ತಿರುಮಲ ಹೋಂಡಾದಲ್ಲಿ ‘ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್ ಸ್ಕೂಟರ್’ ಬಿಡುಗಡೆ

0

ಪುತ್ತೂರು: ಪ್ರಸಿದ್ಧ ವಾಹನ ತಯಾರಕ ಕಂಪೆನಿಯಾಗಿ ಗುರುತಿಸಿಕೊಂಡಿರುವ ‘ಹೋಂಡಾ’ ಭಾರತದಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ‘ಆಕ್ಟಿವಾ ಹೆಚ್ ಸ್ಮಾರ್ಟ್ ಸ್ಕೂಟರ್’ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈಗಾಗಲೇ ಗ್ರಾಹಕರಿಗೆ ಈ ಸ್ಕೂಟರ್‌ನ ವಿತರಣೆ ಆರಂಭವಾಗಿದ್ದು, ಹೋಂಡಾ ಸಂಸ್ಥೆಯ ಅಧಿಕೃತ ಡೀಲರ್, ತನ್ನ ಗುಣಮಟ್ಟದ, ವಿಶ್ವಾಸಾರ್ಹ ಸೇವೆಯ ಮೂಲಕ ಗ್ರಾಹಕರ ಮನಗೆದ್ದಿರುವ ‘ತಿರುಮಲ ಹೋಂಡಾ’ದ ಪುತ್ತೂರು ಶಾಖೆಯಲ್ಲಿ ಫೆ.15ರಂದು ಈ ನೂತನ ಆಕ್ಟಿವಾ ಸ್ಕೂಟರ್ ಮಾಡೆಲ್‌ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಹೋಂಡಾ ಏರಿಯಾ ಸೇಲ್ಸ್ ಮ್ಯಾನೇಜರ್ ಅವಿನಾಶ್, ಏರಿಯಾ ಸೀನಿಯರ್ ಸರ್ವೀಸ್ ಮ್ಯಾನೇಜರ್ ಶಶಿಧರ್ ಕಮ್ಮಾರ್ ಅವರು ನೂತನ ‘ಆಕ್ಟಿವಾ ಹೆಚ್ ಸ್ಮಾರ್ಟ್ ಟೆಕ್ನಾಲಜಿ ಹೊಂದಿರುವ ಸ್ಕೂಟರ್’ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಈ ವೇಳೆ ಹೋಂಡಾ ಏರಿಯಾ ಸೇಲ್ಸ್ ಮ್ಯಾನೇಜರ್ ಅವಿನಾಶ್ ಅವರು ಮಾತನಾಡಿ, ಗ್ರಾಹಕರ ಸಹಕಾರದಿಂದ ಸಂಸ್ಥೆಯು ಮುನ್ನಡೆಯುತ್ತಿದೆ. ಮುಂದಕ್ಕೂ ಇದೇ ರೀತಿಯ ಸಹಕಾರ ಇರಲಿ ಎಂದು ಆಶಿಸಿದರು.

ಹೋಂಡಾ ಟ್ರೈನಿಂಗ್ ಮ್ಯಾನೇಜರ್ ಬ್ರಿಜೇಶ್ ರೈ ಮಾತನಾಡಿ, ‘ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್ ಸ್ಕೂಟರ್’ನ ತಾಂತ್ರಿಕ ವೈಶಿಷ್ಟ್ಯತೆಗಳ ಬಗ್ಗೆ ವಿವರಿಸಿದರು.
ತಿರುಮಲ ಹೋಂಡಾದ ಸೇಲ್ಸ್ ಮ್ಯಾನೇಜರ್ ಕಾರ್ತಿಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೋಂಡಾ ಆಕ್ಟೀವಾವು ಅತ್ಯಂತ ಹೆಚ್ಚು ಮಾರಾಟವಾಗುವ ಸ್ಕೂಟರ್‌ಗಳಲ್ಲಿ ಒಂದು. 90ರ ದಶಕದ ಅಂತ್ಯ ಹಾಗೂ 2000ನೇ ಇಸವಿಯ ಆರಂಭದಲ್ಲಿ ಹೋಂಡಾ ಸಂಸ್ಥೆಯು ತನ್ನ ಗೇರ್‌ಲೆಸ್ ಸ್ಕೂಟರ್ ಆಕ್ಟಿವಾವನ್ನು ಮಾರುಕಟ್ಟೆಗೆ ಪರಿಚಯಿಸಿತು. ಅದರ ವಿಶೇಷತೆಯನ್ನು ಅರಿತುಕೊಂಡ ಗ್ರಾಹಕರು ಅದನ್ನು ಇಷ್ಟಪಟ್ಟು ಖರೀದಿಸಲು ಆರಂಭಿಸಿ ದಶಕಗಳೇ ಸಂದಿವೆ.

