ಮೂಲಭೂತ ಸೌಕರ್ಯ ರಸ್ತೆ ದುರಸ್ಥಿ ಇನ್ನೂ ಮರೀಚಿಕೆ ನೆಲ್ಲಿಗುಂಡಿಯಲ್ಲಿ ವಿಧಾನಸಭಾ ಚುನಾವಣೆಗೆ ಬಹಿಷ್ಕಾರ ಬ್ಯಾನರ್ ಅಳವಡಿಕೆ

0

ಪುತ್ತೂರು: ಕಳೆದ 30 ವರ್ಷಗಳಿಂದ ತೀರಾ ಹದಗೆಟ್ಟ ಮೂಲಭೂತ ಸೌಕರ್ಯದ ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆಗೆ ಸ್ಪಂದಿಸದೇ ಕೇವಲ ಟೊಳ್ಳು ಭರವಸೆ ನೀಡಿದ್ದಾರೆ. ಹಾಗಾಗಿ ನಾವು 2023ನೇ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಪುತ್ತೂರು ನಗರಸಭೆ ವ್ಯಾಪ್ತಿಯ ನೆಲ್ಲಿಗುಂಡಿಯಲ್ಲಿ ಚುನಾವಣೆ ಬಹಿಷ್ಕಾರ ಬ್ಯಾನರ್ ಅಳವಡಿಸಿದ್ದಾರೆ.

ನಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳ ಧೋರಣೆಗೆ ಬೇಸತ್ತು ಮುಂದಿನ ವಿಧಾನಸಭಾ ಚುನಾವಣೆಯನ್ನು ಎಲ್ಲಾ ಪಕ್ಷ ಜಾತಿ ಮರೆತು ಸಾಮೂಹಿಕವಾಗಿ ಬಹಿಷ್ಕರಿಸುತ್ತೇವೆ. ನೊಂದ ಕಚ್ಚಾ ರಸ್ತೆ ಬಳಕೆದಾರರು ನೆಲ್ಲಿಗುಂಡಿ ನಿವಾಸಿಗಳು ಎಂದು ನೆಲ್ಲಿಗುಂಡಿಯಲ್ಲಿ ಬ್ಯಾನರ್ ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here