ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಧ್ವಜಾರೋಹಣ- ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

0

ಈಶ್ವರಮಂಗಲ: ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಧ್ವಜಾರೋಹಣ ಕಾರ್ಯಕ್ರಮ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಫೆ.16ರಂದು ನಡೆಯಿತು. ಬೆಳಿಗ್ಗೆ ಗಣಪತಿ ಹೋಮ, ಧ್ವಜಾರೋಹಣ, ಬಳಿಕ ಬಲಿವಾಡು ಶೇಖರಣೆ, ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.


ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕುಮಾರನಾಥ ರೈ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ ಮಾತನಾಡಿ ಊರಿನಲ್ಲಿ ಮುಂದೆ ಬಯಲುವಾರು ಸಮಿತಿ ರಚನೆ ಮಾಡಿ ಇದರಿಂದ ಅಭಿವೃದ್ಧಿ ಕೆಲಸಗಳು ನಡೆಯುವುದು, ಗ್ರಾಮದ ಎಲ್ಲಾ ಜನತೆಯು ಒಂದೇ ಭಾವನೆಯಿಂದ ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸಗಳನ್ನು ಮಾಡುವ, ಎಲ್ಲರ ಸಹಕಾರ ಅಗತ್ಯ. ಜಾತ್ರಾ ಸಂದರ್ಭದಲ್ಲಿ ಚಪ್ಪರ ಇನ್ನಿತರ ಕೆಲಸಗಳನ್ನು ಶ್ರಮದಾನದ ಮೂಲಕ ಮಾಡಿದ ಭಕ್ತಾದಿಗಳಿಗೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಕೃತಜ್ಷತೆ ಸಲ್ಲಿಸಿದರು. ನಂತರ ಬನಾರಿ ಯಕ್ಷಗಾನ ಕಲಾ ಕೇಂದ್ರದವರಿಂದ “ಯಕ್ಷಗಾನಾರ್ಚನೆ” ನಡೆಯಿತು.

