ಈಶ್ವರಮಂಗಲ: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯು ಫೆ.16 ರಿಂದ ಫೆ.24 ರವರೆಗೆ ನಡೆಯಲಿದ್ದು ಹಸಿರುವಾಣಿ ಹೊರೆಕಾಣಿಕೆಯು ಫೆ.15ರಂದು ನಡೆಯಿತು. ನೂಜಿಬೈಲು, ಪೆರ್ನಾಜೆ, ನೆಲ್ಲಿತ್ತಡ್ಕ, ಸಾಂತ್ಯ, ಮುಂಡ್ಯ, ಕುತ್ಯಾಳ, ಪಟ್ಲಡ್ಕ, ಪುಳಿಮಾರಡ್ಕ, ಮೇನಾಲ, ಮೆಣಸಿನಕಾನ, ಮಯ್ಯಾಳ, ಪಂಚೋಡಿ, ಕುದ್ರೋಳಿ, ಕರ್ನೂರು, ಗಾಳಿಮುಖ, ಆಲಂತಡ್ಕ ಆಸುಪಾಸಿನವರು ಮತ್ತು ಎಲ್ಲಾ ಸಂಘ ಸಂಸ್ಥೆಗಳವರು ಈಶ್ವ ರಮಂಗಲ ಪಂಚಾಯತ್ ಬಳಿ ಹಸಿರುವಾಣಿಯನ್ನು ಸಂಗ್ರಹಿಸಿ ನಂತರ ವಿಜ್ರಂಭಣೆಯ ಮೆರವಣಿಗೆ ಮೂಲಕ ದೇವಳಕ್ಕೆ ಆಗಮಿಸಿ ಉಗ್ರಾಣ ತುಂಬಿಸಲಾಯಿತು.
ಪ್ರಗತಿಪರ ಕೃಷಿಕರಾದ ವಿಜಯ್ ಕುಮಾರ್ ಕೆಮ್ಮತ್ತಡ್ಕ ಇವರು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯನ್ನು ಉದ್ಘಾಟಿಸಿದರು. ಅರ್ಚಕ ರವೀಂದ್ರ ಮಾಣಿಲತ್ತಾಯ, ಶ್ರೀಕೃಷ್ಣ ಭಟ್ ಮುಂಡ್ಯ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ ನೂಜಿಬೈಲು, ಕೋಶಾಧಿಕಾರಿ ದೀಪಕ್ ಕುಮಾರ್ ಮುಂಡ್ಯ, ಉಪಾಧ್ಯಕ್ಷರುಗಳಾದ ಸದಾಶಿವ ರೈ ನಡುಬೈಲು, ನಾಗಪ್ಪ ಗೌಡ ಬೊಮ್ಮೆಟ್ಟಿ, ಡಾ. ಶ್ರೀ ಕುಮಾರ್ ಕತ್ರಿಬೈಲು, ಸುರೇಶ ಆಳ್ವ ಸಾಂತ್ಯ, ಆನಂದ ರೈ ಸಾಂತ್ಯ, ಜತೆ ಕಾರ್ಯದರ್ಶಿಗಳಾದ ವಿಕ್ರಂ ರೈ ಸಾಂತ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರದೀಪ್ ರೈ ಮೇನಾಲ, ಮಂಜುನಾಥ ರೈ ಕರ್ನೂರು, ಗಿರೀಶ್ ರೈ ಮರಕ್ಕಡ, ಬಾಲಕೃಷ್ಣ ರೈ ಮುನ್ನಗದ್ದೆ, ಆನಂದ ಕೆಮ್ಮತ್ತಡ್ಕ, ದಯಾನಂದ ಕೆಮ್ಮತ್ತಡ್ಕ, ಮುರಳಿ ಮೋಹನ ಶೆಟ್ಟಿ ಸರವು, ಜತ್ತಪ್ಪ ಗೌಡ ಕೊಂಕಣಿಗುಂಡಿ, ಶೇಖರ ಪೂಜಾರಿ ಮುಂಡ್ಯ, ರಮೇಶ್ ಪೂಜಾರಿ ಮುಂಡ್ಯ, ಶ್ರೀರಾಂ ಪಕ್ಕಳ,ಪ್ರವೀಣ್ ರೈ ಮೇನಾಲ, ರಾಮಣ್ಣ ನಾಯ್ಕ, ಜಯಚಂದ್ರ ಸೆರಾಜೆ , ನವೀನ್ ಗೌಡ, ಜಯಾನಂದ ಕೋರಿಗದ್ದೆ, ರಾಮ್ ಪ್ರಸಾದ್ ಆಳ್ವ, ಅಚ್ಚುತ ಮಣಿಯಾಣಿ ಸುಂದರ ಜಿ ಮೇನಾಲ, ಅಣ್ಣಯ್ಯ ಗೌಡ ಉರಿಕ್ಯಾಡಿ, ರಾಜೇಶ ಪಂಚೋಡಿ, ಚರಣ್ ಮಡ್ಯಲ ಮಜಲು, ಪ್ರಜ್ವಲ್ ಪಂಚೋಡಿ, ದೇವಸ್ಥಾನದ ಸಹಾಯಕ ಸುಬ್ರಹ್ಮಣ್ಯ ರಾವ್, ರಿಕ್ಷಾ ಚಾಲಕ ಮಾಲಕರು, ದೇವಸ್ಥಾನದ ಗುಮಾಸ್ತ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ರಾತ್ರಿ ಶ್ರೀ ದುರ್ಗಾ ಪೂಜೆಯು ನಡೆಯಿತು. ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳಿಂದ ಅಮರಗಿರಿ ಭಜನಾನೃತ್ಯ ತಂಡ,ಮತ್ತು ಪಂಚಲಿಂಗೇಶ್ವರ ಭಜನಾ ವಿದ್ಯಾರ್ಥಿ ತಂಡದವರಿಂದ ನೃತ್ಯ ಭಜನೆ ಮೆರವಣಿಗೆಯಲ್ಲಿ ನಡೆಯಿತು,ಜೀರ್ಣೋದ್ಧಾರ ಸಮಿತಿಯ ಪದಾದಿಕಾರಿಗಳು ಸದಸ್ಯರು ಭಕ್ತಾದಿಗಳು ಭಗವಹಿಸಿದರು.
ಇಂದು ಧ್ವಜಾರೋಹಣ:ಫೆ..6ರಂದು ಬೆಳಿಗ್ಗೆ ಧ್ವಜಾರೋಹಣ ನಡೆಯಲಿದೆ. ಬಳಿಕ ಬಲಿವಾಡು ಶೇಖರಣೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ.