ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆಯ ಪ್ರಯುಕ್ತ ಸಂಸ್ಥಾನದಲ್ಲಿ ಅಭಿನಂದನಾ‌ ಸಭೆ

0

ಶ್ರೀ ಹನುಮೋತ್ಸವದ ಸಮಾಲೋಚನಾ ಸಭೆ

ಸುಸಂಸ್ಕೃತ ಸಮಾಜದ ಉಳಿವಿಗೆ ಪರ್ವಗಳು ಪೂರಕ:ಒಡಿಯೂರು ಶ್ರೀ

ವಿಟ್ಲ: ಕಾರ್ಯಕ್ರಮ ಸಂಪನ್ನವಾಗಲು ಅದರ ಹಿಂದಿನ ಶ್ರಮ ಬಹಳಷ್ಟಿದೆ. ಗುರುಪರಂಪರೆಗೆ ಅದರದೇ ಆದ ವಿಶ್ವಾಸವಿದೆ. ಒಟ್ಟು ಸೇರಿ ಸಹಾಯ ಮಾಡಿದಲ್ಲಿ‌ ಯಾವುದೇ ಕಾರ್ಯಕ್ರಮ ಯಶಸ್ಸಾಗಲು ಸಾಧ್ಯ. ಕಾರ್ಯಕ್ರಮದ ಏಳುಬಿಳಿನ ವಿಮರ್ಷೆಯ ಉದ್ದೇಶದಿಂದ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ. ಸುಸಂಸ್ಕೃತ ಸಮಾಜದ ಉಳಿವಿಗೆ ಪರ್ವಗಳು ಪೂರಕ. ಅವಕಾಶವನ್ನು ಸದ್ಬಳಕೆ ಮಾಡುವ ಮನಸ್ಸು ನಮ್ಮದಾಗಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಫೆ.19 ರಂದು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆಯಲ್ಲಿ ಸಹಕರಿಸಿದ ಎಲ್ಲಾ ಗುರು ಬಂಧುಗಳಿಗೆ ಅಭಿನಂದನೆ ಹಾಗೂ ಎ.6 ರಂದು ನಡೆಯುವ ಶ್ರೀ ಹನುಮೋತ್ಸವದ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು.

ಜಾತ್ರೆಯ ಉದ್ದೇಶವೇ ಆಫ್ಲೈನ್ ಆನ್ಲೈನ್ ಮಧ್ಯೆ ಇರುವ ಲೈಫ್ಲೈನ್ ಅನ್ನು ಸರಿಪಡಿಸಲು.
ತುಳುವ ಪರಂಪರೆಯ ಉಳಿವಿಗೆ ಜಾನಪದದ ಕೊಡುಗೆ ಅಪಾರ. ಯುವಸಮುದಾಯವನ್ನು ಎಚ್ಚರಿಸುವ ಕೆಲಸವಾಗಬೇಕು. ಯುವಶಕ್ತಿ ಎಚ್ಚೆತ್ತಲ್ಲಿ ದೇಶಕ್ಕೆ ಶೋಭೆ. ತಾಯಂದಿರು ಹಾಗೂ ಯುವಸಮುದಾಯ ಎಚ್ಚೆತ್ತಲ್ಲಿ ಆದರ್ಶ ಸಮಾಜ ನಿರ್ಮಾಣ ವಾಗಲು ಸಾಧ್ಯ. ಉತ್ಸವಕ್ಕಾಗಿ ಉತ್ಸವವಲ್ಲ. ಉತ್ಸವಗಳಿಂದ ಮಾರ್ಮಿಕ ಸಂದೇಶ ಸಮಾಜಕ್ಕೆ ತಲುಪಬೇಕು. ನಮಗಾಗಿ ನಾವು ಮಾಡಿದಾಗ ಕಾರ್ಯಕ್ರಮ ಯಶಸ್ಸಾಗುತ್ತದೆ. ನಮ್ಮ ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ಬಹಳಷ್ಟು ಆಧ್ಯತೆಯನ್ನು ನೀಡಲಾಗಿದ್ದು, ಅದು ಸಾಕಾರಗೊಂಡಿದೆ. ದೇಶ, ರಾಜ್ಯಬಾಷೆಯೊಂದಿಗೆ ತಾಯ್ನಾಡಿನ ಬಾಷೆಯು ಉಳಿವಿಗಾಗಿ ಪ್ರಯತ್ನಿಸಬೇಕು ಎಂದರು.

ಒಡಿಯೂರು ಗ್ರಾಮ ವಿಕಾಸ ಯೋಜನೆಯ ಉಡುಪಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ, ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಒಡಿಯೂರು ಗುರುದೇವ ಸೇವಾಬಳಗದ ಅಶೋಕ್ ಕುಮಾರ್ ಬಿಜೈ, ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಯೋಜನಾಧಿಕಾರಿ ಕಿರಣ್ ಉರ್ವ, ಒಡಿಯೂರು ಗುರುದೇವ ಸೇವಾಬಳಗದ ಮಂಜೇಶ್ವರ ಘಟಕ ಅಧ್ಯಕ್ಷ ಶಶಿಧರ ಶೆಟ್ಟಿ ಜಮ್ಮದಮನೆ, ಕನ್ಯಾನ ಗ್ರಾಮ ಸಮಿತಿ ಅಧ್ಯಕ್ಷ ಕೆ. ಪಿ. ರಘುರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸದಾಶಿವ ಶೆಟ್ಟಿ ಅಳಿಕೆ ಪ್ರಾರ್ಥಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಭಂಡಾರಿ ವಂದಿಸಿದರು.

LEAVE A REPLY

Please enter your comment!
Please enter your name here