ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ

0

ಈಶ್ವರಮಂಗಲ: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯು ಫೆ.16ರಿಂದ ಫೆ.24ರವರೆಗೆ ನಡೆಯುತ್ತಿದ್ದು ಫೆ.18 ರಂದು ನಿತ್ಯಬಲಿ, ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಉತ್ಸವ ಬಲಿ, ಮಹಾಶಿವರಾತ್ರಿ ಮಹೋತ್ಸವವು ನಡೆಯಿತು.

ಭಜನಾ ಕಾರ್ಯಕ್ರಮವು ಸೂರ್ಯಾಸ್ತದಿಂದ ಪ್ರಾರಂಭಗೊಂಡು ಮರುದಿನ ಸೂರ್ಯೋದಯದವರೆಗೂ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಭಜನಾ ಸಂಘದ ನೇತೃತ್ವದಲ್ಲಿ ಸ್ಥಳೀಯ ಭಜನಾ ಸಂಘಗಳಿಂದ ನಡೆಯಿತು. ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕ ಮತ್ತು ವಿದ್ಯಾರ್ಥಿವೃಂದ ಈಶ್ವರಮಂಗಲ, ಶ್ರೀ ಸತ್ಯನಾರಾಯಣ ಭಜನಾ ಮಂದಿರ ಮಯ್ಯಾಳ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆ.ಮುಡ್ನೂರು-ಕರ್ನೂರು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪದಡ್ಕ, ಶ್ರೀ ಪಂಚಲಿಂಗೇಶ್ವರ ಭಜನಾ ಸಂಘ ಕಾವು, ಶ್ರೀ ಕೂವೆ ಶಾಸ್ತಾರ ಸಾಂಸ್ಕೃತಿಕ ಸೇವಾ ಸಮಿತಿ ಪಡುಮಲೆ, ಶ್ರೀ ಮಾರಿಯಮ್ಮ ಭಜನಾ ಸಂಘ ಜಲಧರ ಕಾಲನಿ ಮೇನಾಲ, ಶ್ರೀ ಧರ್ಮಶಾಸ್ತಾರ ಭಜನಾ ಮಂಡಳಿ ಮಣಿಯೂರು, ಶ್ರೀ ಮೂಕಾಂಬಿಕ ಭಜನಾ ಸಂಘ ಬೈರವಗುಡ್ಡೆ-ಮಯ್ಯಾಳ, ಶ್ರೀ ಮಾರಿಯಮ್ಮ ದೇವಿ ಮತ್ತು ಪರಿವಾರ ದೈವಗಳ ಕ್ಷೇತ್ರ ಸಜಂಕಾಡಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಲ್ಲಾಜೆ-ಕರ್ನೂರು, ಒಡಿಯೂರು ಶ್ರೀ ಗುರುದೇವ ಭಜನಾ ಸಂಘ ಈಶ್ವರಮಂಗಲ ಘಟ ಸಮಿತಿ, ಶ್ರೀ ಪಂಚಲಿಂಗೇಶ್ವರ ಭಜನಾ ಸಂಘ (ರಿ.) ಈಶ್ವರಮಂಗಲ, ಪಂಚಶ್ರೀ ಮಹಿಳಾ ಭಜನಾ ತಂಡ ಈಶ್ವರಮಂಗಲ ಇವರು ಭಜನಾ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.

LEAVE A REPLY

Please enter your comment!
Please enter your name here