ವಿಟ್ಲ: ಮಾಣಿ ಗ್ರಾಮದ ಕೊಡಾಜೆ-ಗಡಿಸ್ಥಳದಲ್ಲಿ ಗ್ರಾಮ ದೈವಗಳಾದ ಶ್ರೀ ಗುಡ್ಡೆಚಾಮುಂಡಿ-ಪಂಜುರ್ಲಿ-ಮಲೆಕೊರತಿ ದೈವಗಳ ದೊಂಪದ ಬಲಿ ನೇಮ ಸಂಪನ್ನಗೊಂಡಿತು.
ಫೆ.9ರಂದು ಗೊನೆಮುಹೂರ್ತ ನಡೆದು ನಂತರ ಮೂರು ದಿವಸದ ಚೆಂಡು ಆಗಿ, ಚಪ್ಪರ ಏರುವ ಫೆ.13ರಂದು ಬೆಳಿಗ್ಗೆ ಗಡಿಸ್ಥಳದ ನಾಗಬನದಲ್ಲಿ ನಾಗತಂಬಿಲ ನಡೆಯಿತು. ಸಂಜೆ ಮಾಣಿಗುತ್ತು ಚಾವಡಿಯಿಂದ ಗಡಿಸ್ಥಳಕ್ಕೆ ದೈವದ ಅಪ್ಪಣೆಯಂತೆ ಭಂಡಾರ ಬಂದು, ಅನ್ನಸಂತರ್ಪಣೆಯ ಸೇವೆ ನಡೆಯಿತು. ರಾತ್ರಿ ಗಂಟೆ 12ರಿಂದ ಶ್ರೀ ದೈವಗಳ ಕಾಲಾವಧಿ ದೊಂಪದ ಬಲಿ ನೇಮ ಸಂಪ್ರದಾಯದಂತೆ ಜರಗಿತು.
ಮಾಣಿ ಶ್ರೀ ಉಳ್ಳಾಲ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈ, ಗಡಿಪ್ರಧಾನರಾದ ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ ಅರೆಬೆಟ್ಟು, ಜಗನ್ನಾಥ ಚೌಟ ಬದಿಗುಡ್ಡೆ, ನಾರಾಯಣ ಆಳ್ವ ಕೊಡಾಜೆ, ಬಾಲಕೃಷ್ಣ ಆಳ್ವ ಕೊಡಾಜೆ, ಸದಾಶಿವ ಶೆಟ್ಟಿ ಶಂಭುಗ, ರಾಮಚಂದ್ರ ಪೂಜಾರಿ ಪಾದೆ, ಲೋಕೇಶ್ ಪೂಜಾರಿ ಪಲ್ಲತ್ತಿಲ್ಲ ಸೇರಿದಂತೆ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.