ಈಶ್ವರಮಂಗಲ ಗಜಾನನ ವಿದ್ಯಾಕೇಂದ್ರದಲ್ಲಿ ತಾಂತ್ರಿಕ ಪ್ರದರ್ಶನ ಮತ್ತು ವೃತ್ತಿ ಮಾರ್ಗದರ್ಶನ

0

ಈಶ್ವರಮಂಗಲ : ಮಕ್ಕಳ ಮುಂದಿನ ಭವಿಷ್ಯದ ಹಿನ್ನೆಲೆಯಲ್ಲಿ ಹನುಮಗಿರಿ ಗಜಾನನ ವಿದ್ಯಾಸಂಸ್ಥೆಯಲ್ಲಿ ತಾಂತ್ರಿಕ ಪ್ರದರ್ಶನ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವು ಫೆ.17ರಂದು ನಡೆಯಿತು.

ವಿದ್ಯಾಸಂಸ್ಥೆಯ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಕಾರ್ಯಕ್ರಮ ಉದ್ಘಾಟಿಸಿದರು. ಬೆಟ್ಟಂಪಾಡಿ ಸರಕಾರಿ ಪ್ರಥಮ ಧರ್ಜೆ ಕಾಲೇಜಿನ ಪ್ರಾಧ್ಯಾಪಕ ಹರಿಪ್ರಸಾದ್‌ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರ ಮತ್ತು ತಂತ್ರಜ್ಙಾನವನ್ನು ಹೇಗೆ ಬಳಸಿಕೊಳ್ಳಬೇಕೆನ್ನುವ ಬಗ್ಗೆ ಮಾಹಿತಿ ನೀಡಿದರು.

ಗ್ರಾಮೀಣ ಭಾಗದ ಮಕ್ಕಳು ರಚಿಸಿದಂತಹ ವಿಶೇಷ ಕ್ರೀಯಾಶೀಲ ವಿನ್ಯಾಸ, ಸೃಜನಶೀಲತೆಗೆ ಸಂತಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಪ್ರಾಂಶುಪಾಲ ಕೆ. ಶಾಮಣ್ಣ, ಸಂಚಾಲಕ ಶಿವರಾಮ ಪಿ, ಆಡಳಿತ ಮಂಡಳಿ ಸದಸ್ಯ ನಾಗಪ್ಪಗೌಡ ಬೊಮ್ಮೊಟ್ಟಿ ಉಪಸ್ಥಿತರಿದ್ದರು.

9ನೇ ತರಗತಿ ವಿದ್ಯಾರ್ಥಿಗಳಾದ ಶ್ರೇಯ ಮತ್ತು ವಿದ್ಯಾಶ್ರೀ ತಂತ್ರಜ್ಙಾನ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದರು. ಚಿಂತನ ಮತ್ತು ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು. ತನಿಷಾ, ಶರಜ್‌ ಪಿ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here