ಫೆ.16-19: ಕೋಲ್ಪೆ ಮಖಾಂ ಉರೂಸ್, ಮತ ಪ್ರವಚನ, ಸೌಹಾರ್ದ ಸಮಾರಂಭ

0

ನೆಲ್ಯಾಡಿ: ಸೈಯ್ಯದ್ ಮಲ್ಹರ್ ವಲಿಯುಲ್ಲಾಹಿ ದರ್ಗಾ ಶರೀಫ್ ಕೋಲ್ಪೆ-ನೆಲ್ಯಾಡಿ ಇಲ್ಲಿ ವರ್ಷಂಪ್ರತಿ ನಡೆಯುವ ಕೋಲ್ಪೆ ಮಖಂಆ ಉರೂಸ್ ಹಾಗೂ 4 ದಿನಗಳ ಮತ ಪ್ರವಚನ ಮತ್ತು ಸೌಹಾರ್ದ ಸಮಾರಂಭ ಫೆ.16ರಿಂದ 19ರ ತನಕ ನಡೆಯಲಿದೆ ಎಂದು ಕೋಲ್ಪೆ ಬಿಜೆಎಂ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.


ಫೆ.16ರಂದು ರಾತ್ರಿ 7.30ಕ್ಕೆ ನೆಲ್ಯಾಡಿ ಬಿಜೆಎಂ ಖತೀಬರಾದ ಶೌಕತ್ ಅಲಿ ಅಮಾನಿ ಉದ್ಘಾಟಿಸಲಿದ್ದಾರೆ. ಕೋಲ್ಪೆ ಮುದರ್ರೀಸ್ ಮೊಹಮ್ಮದ್ ಶರೀಫ್ ದಾರಿಮಿ ಅಲ್ ಹೈತಮಿ ದು:ವಾ ನೆರವೇರಿಸಲಿದ್ದಾರೆ. ಕೋಲ್ಪೆ ಬಿಜೆಎಂ ಗೌರವಾಧ್ಯಕ್ಷ ಬಿ.ಎಸ್.ಬಾವ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಫೆ.17ರಂದು ರಾತ್ರಿ 7.30ಕ್ಕೆ ಸಿದ್ದೀಕ್ ಅಝ್ಹರಿ ಪಯ್ಯನ್ನೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕೋಲ್ಪೆ ನೂರಾನಿಯ ಮದರಸದ ಮುಖ್ಯಗುರು ಯುಸೂಫ್ ಮುಸ್ಲಿಯಾರ್ ದು:ವಾ ನೆರವೇರಿಸಲಿದ್ದಾರೆ.

ಫೆ.೧೮ರಂದು ರಾತ್ರಿ 7.30 ಕ್ಕೆ ಹನೀಫ್ ನಿಝಾಮಿ ಮೊಗ್ರಾಲ್ ಪುತ್ತೂರು, ಕಾಸರಗೋಡು ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಗೋಳಿತ್ತೊಟ್ಟು ರಹ್ಮಾನಿಯಾ ಜುಮ್ಮಾ ಮಸೀದಿ ಖತೀಬರಾದ ಹನೀಫ್ ದಾರಿಮಿ ದು:ವಾ ನೆರವೇರಿಸಲಿದ್ದಾರೆ.


ಫೆ.19 ರಂದು ರಾತ್ರಿ ಸೌಹಾರ್ದ ಸಂಗಮ ಹಾಗೂ ಉರೂಸ್ ಸಮಾರಂಭ ನಡೆಯಲಿದೆ. ಸೈಯ್ಯದ್ ಅಬ್ದುಲ್ ಖಾದರ್ ಫೈಝಿ ತಂಘಳಞ ಪಟ್ಟಾಂಬಿ ಅವರು ದುವಾಶೀರ್ವಚನ ಮತ್ತು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಕೋಲ್ಪೆ ಬಿಜೆಎಂ ಮುದರ್ರೀಸ್ ಮುಹಮ್ಮದ್ ಶರೀಫ್ ದಾರಿಮಿ ಅಲ್‌ಹೈತಮಿ ಉದ್ಘಾಟಿಸಲಿದ್ದಾರೆ. ಚೊಕ್ಕಬೆಟ್ಟು ಜೆ.ಎಂ.ಖತೀಬರಾದ ಅಝೀಝ್ ದಾರಿಮಿ, ಕೊಣಾಲು ಸೈಂಟ್ ತೋಮಸ್ ಸಿರಿಯನ್ ಚರ್ಚ್‌ನ ಧರ್ಮಗುರು ಪಿ.ಕೆ.ಅಬ್ರಬಾಂ ಕೋರ್ ಎಪಿಸ್ಕೋಪ, ಕಾರ್ಮಿಕ ಮುಖಂಡರೂ, ನ್ಯಾಯವಾದಿಯೂ ಆದ ಬಿ.ಎಂ.ಭಟ್‌ರವರು ಸೌಹಾರ್ದ ಸಂದೇಶ ನೀಡಲಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಯು.ಟಿ.ಖಾದರ್, ಬೆಂಗಳೂರು ಶಾಂತಿನಗರ ಶಾಸಕ ಎನ್.ಎ.ಹಾರಿಸ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಪತ್ರಕರ್ತ, ಚಿಂತಕ ರಾ.ಚಿಂತನ್, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ, ಕುಂಪಲ ನೂರಾನಿಯಾ ಯತೀಂಖಾನ ಚೆಯರ್‌ಮ್ಯಾನ್ ಯು.ಎಸ್.ಅಬೂಬಕ್ಕರ್, ಕೆಪಿಸಿಸಿ ಸಂಯೋಜಕರಾದ ಎಚ್.ಎಂ.ನಂದಕುಮಾರ್, ಕೃಷ್ಣಪ್ಪ ಜಿ., ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here