ಪುತ್ತೂರು ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್‌ನಿಂದ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ

0

ಪುತ್ತೂರು: ಪುತ್ತೂರು ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್ ವತಿಯಿಂದ ಹತ್ತನೇ ಕಾರ್ಯಕ್ರಮವಾಗಿ ಬಡರೂಗಿಗಳಿಗೆ, ಅಶಕ್ತರಿಗೆ, ಕ್ಯಾನ್ಸರ್ ಪೀಡಿತ, ಹಾಗೂ ಆಯ್ದ ಕುಟುಂಬಗಳಿಗೆ, ದಾನಿಗಳ ಸಹಕಾರದಿಂದ “ದಿನಸಿ ಸಾಮಗ್ರಿಗಳ ಕಿಟ್” ವಿತರಣಾ ಕಾರ್ಯಕ್ರಮ ಫೆ.೧೦ರಂದು ಪುತ್ತೂರಿನ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ನಡೆಯಿತು. ಮುಖ್ಯ ಅತಿಥಿ ಸುಮಂಗಲ ಶೆಣೈ ಮಾತನಾಡಿ ಸ್ವಾಮಿ ಕಾರ್ಯ ಸ್ವಕಾರ್ಯ. ಹಾಗೂ ಎಲೆಮರೆ ಕಾಯಿ ತರಹ ನಮಗೆ ಧನ ಸಹಾಯ ಮಾಡಿದ ಧಾನಿಗಳಿಗೆ ಶುಭಹಾರೈಸಿದರು. ವಕೀಲೆ ಹೀರಾ ಉದಯ್ ಮಾತನಾಡಿ ಪೂರ್ವಜನ್ಮಿ ಕೃತಂ ಪಾಪಂ ವ್ಯಾಧಿ ರೂಪಂ ಪಿಡಿತ ಎಂದು ಪುರಂದರದಾಸರ ಕೀರ್ತನೆ ಹೇಳಿ ಶುಭಹಾರೈಸಿದರು. ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್ ಅಧ್ಯಕ್ಷೆ ಸುಮಿತ್ರ ಎಸ್., ಖಜಾಂಜಿ ಕಾವ್ಯ, ಕಾರ್ಯದರ್ಶಿಗಳಾದ ರುಕ್ಮಯಾ ಕೆ. ಸಂಚಾಲಕ ಅವಿನಾಶ್, ಸದಸ್ಯರಾದ ಚೈತ್ರ, ಅಮಿತಾ, ಪ್ರಮೀಳಾ, ಶಾಂತಿ, ಉಪಸ್ಥಿತರಿದ್ದರು. ಗೌರವ ಸಲಹೆಗಾರ ಶಿವಶಂಕರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here