ಬೆಂಗಳೂರು: ಶಾಲೆಗಳಲ್ಲಿ ಒಂದನೇ ತರಗತಿಯ ಪ್ರವೇಶಾತಿಯ ಕನಿಷ್ಠ ವಯಸ್ಸನ್ನು 6 ವರ್ಷಕ್ಕೆ ಏರಿಕೆ ಮಾಡಿ ಎಂದು ಕೇಂದ್ರ ಸರಕಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಅನ್ವಯ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ವಯಸ್ಸು 6 ಇರಬೇಕು ಎಂಬುದಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ನಿರ್ದೇಶನ ನೀಡಿದೆ.
14 ರಾಜ್ಯಗಳಲ್ಲಿ 6 ವರ್ಷ ತುಂಬುವ ಮೊದಲೇ ಒಂದನೇ ತರಗತಿಗೆ ಪ್ರವೇಶಾತಿ ನೀಡಲಾಗುತ್ತದೆ. ಆದರೆ, ನೂತನ ಶಿಕ್ಷಣ ನೀತಿ ಅನ್ವಯ ಒಂದನೇ ತರಗತಿಯ ಪ್ರವೇಶಾತಿಗೆ ಯಾವುದೇ ಮಗುವಿಗೆ 6 ವರ್ಷವಾಗಿರಬೇಕು. ಹಾಗಾಗಿ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕನಿಷ್ಠ ವಯಸ್ಸನ್ನು 6ಕ್ಕೆ ಏರಿಸಬೇಕು ಎಂದು ಸೂಚಿಸಿದೆ