ಪುತ್ತೂರು: ಬೊಳುವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಮುಂದಿನ ಡಿಸೆಂಬರ್ನಲ್ಲಿ ಆಚರಿಸಲಿರುವ ‘ಶ್ರೀ ಆಂಜನೇಯ 55’ (ಸ್ವರ್ಣಪಂಚಮಿ ) ಹಿನ್ನೆಲೆಯಲ್ಲಿ ಐವರು ಹಿರಿಯ ಸಾಧಕರನ್ನು ಅವರ ಮನೆಯಲ್ಲಿ ಸನ್ಮಾನಿಸಲು ನಿರ್ಧರಿಸಿದಂತೆ ಮೊದಲ ಸನ್ಮಾನ ‘ಯಕ್ಷಸಾಧಕ ಗೌರವ 1’ ನ್ನು ಮೂಡಬಿದ್ರೆಯ ನೂಯಿಯಲ್ಲಿ ವಾಸವಿರುವ ತೆಂಕುತಿಟ್ಟು ಯಕ್ಷಗಾನದ ಹಿರಿಯ ಭಾಗವತ ಬ್ರಹ್ಮರೆನಿಸಿದ ಬಲಿಪ ನಾರಾಯಣ ಭಾಗವತರಿಗೆ ಅರ್ಪಿಸಲಾಯಿತು.
ಆಂಜನೇಯ ಯಕ್ಷಗಾನ ಕಲಾಸಂಘದ ಪದಾಧಿಕಾರಿಗಳಾದ ಭಾಸ್ಕರ್ ಬಾರ್ಯ, ಪದ್ಯಾಣ ಶಂಕರನಾರಾಯಣ ಭಟ್ , ಲಕ್ಷ್ಮಿ ನಾರಾಯಣ ಭಟ್, ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಬಲಿಪರ ಪುತ್ರರಾದ ಮಾಧವ, ಗಿರಿಧರ, ಸೊಸೆಯಂದಿರು, ಮೊಮ್ಮಕ್ಕಳು ಉಪಸ್ಥಿತರಿದ್ದರು.