ತಿರುಮಲ ಹೋಂಡಾ ಸಂಸ್ಥೆಯು ಆರಂಭಗೊಂಡು 15 ವರ್ಷಗಳು ಸಂದಿದ್ದು, ಎಲ್ಲರ ಹಾರೈಕೆಯಿಂದ ಸಂಸ್ಥೆಯು ಯಶಸ್ವಿಯಾಗಿ ಸಾಗುತ್ತಿದೆ. ದೇಶದಲ್ಲಿ ಅತಿಹೆಚ್ಚು ಮಾರಾಟವಾದ ಖ್ಯಾತಿಯನ್ನು ಹೋಂಡಾ ಆಕ್ಟಿವಾ ಹೊಂದಿದ್ದು, ಎರಡೂವರೆ ಕೋಟಿಗೂ ಅಧಿಕ ಆಕ್ಟಿವಾ ಸ್ಕೂಟರ್‌ಗಳು ಓಡಾಡುತ್ತಿವೆ. ಇದರಲ್ಲಿ ತಿರುಮಲ ಹೋಂಡಾದ 15,939 ಗ್ರಾಹಕರು ಕೂಡ ಸೇರಿಕೊಂಡಿದ್ದಾರೆ. ಸಂಸ್ಥೆಯ ಮಾಲಕ ಕೃಷ್ಣಕಿಶೋರ್ ಎನ್.ಟಿ. ರವರು ಸಬ್‌ಡೀಲರ್‌ನಿಂದ ಆರಂಭಿಸಿದ ಸಂಸ್ಥೆಯು ಇಂದು ಹೋಂಡಾ ಡೀಲರ್ ಆಗಿ, ಪುತ್ತೂರು, ಉಪ್ಪಿನಂಗಡಿ, ಕಡಬ, ನೆಲ್ಯಾಡಿ, ಬೆಳ್ಳಾರೆ, ಸುಳ್ಯ, ಹಾಗೂ ಕಬಕದಲ್ಲಿ ಶಾಖೆಗಳನ್ನು ಹೊಂದಿದ್ದು, ಉತ್ತಮ ಗ್ರಾಹಕ ಸೇವೆಯನ್ನು ನೀಡುತ್ತಾ ಬರುತ್ತಿವೆ. ಕೃಷಿಕ ವರ್ಗದ ಗ್ರಾಹಕರ ಅನುಕೂಲಕ್ಕೆ ಕಿಸಾನ್ ಕಾರ್ಡ್‌ನ್ನು ಹೊಸದಾಗಿ ಅನಾವರಣಗೊಳಿಸಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತಿರುಮಲ ಹೋಂಡಾದ ಸರ್ವಿಸ್ ಮ್ಯಾನೇಜರ್ ಮನಮೋಹನ್ ಮಾತನಾಡಿ, 6 ಶಾಖೆಗಳ ಮೂಲಕ ತಿರುಮಲ ಹೋಂಡಾ ಸೇವೆ ನೀಡುತ್ತಿದೆ. ಈ ಹಿಂದೆ ಎಲ್ಲಾ ವಾಹನಗಳನ್ನು 3 ತಿಂಗಳಿಗೊಮ್ಮೆ ಸರ್ವಿಸ್ ಮಾಡಿಸಬೇಕಿತ್ತು. ಆದರೆ ಈಗ 6 ತಿಂಗಳಿಗೊಮ್ಮೆ ಅಥವಾ 5500 ಕಿಮೀಗೆ ಸರ್ವಿಸ್ ಮಾಡಿಸುವ ಅವಕಾಶ ಇದೆ. ಇದು ನಿರ್ವಹಣಾ ವೆಚ್ಚವನ್ನು ಕಡಿಮೆಗೊಳಿಸಲು ಉತ್ತಮ ಅವಕಾಶವಾಗಿದೆ. ಹಿಂದೆ ವರ್ಷದಲ್ಲಿ 4 ಬಾರಿ ಸರ್ವಿಸ್ ಮಾಡಿಸಿಕೊಳ್ಳಬೇಕಿದ್ದಲ್ಲಿ ಈಗ ವರ್ಷಕ್ಕೆ ಎರಡು ಬಾರಿ ಮಾತ್ರ ಸರ್ವಿಸ್ ಮಾಡಿಸುವ ಹಾಗಾಗಿದೆ. ವಾಹನಕ್ಕೆ 3 ವರ್ಷ ವ್ಯಾರಂಟಿ ಇದ್ದು, ಎಕ್ಸ್‌ಟೆಂಡೆಟ್ ವಾರಂಟಿಯ ಅವಕಾಶವೂ ಇದೆ. ಇದನ್ನು ಮಾಡಿಸಿಕೊಂಡರೆ 6 ವರ್ಷಗಳವರೆಗೆ ಸಂಪೂರ್ಣ ವಾರಂಟಿ ಸಿಗುತ್ತದೆ. ರೆಗ್ಯುಲರ್ ಮೆಂಟೇನೆನ್ಸ್ ಮಾಡುವುದರಿಂದ ರಿಸೇಲ್ ವೇಳೆ ಅದರ ಲಾಭ ದೊರೆಯುತ್ತದೆ ಎಂದು ವಾಹನಗಳ ಸರ್ವಿಸಿಂಗ್ ಮತ್ತು ಮೆಂಟೇನೆನ್ಸ್ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನೂತನ ಮಾದರಿ ಸ್ಕೂಟರ್‌ನ ಪ್ರಥಮ ಗ್ರಾಹಕರಾದ ಆಲಿಕುಂಞಿ, ಪ್ರಣೀತ್‌ರವರಿಗೆ ಕೀ ಹಸ್ತಾಂಂತರಿಸಲಾಯಿತು.

