ಪುಣ್ಚಪ್ಪಾಡಿ ಕುದ್ರೋಳಿ ಮಾಡ ಶ್ರೀ ಧರ್ಮರಸು ಉಳ್ಳಾಕುಲು ಪಿಲಿ ಭೂತ, ಕುಕ್ಕಳ ಪಂಜುರ್ಲಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

ಪುತ್ತೂರು: ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ, ಪುಣ್ಚಪ್ಪಾಡಿ ಕುದ್ರೋಳಿ ಮಾಡ ಶ್ರೀ ಧರ್ಮರಸು ಉಳ್ಳಾಕುಲು ಪಿಲಿ ಭೂತ, ಕುಕ್ಕಳ ಪಂಜುರ್ಲಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಯವರ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಫೆ. 22 ರಂದು ಜರಗಿತು. ಪೂರ್ವಾಹ್ನ 6 ರಿಂದ ಗಣಹೋಮ, ಬೆಳಿಗ್ಗೆ 8.03 ಕ್ಕೆ ಶ್ರೀ ಧರ್ಮರಸು ಉಳ್ಳಾಕುಲು ಪಿಲಿ ಭೂತ, ಕುಕ್ಕಳ ಪಂಜುರ್ಲಿ ದೈವಗಳ ಪ್ರತಿಷ್ಠೆ ನಡೆಯಿತು.


ಶ್ರೀ ಧರ್ಮರಸು ಉಳ್ಳಾಕುಲು ಪಿಲಿಭೂತ ಮತ್ತು ಕುಕ್ಕಳ ಪಂಜುರ್ಲಿ ದೈವಸ್ಥಾನ ಪುಣ್ಚಪ್ಪಾಡಿ ಕುದ್ರೋಳಿಮಾಡದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ. ಕೃಷ್ಣ ರೈ ಪನ್ನೆಗುತ್ತು ಪುಣ್ಚಪ್ಪಾಡಿ ತಳಮನೆ, ಗೌರವಾಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ, ಪುಣ್ಚಪ್ಪಾಡಿ ತಳಮನೆಯ ಯಜಮಾನ ಬಾಲಕೃಷ್ಣ ರೈ, ದೈವಸ್ಥಾನದ ಸ್ಥಳದಾನಿ ದಯಾನಂದ ನಾಯಕ್ ಬೆಂಗಳೂರು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ಧರ್ಮಪ್ರಕಾಶ ರೈ ಪುಣ್ಚಪ್ಪಾಡಿ, ಎನ್. ಸುಂದರ ರೈ ನಡುಮನೆ, ರವೀಂದ್ರ ರೈ ಇಳಂತಾಜೆ, ಪಿ.ಡಿ. ಗಂಗಾಧರ ರೈ ದೇವಸ್ಯ, ಬಾಲಕೃಷ್ಣ ಗೌಡ ಬೆದ್ರಂಪಾಡಿ, ಪ್ರಸನ್ನ ರೈ ನೆಕ್ಕರೆ, ಕಾರ್ಯದರ್ಶಿ ಹರೀಶ್ ಪಿ. ತೋಟದಡ್ಕ, ಉಪ ಕಾರ್ಯದರ್ಶಿ ರಾಮ್‌ಮೋಹನ್ ರೈ ಕಲಾಯಿ, ಕೋಶಾಧಿಕಾರಿ ಸುಧಾಕರ ರೈ ದೇವಸ್ಯ, ಗೌರವ ಸಲಹೆಗಾರರುಗಳಾದ ಕೇಶವ ಕಲ್ಲೂರಾಯ ಬಂಬಿಲ, ಜಯಲಕ್ಷ್ಮೀ ಕೆ.ಎಸ್.