ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಾ.17 ಅರ್ಜಿ ಸಲ್ಲಿಕೆಗೆ ಅಂತಿಮ ದಿನ

0

ಪುತ್ತೂರು: ಪುತ್ತೂರು ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ-6, ಸಹಾಯಕಿ-9 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಮಾ.17ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ದರ್ಬೆ ಸ್ತ್ರೀಶಕ್ತಿ ಭವನದ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಕಚೇರಿಯಲ್ಲಿ ಸಲ್ಲಿಸಬೇಕು.

ಖಾಲಿಯಿರುವ ಹುದ್ದೆಗಳು: ಪಡ್ನೂರು ಗ್ರಾಮದ ಪಡ್ನೂರು, ಆರ್ಯಾಪು ಗ್ರಾಮದ ಕುಂಜೂರುಪಂಜ, ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ, ಗಾಳಿಮುಖ, ಪಟ್ಟಣ ಪಂಚಾಯತ್‌ನ ಅಡ್ಡಗದ್ದೆ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹುದ್ದೆ ಖಾಲಿಯಿರುತ್ತದೆ. ನಗರಸಭಾ ವ್ಯಾಪ್ತಿಯ ಮಂಜಲ್ಪಡ್ಪು ಜೆ.ಸಿ., ಕೋಡಿಂಬಾಡಿ ಗ್ರಾಮದ ದಾರಂದಕುಕ್ಕು, ಕೊಯಿಲ ಗ್ರಾಮದ ಕುದುಲೂರು, ಕುಂತೂರು ಗ್ರಾಮದ ಗಡಿಯಾರನಡ್ಕ, ಶಿರಾಡಿ ಗ್ರಾಮದ ಸೋಣಂದೂರು, 34ನೆಕ್ಕಿಲಾಡಿಯ ಸುಭಾಷ್‌ನಗರ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿ ಹುದ್ದೆ ಖಾಲಿಯಿರುತ್ತದೆ.

ಅರ್ಜಿ ನಮೂನೆಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಲಭ್ಯವಿರುತ್ತದೆ ಎಂದು ಶಿಶುಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here