ಕಾರ್ಯಕ್ರಮದಲ್ಲಿ ತಿರುಮಲ ಹೋಂಡಾದ ಮಾಲಕರಾದ ಕೃಷ್ಣಕಿಶೋರ್ ಎನ್.ಟಿ., ಜನರಲ್ ಮ್ಯಾನೇಜರ್ ಅಖಿಲೇಷ್ ಎನ್. ಸಂಸ್ಥೆಯ ಸಿಬ್ಬಂದಿ ವರ್ಗ, ಗ್ರಾಹಕರು ಉಪಸ್ಥಿತರಿದ್ದರು. ಶ್ರೀಮಾ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್‌ನಲ್ಲಿ ಕಂಪೆನಿಯು ಆಕ್ಟಿವಾ ಕಜಿ ಯಂತೆಯೇ ಅದೇ ಎಂಜಿನ್ ಅನ್ನು ನೀಡಿದೆ. ಇದು 109.51 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಗಿದ್ದು ಅದು ಏರ್-ಕೂಲ್ಡ್ ತಂತ್ರಜ್ಞಾನವನ್ನು ಆಧರಿಸಿದೆ.ಈ ಎಂಜಿನ್ 7.73ಪಿಎಸ್ ಪವರ್ ಮತ್ತು 7.68 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್ 60 ಕಿ.ಮೀ/ಲೀ ಇಂಧನ ದಕ್ಷತೆಯನ್ನು ಹೊಂದಿದೆ. ಇದಲ್ಲದೆ ಹೊಸ ಪಾಸಿಂಗ್ ಸ್ವಿಚ್ ಮತ್ತು ಎಲ್‌ಇಡಿ ಹೆಡ್ ಲ್ಯಾಂಪ್‌ಗಳನ್ನು ನೀಡಲಾಗಿದೆ. ಸ್ಕೂಟರ್‌ನಲ್ಲಿ ಅಲಾಯ್ ವೀಲ್‌ಗೆ ಹೊಸ ವಿನ್ಯಾಸವನ್ನು ನೀಡಲಾಗಿದೆ. 12 ಇಂಚಿನ ಮುಂಭಾಗದ ಅಲಾಯ್ ವೀಲ್, ಟೆಲಿಸ್ಕೋಪಿಕ್ -ಂಟ್ ಸಸ್ಪೆನ್ಸನ್ ಮತ್ತು ಅಡ್ಡೆಸ್ಟಬಲ್ ರಿಯರ್ ಸಸ್ಪೆನ್ಸನ್

