ಪುತ್ತೂರು: ಮನೆ ಹಂಚಿನದ್ದಿರಲಿ, ಆರ್.ಸಿ.ಸಿ ಇರಲಿ, ಮನೆ ಬೆಳಗಲು ವಿದ್ಯುತ್ ದೀಪ ಅಗತ್ಯವಾಗಿ ಬೇಕೇ ಬೇಕು. ಇಂತಹ ವಿದ್ಯಾಮಾನದಲ್ಲಿ ಮನೆ ಬೆಳಗುವ ಎಲೆಕ್ಟ್ರೀಶಿಯನ್ ರವರ ಪ್ರತಿಭಾವಂತ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಲ್ಲಿನ ಪುತ್ತೂರು-ಸುಳ್ಯ ಹೆದ್ದಾರಿಯ ದರ್ಬೆ ಫಿಲೋಮಿನಾ ಕಾಲೇಜು ಎದುರುಗಡೆ ವ್ಯವಹರಿಸುತ್ತಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಇನ್ವರ್ಟರ್ಸ್ ಸಂಸ್ಥೆಯು ಇಂಡೋ ಏಷ್ಯನ್ ಸಂಸ್ಥೆಯ ಸಹಭಾಗಿತ್ವದಲ್ಲಿ ರೂ.5000 ಪ್ರೋತ್ಸಾಹ ಧನವನ್ನು ನೀಡಲು ಮುಂದಾಗಿದೆ.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.70 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಈ ಪ್ರೋತ್ಸಾಹಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಇದು ಸಾಮಾಜಿಕ ಕಳಕಳಿ, ಸಾಮಾಜಿಕ ಬದ್ದತೆಯ ಯೋಜನೆಯಾಗಿದ್ದು, ಅರ್ಹ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ 9448422271, 9448546663 ನಂಬರಿಗೆ ಸಂಪರ್ಕಿಸಬೇಕಾಗಿ ಪಶುಪತಿ ಲೈಟ್ಸ್, ಫ್ಯಾನ್ಸ್, ಇನ್ವರ್ಟರ್ಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.