ದೇವಸ್ಥಾನದ ಆಡಳಿತಾಧಿಕಾರಿ ಮಂಜುನಾಥ ಲಮಾನಿ, ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ, ಅರ್ಚಕ ರವೀಂದ್ರ ಮಾಣಿಲತ್ತಾಯ, ಶ್ರೀಕೃಷ್ಣ ಭಟ್ ಮುಂಡ್ಯ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನರಸಿಂಹ ಪಕ್ಕಳ ಕರ್ನೂರುಗುತ್ತು, ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ಕಾರ್ಯದರ್ಶಿ ಮೋಹನ್‌ದಾಸ್ ಶೆಟ್ಟಿ ನೂಜಿಬೈಲು, ಕೋಶಾಧಿಕಾರಿ ದೀಪಕ್ ಕುಮಾರ್ ಮುಂಡ್ಯ, ಉಪಾಧ್ಯಕ್ಷರುಗಳಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ಸುರೇಶ್ ಆಳ್ವ ಸಾಂತ್ಯ, ಆನಂದ ರೈ ಸಾಂತ್ಯ, ಸದಾಶಿವ ರೈ ನಡುಬೈಲು, ಜೊತೆ ಕಾರ್ಯದರ್ಶಿ ವಿಕ್ರಂ ರೈ ಸಾಂತ್ಯ, ನಾರಾಯಣ ರೈ ಅಂಕೊತ್ತಿಮಾರ್, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರವಿಕಿರಣ್ ಶೆಟ್ಟಿ ಬೆದ್ರಾಡಿ, ಜೀರ್ಣೋದ್ಧಾರ ಕಾರ್ಯಕಾರಿ ಸಮಿತಿ ಮತ್ತು ಜಾತ್ರೋತ್ಸವ ಸಮಿತಿಯ ಸದಸ್ಯರುಗಳಾದ ರತನ್ ನಾಕ್ ಕರ್ನೂರುಗುತ್ತು, ಪ್ರದೀಪ್ ರೈ ಮೇನಾಲ, ಮಂಜುನಾಥ ರೈ ಕರ್ನೂರು, ಪ್ರವೀಣ್ ರೈ ಮೇನಾಲ, ಗಿರೀಶ್ ರೈ ಮರಕ್ಕಡ, ಬಾಲಕೃಷ್ಣ ರೈ ಮುನ್ನಗದ್ದೆ, ಅಚ್ಚುತ ಮಣಿಯಾಣಿ, ಚರಣ್ ಮಡ್ಯಲಮಜಲು, ನಿರಂಜನ್ ರೈ ನೂಜಿಬೈಲು, ಸುಭಾಶ್ಚಂದ್ರ ರೈ ಮೈರೋಳು, ಕೇಶವ ಕೋರಿಗದ್ದೆ, ಜಯಾನಂದ ಕೋರಿಗದ್ದೆ, ಸಂಜೀವ ರೈ ಬೆಡಿಗದ್ದೆ, ಜಯಂತ್ ರೈ ಮೇನಾಲ,ರಮೇಶ್ ರೈ ಸಾಂತ್ಯ, ಅಶೋಕ್ ಕುಮಾರ್ ರೈ ನೂಜಿಬೈಲು, ಶಶಿಕಿರಣ್ ರೈ ನೂಜಿಬೈಲು, ಜಯಚಂದ್ರ ಸೇರಾಜೆ, ಮೋಹನಾಂಗಿ ಕೆ.ಬಿ., ರತಿ ರಮೇಶ್ ಪೂಜಾರಿ, ರಮೇಶ್ ಪೂಜಾರಿ ಮುಂಡ್ಯ, ಕುಮಾರನಾಥ ರೈ ಕರ್ನೂರುಬಾವಾ, ಶೇಖರ ಪೂಜಾರಿ ಮುಂಡ್ಯ, ಜತ್ತಪ್ಪ ಗೌಡ ಕೊಂಕಣಿಗುಂಡಿ, ಸತೀಶ್ ಶೆಟ್ಟಿ ಮುಂಡ್ಯ, ಆನಂದ ಕೆಮ್ಮತ್ತಡ್ಕ, ಚಿನ್ಮಯ್ ರೈ ನಡುಬೈಲು, ದೇವಪ್ಪ ಪೂಜಾರಿ, ದಯಾನಂದ ಕೆಮ್ಮತ್ತಡ್ಕ, ಸುಂದರ ಜಿ ಮೇನಾಲ, ವಿಶ್ವೇಶ ಕುಂಜತ್ತಾಯ ಅದಿಂಜ, ಸತೀಶ್ ಸುರುಳಿಮೂಲೆ, ಶಿವ ಎಸ್. ಪೂಜಾರಿ, ದೇವಸ್ಥಾನದ ಗುಮಾಸ್ತ ಉಮೇಶ್, ಜಯರಾಮ ರೈ, ರಾಜೇಂದ್ರ ಪ್ರಸಾದ್ ಮೇನಾಲ, ಹಾಗೂ ಭಕ್ತಾದಿಗಳು, ವಿವಿಧ ಸಂಘ ಸಂಸ್ಥೆ ಸದಸ್ಯರುಗಳು ಭಾಗವಹಿಸಿದರು. ಕಾರ್ಯದರ್ಶಿ ಮೋಹನ್‌ದಾಸ್ ಶೆಟ್ಟಿ ನೂಜಿಬೈಲು, ಕೋಶಾಧಿಕಾರಿ ದೀಪಕ್ ಕುಮಾರ್ ಮುಂಡ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಕ್ರಂ ರೈ ಸಾಂತ್ಯ ವಂದಿಸಿ, ಆನಂದ ರೈ ಸಾಂತ್ಯ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಮಹಾಪೂಜೆ, ದೇವರ ಬಲಿ, ಮಹಾ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here