ಆಕ್ಟಿವಾ ಹೆಚ್ ಸ್ಮಾರ್ಟ್‌ನ ತಾಂತ್ರಿಕ ವೈಶಿಷ್ಟ್ಯತೆಗಳು
1 ಸ್ಮಾರ್ಟ್ ಸೇಫ್ (ಆಂಟಿ ಥೆಫ್ಟ್ ಸಿಸ್ಟಮ್ ಫಾರ್ ಸೆಕ್ಯುರಿಟಿ): ಸ್ಕೂಟರ್ ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್‌ನಲ್ಲಿ ನೀಡಲಾದ ಅತಿದೊಡ್ಡ ಫೀಚರ್ ಎಂದರೆ ರಿಮೋಟ್ ಸ್ಮಾರ್ಟ್ ಕೀ. ಇದರಲ್ಲಿ ಪ್ರತೀ ಕೀಗೆ ಯುನಿಕ್ ಐಡಿ ಇರುತ್ತದೆ. ಇಲ್ಲಿ ಯಾವುದೇ ಕೀ ಇಲ್ಲದಿರುವುದರಿಂದ ಸವೆದುಹೋಗುವ, ಬೇರೆ ಕೀ ಬಳಸಿ ಸುಲಭದಲ್ಲಿ ಕಳ್ಳತನವಾಗುವ ಅಪಾಯವಿಲ್ಲ.

2 ಸ್ಮಾರ್ಟ್ ಫೈಂಡ್ (ಆನ್ಸರ್ ಬ್ಯಾಕ್ ಮೋಡ್): ಇಲ್ಲಿ ರಿಮೋಟ್‌ನಲ್ಲಿರುವ ಆನ್ಸರ್ ಬ್ಯಾಕ್ ಬಟನ್ ಪ್ರೆಸ್ ಮಾಡಿದರೆ ನೀವು ತುಂಬಾ ಗಾಡಿಗಳು ಪಾರ್ಕ್ ಆಗಿರುವ ಜಾಗದಲ್ಲಿ ನಿಮ್ಮ ಗಾಡಿ ಎಲ್ಲಿದೆ ಎಂದು ಸುಲಭವಾಗಿ ಪತ್ತೆಹಚ್ಚಬಹುದು. ರಿಮೋಟ್ ಪ್ರೆಸ್ ಆದ ಕೂಡಲೇ ಇಂಡಿಕೇಟರ್ ಲೈಟ್‌ಗಳು ಆನ್ ಆಗಿ ನಿಮ್ಮ ಗಾಡಿಯ ಇರುವಿಕೆಯನ್ನು ತೋರಿಸುತ್ತವೆ. ಸ್ಮಾರ್ಟ್ ಕೀ ರಿಮೋಟ್‌ನ ಸೆನ್ಸಿಂಗ್ ರೇಂಜ್ 10 ರಿಂದ 20 ಮೀಟರ್‌ವರೆಗೆ ಇದೆ.

