ಆರ್ಲಪದವು : ಅಕ್ರಮ ಗೋ ಸಾಗಾಟಕ್ಕೆ ಹಿಂದೂ ಕಾರ್ಯಕರ್ತರಿಂದ ತಡೆ
ಸ್ಥಳಕ್ಕಾಗಮಿಸಿದ ಅರುಣ್ ಕುಮಾರ್ ಪುತ್ತಿಲ, ಚೆಕ್ ಪೋಸ್ಟ್ ನಿರ್ಮಿಸುವಂತೆ ಆಗ್ರಹ

0


ಪುತ್ತೂರು: ಅಕ್ರಮ ಗೋ ಸಾಗಾಟ ತಡೆದು ಜಾನುವಾರುಗಳನ್ನು ಹಿಂದೂ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆ ಆರ್ಲಪದವಿನಲ್ಲಿ ನಡೆದ ಬಗ್ಗೆ ತಿಳಿದು ಬಂದಿದೆ.

ಆಪೆ ವಾಹನದಲ್ಲಿ ಒಂದು ದನ ಮತ್ತು ಒಂದು ಗಂಡು ಕರುವನ್ನು ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದಾರೆ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ವಾಹನವನ್ನು ತಡೆದಿದ್ದು ಬಳಿಕ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲರವರಿಗೆ ಮಾಹಿತಿ ನೀಡಿದ್ದಾರೆ.

ಅರುಣ್ ಕುಮಾರ್ ಪುತ್ತಿಲರವರು ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿ, ದನಗಳನ್ನು ಪೊಲೀಸರಿಗೊಪ್ಪಿಸಲಾಗಿದ್ದು ಈ ಸ್ಥಳದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here