ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಜಿಲ್ಲಾ ಗವರ್ನರ್ ಭೇಟಿ ಸಂದರ್ಭದಲ್ಲಿ ರೋಟರಿ ಜಲಸಿರಿ ಯೋಜನೆಯ ಪ್ರಯುಕ್ತ ಸಾರ್ವಜನಿಕ ಉದ್ಧೇಶಕ್ಕೆ ಪುತ್ತೂರು ಶಿವರಾಮ ಕಾರಂತ ಬಾಲವನಕ್ಕೆ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು.
ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರ ಉಪಸ್ಥಿತಿಯಲ್ಲಿ ರೋಟರಿ ವಲಯ ಸೇನಾನಿ ಡಾ|ಹರ್ಷಕುಮಾರ್ ರೈ ಮಾಡಾವುರವರ ಪ್ರಾಯೋಜಕತ್ವದಲ್ಲಿ ಈ ನೀರಿನ ಘಟಕ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ದೀಕ್ಷಾ ಪೈ, ರೋಟರಿ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ, ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ, ರೋಟರಿ ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ಚಂದ್ರಹಾಸ ರೈ ಬಿ, ಕ್ಲಬ್ ನಿಕಟಪೂರ್ವ ಅಧ್ಯಕ್ಷ ನವೀನ್‌ಚಂದ್ರ ನಾಯ್ಕ್, ನಿಯೋಜಿತ ಅಧ್ಯಕ್ಷ ಡಾ|ರಾಜೇಶ್ ಬೆಜ್ಜಂಗಳ, ಕ್ಲಬ್ ಸದಸ್ಯರಾದ ಪದ್ಮನಾಭ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಜಯಪ್ರಕಾಶ್ ಎ.ಎಲ್, ಪಿ.ಎಂ ಅಶ್ರಫ್ ಮುಕ್ವೆ, ಅಮಿತಾ ಸಂತೋಷ್ ಶೆಟ್ಟಿ, ಲಾವಣ್ಯ ನಾಯ್ಕ್, ಜಯಪ್ರಕಾಶ್ ಸೆಲ್‌ಝೋನ್, ಪ್ರದೀಪ್ ಪೂಜಾರಿ, ರೋಟರಿ ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಶಿವರಾಮ ಕಾರಂತ ಬಾಲವನದ ವ್ಯವಸ್ಥಾಪಕರಾದ ಅಶೋಕ್‌ರವರು ಆಗಮಿಸಿದ ಅತಿಥಿಗಳನ್ನು ಗೌರವಿಸಿದರು.