ಎನ್., ನಿಡ್ವಣ್ಣಾಯ ಕುಮಾರಮಂಗಲ, ಪದ್ಮಾಕ್ಷಿ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಸಂಕಪ್ಪ ರೈ ಕಲಾಯಿ, ಬಾಲಕೃಷ್ಣ ರೈ ದೇವಸ್ಯ, ರಾಜೇಶ್ ನಾಯಕ್ ಬೆಂಗಳೂರು, ಕುಶಲ ಪಿ ರೈ ಪುಣ್ಚಪ್ಪಾಡಿ, ಮಹಾಬಲ ಶೆಟ್ಟಿ ಕೊಮ್ಮಂಡ ಸಾರಕರೆ, ಶ್ರೀ ಧರ್ಮರಸು ಉಳ್ಳಾಕುಲು ಶ್ರೇಯೋಭಿವೃದ್ಧಿ ಟ್ರಸ್ಟ್ ಕುದ್ರೋಳಿಮಾಡ ಪುಣ್ಚಪ್ಪಾಡಿ ಸಮಿತಿಯ ಅಧ್ಯಕ್ಷ ಜಯರಾಮ ರೈ ತೋಟದಡ್ಕ, ಉಪಾಧ್ಯಕ್ಷ ರಾಜಾರಾಮ ರೈ ಪುಣ್ಚಪ್ಪಾಡಿ, ಕಾರ್ಯದರ್ಶಿ ಗಿರಿಶಂಕರ ಸುಲಾಯ ದೇವಸ್ಯ, ಕೋಶಾಧಿಕಾರಿ ಸುಧಾಕರ್ ರೈ ದೇವಸ್ಯ , ಸದಸ್ಯರುಗಳಾದ ರಾಮ್‌ಮೋಹನ್ ರೈ ಕಲಾಯಿ, ವಿಶ್ವನಾಥ ಮಡಿವಾಳ ಪುಣ್ಚಪ್ಪಾಡಿ, ನಾಗೇಶ್ ಬದಿಯಡ್ಕ, ಮಾಧವ ಗೌಡ ಬೆದ್ರಂಪಾಡಿ, ಕುಂಞ ಓಡಂತರ್ಯ, ಹೊರೆ ಕಾಣಿಕೆ ಸಮಿತಿ ಸಂಚಾಲಕ ಮಹೇಶ್ ಕೆ.ಸವಣೂರು, ಪ್ರಚಾರ ಸಮಿತಿ ಸಂಚಾಲಕ ಪ್ರಕಾಶ್ ರೈ ಸಾರಕರೆ, ಸಚಿನ್ ಕುಮಾರ್ ಜೈನ್ ಪುಣ್ಚಪ್ಪಾಡಿ, ವಿಶಾಖ್ ರೈ ತೋಟದಡ್ಕ, ವೈದಿಕ ಸಮಿತಿಯ ಸುಹಾಸ್ ಕಾರಂತ್, ನಾಗರಾಜ್ ನಿಡ್ವಣ್ಣಾಯ, ವೆಂಕಟೇಶ್ ಭಟ್, ಸ್ವಾಗತ ಸಮಿತಿಯ ವಸಂತ್ ರೈ ಪುಣ್ಚಪ್ಪಾಡಿ, ಪ್ರಶಾಂತ್ ರೈ ಪುಣ್ಚಪ್ಪಾಡಿ, ಲಿಂಗಪ್ಪ ರೈ ಚೆಂಬುತ್ತೋಡಿ, ಸವಣೂರು ಗ್ರಾ.ಪಂ. ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ, ಮೋಹನ್ ದೇವಾಡಿಗ ಪುಣ್ಚಪ್ಪಾಡಿ, ಸವಣೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುಧಾ ಎಸ್ ರೈ, ಶಾಂತಾರಾಮ್ ರೈ ತೋಟದಡ್ಕ, ಜನಾರ್ದನ್ ಕೆ.ಕಟ್ಟತ್ತಾರು, ಬಾಬು ಗೌಡ ಪೂಜಾರಿಮೂಲೆ ಕುಮಾರಮಂಗಲ, ಸುರೇಶ್ ರೈ ಸೂಡಿಮುಳ್ಳು, ನಾರಾಯಣ ಮಡಿವಾಳ ಪುಣ್ಚಪ್ಪಾಡಿ, ಮಾಧವ ಗೌಡ ಬೆದ್ರಂಪಾಡಿ, ಬಾಲಕೃಷ್ಣ ಮಡಿವಾಳ, ಗಣೇಶ್ ರೈ ಸೂಡಿಮುಳ್ಳು, ಅಶೋಕ್ ಪೂಜಾರಿ ಕಲಾಯಿ, ಸತೀಶ್ ಪೂಜಾರಿ , ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ, ಡಿ.ಎಲ್.ಗಾಂಭೀರ ದೇವಸ್ಯ, ಸುಶಾಂತ್ ರೈ ತೋಟತಡ್ಕ, ಪ್ರವೀಣ್ ಶೆಟ್ಟಿ ನೂಜಾಜೆ, ಸಂತೋಷ್ ಶೆಟ್ಟಿ ಕಲಾಯಿ, ರಾಮ್ ಪ್ರಸಾದ್ ಕಲಾಯಿ, ಸದಾನಂದ ಆಳ್ವ ಕಲಾಯಿ, ಜಯರಾಮ್ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾಕ್, ಕೇನ್ಯ ರವೀಂದ್ರನಾಥ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಇಳಂತಾಜೆ ಸಂತೋಷ್ ಕುಮಾರ್ ರೈ, ಎ.