ಹಲ್ಲೆ, ಕೊಲೆ ಬೆದರಿಕೆ ಪ್ರಕರಣ: ಬಂಧಿತ ಆರೋಪಿಗೆ ಜಾಮೀನು ಮಂಜೂರು

0

ಪುತ್ತೂರು: ದರ್ಬೆಯಲ್ಲಿ ನಡೆದಿದ್ದ ಹಲ್ಲೆ ಮತ್ತು ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ 8 ತಿಂಗಳಿನಿಂದ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪದಡಿ ಪುತ್ತೂರು ಪೊಲೀಸರಿಂದ ಫೆ.19ರಂದು ಬಂಧಿಸಲ್ಪಟ್ಟಿದ್ದ ಮುಂಡೂರು ಗ್ರಾಮದ ಕೊಂಬಾಳಿ ನಿವಾಸಿ ಸುಲೈಮಾನ್ ಅವರಿಗೆ ಪುತ್ತೂರು ನ್ಯಾಯಾಲಯ ಫೆ.20ರಂದು ಜಾಮೀನು ಮಂಜೂರು ಮಾಡಿದೆ.

ಸವಣೂರು ಅಫ್ರಾಝ ಫೇರಾಡೈಸ್ ಫ್ಲ್ಯಾಟ್‌ನಿಂದ ಬಂಧಿಸಲ್ಪಟ್ಟಿದ್ದ ಸುಲೈಮಾನ್ 2021ರಲ್ಲಿ ದರ್ಬೆಯಲ್ಲಿ ಹೋಟೇಲ್‌ವೊಂದಕ್ಕೆ ಅಕ್ರಮವಾಗಿ ನುಗ್ಗಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿರುವ ಆರೋಪ ಎದುರಿಸುತ್ತಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದ ಸುಲೈಮಾನ್ ವಿರುದ್ಧ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಬಂಧಿತ ಆರೋಪಿ ಸುಲೈಮಾನ್ ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ನ್ಯಾಯಾಲಯ ಜಾಮೀನು‌‌ ಮಂಜೂರು ಮಾಡಿದೆ. ಆರೋಪಿ ಪರ ನ್ಯಾಯವಾದಿ ಸಾಯಿರಾ ಜುಬೇರ್ ವಾದಿಸಿದ್ದರು.

LEAVE A REPLY

Please enter your comment!
Please enter your name here