ಕಲಾಸೃಷ್ಠಿ ತಂಡದಿಂದ ಶೈಕ್ಷಣಿಕ ಜಾದೂ ಪ್ರದರ್ಶನ

0

ಪುತ್ತೂರು : ನೆಲ್ಲಿಕಟ್ಟೆ ಮಾತೃ ಛಾಯಾ ಸಭಾಂಗಣದಲ್ಲಿ ಸ್ವಪ್ನಗಳ ತೇರು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಅಂತರತಾಷ್ಟ್ರೀಯ ಪ್ರಶಸ್ತಿ ವಿಜೇತೆ ಶಮಾ ಪರ್ವಿನ್‌ ತಾಜ್‌ ನಿರ್ದೇಶನದ ಕಲಾಸೃಷ್ಠಿ ತಂಡದಿಂದ ಶೈಕ್ಷಣಿಕ ಮತ್ತು ವೈವಿಧ್ಯಮಯ ಜಾದೂ ಪ್ರದರ್ಶನ ನಡೆಯಿತು.

ಕಲಾಸೃಷ್ಠಿ ತಂಡದ ನಿರ್ದೇಶಕಿ ಶಮಾ ಪರ್ವಿನ್‌ ತಾಜ್‌ ರವರಿಂದ ವಿಶೇಷ ರೀತಿಯಲ್ಲಿ ಜಾದೂ ಮೂಲಕ ಸ್ವಪ್ನಗಳ ತೇರು ಕವನ ಸಂಕಲನ ಬಿಡುಗಡೆ ಮಾಡಲಾಯಿತು. ನಿರ್ದೇಶಕಿ ಮಂಗಳೂರಿನ ಬಿಐಟಿ ಇಂಜಿನಿಯರಿಂಗ್‌ ಕಾಲೇಜಿನ ಪ್ರೋಫೆಸರ್‌ ಆಗಿರುವ ಮುಬೀನಾ ಪರ್ವಿನ್‌ ತಾಜ್‌ ಇವರಿಂದ ಶೈಕ್ಷಣಿಕ ಜಾದೂ ಕಾರ್ಯಕ್ರಮ, ಅಂಬಿಕಾ ಬಾಲ ವಿದ್ಯಾಲಯದ 8ನೇ ತರಗತಿ ಮತ್ತು 2ನೇ ತರಗತಿಯ ರೋಷನ್‌ ಶರೀಫ್‌ ಮತ್ತು ಚಾಂದ್‌ ಶರೀಫ್‌ ರವರಿಂದ, ಶಮಾ ಪರ್ವಿನ್‌ ತಾಜ್‌ ರವರಿಂದ ವೈವಿಧ್ಯಮಯ ಜಾದೂ ಪ್ರದರ್ಶನ ಎಲ್ಲರ ಮನರಂಜಿಸಿತು.

LEAVE A REPLY

Please enter your comment!
Please enter your name here