ಪುತ್ತೂರು:ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಾದ ಗ್ರಾಹಕ ಸೂಚ್ಯಾಂಕ ಹೆಚ್ಚುವರಿ 503 ಅಂಶಗಳಿಗೆ ರೂ.20.12ರಂತೆ ಪ್ರತಿ ಸಾವಿರ ಬೀಡಿಯ ವೇತನ ಏರಿಕೆ ಆಗಲಿದೆ ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರ ಸಂಘ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಬಿ.ಎಂ.ಭಟ್ ತಿಳಿಸಿದ್ದಾರೆ.
01.04.2023 ರಿಂದ ಪ್ರತಿ ಸಾವಿರ ಬೀಡಿಗೆ ರೂ 272.20 ಇದ್ದು ಅದಕ್ಕೆ ಈ ವರ್ಷದ ಡಿ.ಎ. ಸೇರಿಸಿ ಪ್ರತಿ ಸಾವಿರ ಬೀಡಿಯ ವೇತನ ರೂ 292.32 ಆಗಲಿದೆ.ಆದರೆ ಸರಕಾರವೇ ನಿಗದಿಗೊಳಿಸಿ 01.04.2018ರಿಂದ ಜಾರಿಮಾಡಿದ್ದ ಈ ವೇತನವನ್ನೂ ನೀಡದೆ ಬೀಡಿ ಕಾರ್ಮಿಕರ ಶೋಷಿಸುವ ಬೀಡಿ ಮಾಲಕರ ವಿರುದ್ದ ಬಿಜೆಪಿ ಸರಕಾರ ಕ್ರಮ ಕೈಗೊಂಡಿಲ್ಲ.ಪಿ.ಎಫ್.25 ರೂ ಕಡಿತಗೊಂಡು ಬೀಡಿ ಕಾರ್ಮಿಕರ ಹಸ್ತಪ್ರತಿ ಸಾವಿರ ಬೀಡಿಗೆ ರೂ.227.34 ರಂತೆ ನಗದು ಕೂಲಿ ನೀಡಬೇಕಾಗುತ್ತದೆ.01.04.2023ರಿಂದ ಬೀಡಿ ಮಾಲಕರು ಈ ವೇತನ ಕೊಡದಿದ್ದರೆ ತಕ್ಷಣ ನಮ್ಮ ಸಂಘಕ್ಕೆ (ಮೊ:9448155980, 8792591538)ತಿಳಿಸಬೇಕಂದು ಬಿ.ಎಮ್.ಭಟ್ ಹೇಳಿದ್ದಾರೆ.
ಈಗ ಬೀಡಿ ಮಾಲಕರು ನೀಡುವ ವೇತನ ಪ್ರತಿ ಸಾವಿರ ಬೀಡಿಗೆ ರೂ. 232.22 ಆಗಿದ್ದು ಇದಕ್ಕೆ ಈ ವರ್ಷದ ಡಿ.ಎ. ಸೇರಿ ಒಟ್ಟು 252.34 ರಂತೆ 01.04.2023 ರಿಂದ ಬೀಡಿ ಕಾರ್ಮಿಕರಿಗೆ ಮಾಲಕರು ನೀಡುವ ವೇತನ ಆಗಲಿದೆ. ಇದರಿಂದ ಪಿ.ಎಫ್. 25 ರೂ ಕಡಿತಗೊಂಡು ಬೀಡಿ ಕಾರ್ಮಿಕರ ಹಸ್ತ ಪ್ರತಿ ಸಾವಿರ ಬೀಡಿಗೆ ರೂ. 227.34 ರಂತೆ ನಗದು ಕೂಲಿ ನೀಡಬೇಕಾಗುತ್ತದೆ. 01.04.2023 ರಿಂದ ಬೀಡಿ ಮಾಲಕರು ಈ ವೇತನ ಕೊಡದಿದ್ದರೆ ತಕ್ಷಣ ನಮ್ಮ ಸಂಘಕ್ಕೆ 9448155980, 8792591538 ಮೂಲಕ ತಿಳಿಸಬೇಕೆಂದು ಬಿ.ಎಂ. ಭಟ್ ಅವರು ಕಾರ್ಮಿಕರಿಗೆ ಹೇಳಿದ್ದಾರೆ.