3 ಸ್ಮಾರ್ಟ್ ಸ್ಟಾರ್ಟ್: ಜೊತೆಗೆ ನೀವು ನಿಮ್ಮ ಸ್ಕೂಟರ್‌ನಿಂದ 2 ಮೀಟರ್ ತ್ರಿಜ್ಯ (ಪೆರಿಮೀಟರ್)ದಲ್ಲಿದ್ದ ವೇಳೆ ಈ ಸ್ಮಾರ್ಟ್ ರಿಮೋಟ್ ಮೂಲಕ ಕೀ ಬಳಸದೆಯೇ ಸ್ಕೂಟರ್ ಅನ್ನು ಲಾಕ್ ಅನ್ಲಾಕ್ ಮಾಡಬಹುದು. ಇಗ್ನಿಷನ್ ಬಟನ್‌ನ್ನು ತಿರುಗಿಸುವ ಮೂಲಕ ಸ್ಟಾರ್ಟ್ ಮಾಡಬಹುದು.

4 ಸ್ಮಾರ್ಟ್ ಅನ್‌ಲಾಕ್: ಈ ಹಿಂದಿನ ಮಾದರಿಗಳಲ್ಲಿ ಫ್ಯೂಯೆಲ್ ಟ್ಯಾಂಕ್ ಕ್ಯಾಪ್ ಮತ್ತು ಸೀಟ್‌ನ್ನು ತೆರೆಯಲು ಪ್ರತ್ಯೇಕ ಬಟನ್ ಇತ್ತು, ಆದರೆ ಈ ಮಾಡೆಲ್‌ನಲ್ಲಿ ಇದು ಕೂಡ ಸ್ಮಾರ್ಟ್ ಆಗಿದ್ದು, ಇಗ್ನಿಷನ್ ನಾಬ್‌ನ್ನು ತಿರುಗಿಸುವ ಮೂಲಕವೇ ಪೆಟ್ರೋಲ್ ತುಂಬಿಸಲು ಇಂಧನ ಟ್ಯಾಂಕ್ ಕ್ಯಾಪ್‌ನ್ನು ಸಹ ಅನ್‌ಲಾಕ್ ಮಾಡಬಹುದು. ಜೊತೆಗೆ ಸೀಟ್‌ನ್ನು ಕೂಡ ಓಪನ್ ಮಾಡಬಹುದು.

ಸ್ಮಾರ್ಟ್ ಕೀ ಹೊಂದಿರುವ ಹೋಂಡಾ ಆಕ್ಟಿವಾ ಎಚ್ ಸ್ಮಾರ್ಟ್ ಸ್ಕೂಟರ್, ದೈನಂದಿನ ಬಳಕೆಗೆ ಎಲ್ಲಾ ವಿಧದಲ್ಲೂ ಒಂದು ಉತ್ತಮ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ಟ್ಯಾಂಡರ್ಡ್, ಡಿಲಕ್ಸ್ ಮತ್ತು ಸ್ಮಾರ್ಟ್ ಎನ್ನುವ ಮೂರು ಮಾದರಿಗಳಲ್ಲಿ ಇದು ಲಭ್ಯವಿದ್ದು, ಪರ್ಲ್ ಸೈರನ್‌ಬ್ಲೂ ನ್ಯೂ, ಡಿಸೆಂಟ್ ಬ್ಲೂ ಮೆಟಾಲಿಕ್, ರೆಬೆಲ್ ರೆಡ್ ಮೆಟಾಲಿಕ್, ಬ್ಲಾಕ್, ಪರ್ಲ್ ಪ್ರೆಶಿಯಸ್ ವೈಟ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಎನ್ನುವ ಬಣ್ಣಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ತಿರುಮಲ ಹೋಂಡಾ ಸಂಸ್ಥೆಯನ್ನು ಸಂಪರ್ಕಿಸಿರಿ
ಮೊ: 9686192066

LEAVE A REPLY

Please enter your comment!
Please enter your name here