಾಶ್ ರೈಯವರ ಉತ್ತಮ ಗುಣವನ್ನು ಶ್ಲಾಘಿಸಿ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ, ಹಿರಿಯ ವಿದ್ಯಾರ್ಥಿ ಜೈರಾಜ್ ಭಂಡಾರಿ, ಉಪ ಪ್ರಾಂಶುಪಾಲ ಪ್ರೊ|ಗಣೇಶ್ ಭಟ್, ಅಧ್ಯಾಪಕ ವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here