ಕೆ.ಜಯರಾಮ ರೈ,ಜೈರಾಜ್ ಭಂಡಾರಿ ಡಿಂಬ್ರಿ, ಜಿ.ಪಂ. ಮಾಜಿ ಅಧ್ಯಕ್ಷ ಶಿವಣ್ಣ ಗೌಡ ಇಡ್ಯಾಡಿ, ವಿಶ್ವಂಭರ ಶೆಟ್ಟಿ ಸೊರಕೆ, ಕಿಶೋರ್ ಹೆಗ್ಡೆ ಬೆಂಗಳೂರು, ಸುಜಿತ್ ಕುಮಾರ್ ಶೆಟ್ಟಿ, ಸರ್ವಜೀತ್ ಶೆಟ್ಟಿ, ಬ್ರಿಜೇಶ್ ಶೆಟ್ಟಿ ಬೆಂಗಳೂರು, ಕೆಡೆಂಜಿಗುತ್ತು ಪ್ರವೀಣ್ ಕುಮಾರ್, ಸುದರ್ಶನ್ ನಾಕ್ ಕಂಪ, ವೆಂಕಟೇಶ್ ಭಟ್ ಕೊಯಕುಡೆ, ಸಂತೋಷ್ ಕುಮಾರ್ ಬೆಳಂದೂರು ಹಾಗೂ ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದರು.

ಮಧ್ಯಾಹ್ನ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಬೆಳಿಗ್ಗೆ ಮತ್ತು ಸಂಜೆ ಉಪಹಾರ ನಡೆಯಿತು.
ಬೆಳಿಗ್ಗೆ ಭಜನಾ ಕಾರ್‍ಯಕ್ರಮದಲ್ಲಿ ದೇವಸ್ಯ, ಪುಣ್ಚಪ್ಪಾಡಿ ಹಾಗೂ ಸವಣೂರು ಮುಗೇರು ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಸಾಂಸ್ಕೃತಿಕ ಕಾರ್‍ಯಕ್ರಮದಲ್ಲಿ ಪುಣ್ಚಪ್ಪಾಡಿ ಮತ್ತು ಕುಮಾರಮಂಗಲ ಶಾಲಾ ಮಕ್ಕಳು ಹಾಗೂ ಅಂಗನವಾಡಿ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.

ಇಂದು ಧರ್ಮರಸು ಉಳ್ಳಾಕುಲು, ಪಿಲಿ ಭೂತ, ಕುಕ್ಕಳ ಪಂಜುರ್ಲಿ ನೇಮೋತ್ಸವ
ಫೆ. 23 ರಂದು ಬೆಳಿಗ್ಗೆ 9 ರಿಂದ ಶ್ರೀ ಧರ್ಮರಸು ಉಳ್ಳಾಕುಲು ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಬಳಿಕ ಪಿಲಿ ಭೂತ ನೇಮೋತ್ಸವ ಹಾಗೂ ಸಂಜೆ ೫ ರಿಂದ ಕುಕ್ಕಳ ಪಂಜುರ್ಲಿ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಗೌರವಾಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ. ಕಾರ್‍ಯದರ್ಶಿ ಹರೀಶ್ ತೋಟದಡ್ಕ,,ದೈವಸ್ಥಾನದ ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಜಯರಾಮ ರೈ, ಕಾರ್‍ಯದರ್ಶಿ ಗಿರಿಶಂಕರ್ ಸುಲಾಯ ದೇವಸ್ಯ, ಕೋಶಾಧಿಕಾರಿ ಸುಧಾಕರ್ ರೈ ದೇವಸ್ಯ, ಪುಣ್ಚಪ್ಪಾಡಿ ತಳಮನೆಯ ಯಾಜಮಾನ ಬಾಲಕೃಷ್ಣ ರೈರವರು ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here