ಮಂಗಳೂರು: ನಗರದ ರಥಬೀದಿಯ ಹೂವಿನ ಮಾರುಕಟ್ಟೆಯ ಎದುರಿನ ಅನಂತೇಶ್ ಕಟ್ಟಡದ ಒಂದನೇ ಮಹಡಿಯಲ್ಲಿ ‘ಶಿಲ್ಪಾಸ್ ಹೆಲ್ತ್ ಕೇರ್’ ಉದ್ಘಾಟನಾ ಸಮಾರಂಭ ಫೆ.22ರಂದು ನಡೆಯಿತು. ಮಾಸ್ಟರ್ ಸಮನ್ವಯ್ ಉರುಬೈಲು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಪಿ.ಯಸ್, ಮಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ಪೂರ್ಣಿಮಾ, ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,ಸಿಎ ಜಗನ್ನಾಥ್ ಕಾಮತ್ ದೀಪಬೆಳಗಿಸಿ ಶುಭ ಕೋರಿದರು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದ, ಶ್ರೀಮತಿ ಶೋಭಾ ಶಿವಾನಂದ, ಕಮಲ ಮುಡೂರು, ಉದ್ಯಮಿ ಸುಬ್ರಾಯ ಶೆಣೈ, ಶಾಂತಿ ಶೆಣೈ, ವಿಶ್ವೇಶ್ವರಯ್ಯ ಟೆಕ್ನಿಕಲ್ ಯುನಿವರ್ಸಿಟಿಯ ಗವರ್ನಿಂಗ್ ಕೌನ್ಸಿಲ್ ಸದಸ್ಯ ಡಾ.ಉಜ್ವಲ್ ಉರುಬೈಲು, ಸುಜಿತ್ ರೈ ಪಾಲ್ತಾಡು, ಶಿಲ್ಪಾಸ್ ಹೆಲ್ತ್ ಕೇರ್‌ನಲ್ಲಿ ಮುಂದಿನ ದಿನಗಳಲ್ಲಿ ಲಭ್ಯರಿರುವ ಎ.ಜೆ.ಆಸ್ಪತ್ರೆಯ ಚರ್ಮರೋಗ ತಜ್ಞ ಡಾ.ಪ್ರದ್ಯುಮ್ನ ಭಂಡಾರಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಬಿ.ಹರೀಶ್ ರೈ,ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಡಾ.ಶಿಲ್ಪಾರವರ ಕುಟುಂಬ ಸದಸ್ಯರು, ಸುದ್ದಿ ಬಿಡುಗಡೆ ಬೆಳ್ತಂಗಡಿ ಸಿಇಒ ಸಿಂಚನಾ ಊರುಬೈಲು ಮೊದಲಾದವರು ಉಪಸ್ಥಿತರಿದ್ದರು.
ಶಿಲ್ಪಾಸ್ ಹೆಲ್ತ್ ಕೇರ್‌ನ ಡಾ.ಶಿಲ್ಪಾ ಶೆಣೈ ಸ್ವಾಗತಿಸಿ ವಂದಿಸಿದರು. ಶ್ರೇಯಸ್ ಊರುಬೈಲು ಸಹಕರಿಸಿದರು.ಸುದ್ದಿ ಬಿಡುಗಡೆ ಮಂಗಳೂರು ವರದಿಗಾರ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.