ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.18ರಂದು
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಸಂಜೆ ಶ್ರೀ ದೇವರ ಉತ್ಸವ ಬಲಿ ನಡೆಯಿತು.
ಸಂಜೆ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ಕಂಡನಾಯಕ ಕಟ್ಟೆಯಲ್ಲಿ ಪೂಜೆಯ ಬಳಿಕ ಪಲ್ಲಕಿ ಉತ್ಸವ ನಡೆದು ಅಷ್ಟಾವಧಾನ ಸೇವೆ ನಡೆಯಿತು. ಬಳಿಕ ಬಂಡಿ ಉತ್ಸವ, ತೆಪ್ಪೋತ್ಸವ ನಡೆಯಿತು. ಸಂಜೆ ದೇವರ ಬಲಿ ಉತ್ಸವ ನಡೆಯುವ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ದೇವಳದ ಹೊರಾಂಗಣದಲ್ಲಿ ಘೋಷ್ ವಾದನ ಪ್ರದರ್ಶನಗೊಂಡಿತ್ತು.
ಭಕ್ತರಿಂದ ಸಹಸ್ರ ಪ್ರದಕ್ಷಿಣೆ ಸೇವೆ:
ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಭಕ್ತರಿಂದ ವ್ರತಾಚರಣೆ, ಜಾಗರಣೆ, ಭಜನೆ ನಡೆಯುತು. ರಾತ್ರಿ ಉತ್ಸವ ನಡೆಯುವ ಸಂದರ್ಭ ದೇವಾಲಯದ ಒಳಾಂಗಣದಲ್ಲಿ ಮಹಾ ಶಿವರಾತ್ರಿ ವ್ರತಾಚರಣೆಯಲ್ಲಿರುವ ಭಕ್ತರಿಂದ ಸಹಸ್ರ ಪ್ರದಕ್ಷಿಣೆ ಸೇವೆ ನಡೆಯಿತು. ದೇವಳ ಒಳಾಂಗಣದಲ್ಲಿ ಪ್ರದಕ್ಷಿಣೆ ಬರುವ ಭಕ್ತರ ಸಾಗರವೇ ಕಂಡು ಬಂತು. ಬಲಿ ಉತ್ಸವ ಮುಗಿದ ಬಳಿಕ ದೇವಳದ ಹೊರಾಂಗಣದಲ್ಲೂ ಭಕ್ತರು ಪ್ರದಕ್ಷಿಣೆ ಸೇವೆ ಮಾಡಿದರು.