ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಗೊನೆಮುಹೂರ್ತ:ಫೆ. 18 ರಿಂದ ಫೆ. 20ರವರೆಗೆ ವರ್ಷಾವಧಿ ಜಾತ್ರೆ

0

ವಿಟ್ಲ: ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ. 18 ರಿಂದ ಫೆ. 20ರವರೆಗೆ ನಡೆಯಲಿರುವ ಶಿವರಾತ್ರಿಯ ವರ್ಷಾವಧಿ ಜಾತ್ರೆ ಹಾಗೂ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ 42ನೇ ವರ್ಷದ ಭಜನಾ ಮಹೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆಯ ಆಮಂತ್ರಣ ಪತ್ರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು ಹಾಗೂ ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ನಡೆಯಿತು.

ಕ್ಷೇತ್ರದ ಮೊಕ್ತೇಸರರಾದ ಕ್ರಷ್ಣಯ್ಯ ಕೆ. ವಿಟ್ಲ ಅರಮನೆ, ಅರ್ಚಕರಾದ ಶ್ರೀನಿವಾಸ ಶಗ್ರೀತ್ತಾಯ, ಅಧ್ಯಕ್ಷ ವೀರಪ್ಪ ರಾಯರಬೆಟ್ಟು, ಕಾರ್ಯದರ್ಶಿ ಜಗದೀಶ್ಚಂದ್ರ ನಾಯ್ತೋಟು, ಕೋಶಾಧಿಕಾರಿ ದಿನೇಶ ಮಾಮೇಶ್ವರ, ಉಪಾಧ್ಯಕ್ಷ ವಿಶ್ವನಾಥ ನಾಯ್ತೋಟು, ಜತೆ ಕಾರ್ಯದರ್ಶಿ ಉಮೇಶ ಮಾಡ್ತೇಲು ಸದಸ್ಯರುಗಳಾದ ಪದ್ಮನಾಭ ಮಂಜಲಾಡಿ, ರಾಘವ ಅಡ್ಡಾಳಿ, ನಾರಾಯಣ ಡೊಂಬಯ್ಯ ನೇಲ್ಯಾರ್, ನಾರಾಯಣ ಮಾಮೇಶ್ವರ ಶ್ರೀ ಉಮಾಹೇಶ್ವರ ವಿಶ್ವಸ್ಥಮಂಡಳಿಯ ಅಧ್ಯಕ್ಷ ಮೋನಪ್ಪ ರಾಯರಬೆಟ್ಟು,
ಭಜನಾ ಮಂಡಳಿ ಕಾರ್ಯದರ್ಶಿಪ್ರಶಾಂತ್ ಅಡ್ಡಾಳಿ, ಅಣ್ಣು ಮಂಜಲಾಡಿ, ಧರ್ಣಪ್ಪ ಮಾಮೇಶ್ವರ, ಪ್ರಕಾಶ ಕೈಂತಿಲ, ಶಶಿಧರ ಕೈಂತಿಲ, ಹೊನ್ನಪ್ಪ ಕೋಚೋಡಿ, ಪ್ರವೀಣ್ ಮಾಡ, ದಿನೇಶ್ ಸುರುಳಿಮೂಲೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here