ಕಡಬದಲ್ಲಿ ಶ್ರೀ ಶಾರದಾಂಬಾ ವಿವಿಧೋದ್ದೇಶ ಸೇವಾ ಸಹಕಾರ ಸಂಘದ ಪ್ರಥಮ ಶಾಖೆ ಶುಭಾರಂಭ

0

ಕಡಬ: ಶ್ರೀ ಶಾರದಾಂಬಾ ವಿವಿಧೋದ್ದೇಶ ಸೇವಾ ಸಹಕಾರ ಸಂಘ ಇದರ ಪ್ರಥಮ ಶಾಖೆ ಕಡಬ ಮುಖ್ಯ ರಸ್ತೆಯ ಶಾಲೋಮ್ ಟವರ‍್ಸ್‌ನ ಒಂದನೇ ಮಹಡಿಯಲ್ಲಿ ಫೆ.23ರಂದು ಶುಭಾರಂಭಗೊಂಡಿತು.

ಸಂಸ್ಥೆಯನ್ನು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿದ ಶಾಲೋಮ್ ಟವರ‍್ಸ್‌ನ ಮಾಲಕ ಅಲೆಕ್ಸ್ ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ಕಡಬದಲ್ಲಿ ಶಾರದಾಂಬಾ ಸಹಕಾರ ಸಂಘ ಉದ್ಘಾಟನೆಗೊಂಡಿರುವುದು ಸಂತಸದ ವಿಚಾರ. ಈ ಸಂಘದಿಂದ ಜನರಿಗೆ ಉತ್ತಮ ಸೇವೆ ಲಭ್ಯವಾಗಲಿ ಎಂದು ಹೇಳಿದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಡಬ ಶಾಖಾ ಪ್ರಬಂಧಕ ಅಹಮ್ಮದ್ ಮಸೂರ್, ಕಡಬ ಗಣೇಶ್ ಕಟ್ಟಡದ ಮಾಲಕ ಸುಂದರ ಗೌಡ ಮಂಡೆಕರ ಹಾಗೂ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಮೊದಲಾದವರು ಮಾತನಾಡಿ ಶಾರದಾಂಬಾ ವಿವಿಧೋದ್ದೇಶ ಸೇವಾ ಸಹಕಾರ ಸಂಘವು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು.

ಶ್ರೀ ಶಾರದಾಂಬಾ ವಿವಿಧೋದ್ದೇಶ ಸೇವಾ ಸಹಕಾರ ಸಂಘದ ವಿಜಯ ಕುಮಾರ್ ಕೈಪಂಗಳ ಮಾತನಾಡಿ ನಮ್ಮಲ್ಲಿ ಉಳಿತಾಯ ಖಾತೆ, ಆವರ್ತನ ಖಾತೆ, ಶ್ರೀನಿಧಿ ಠೇವಣಿ ಇದ್ದು ಆಕರ್ಷಕ ದರದಲ್ಲಿ ಇತರ ಸಾಲ ಸೌಲಭ್ಯಗಳು ಲಭ್ಯವಿದೆ. ಚಿನ್ನಾಭರಣ ಸಾಲ, ವಾಹನ ಸಾಲ, ಜಾಮೀನು ಸಾಲ, ಅಡಮಾನ ಸಾಲ, ಗೃಹ ರಿಪೇರಿ ಸಾಲ, ಗೃಹ ಸಾಲ, ಠೇವಣಾತಿ ಸಾಲಗಳು ಲಭ್ಯವಿದೆ. ಅಲ್ಲದೇ ಠೇವಣಿ ಮೇಲೆ ಆಕರ್ಷಕ ಬಡ್ಡಿ ದರಗಳು ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.

ನಿರ್ದೇಶಕ ರವೀಂದ್ರನಾಥ್ ನಾಯ್ಕ್ ಪಡೀಲ್ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ವಿಜಯ‌ ಕುಮಾರ್ ಕೈಪಂಗಳ ಅವರ ಪತ್ನಿ ಹರಿಣಾಕ್ಷಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಶಿವಣ್ಣ ನಾಯ್ಕ್ ಆನೆಕಲ್ಲು ಪ್ರಸ್ತಾವನೆಗೈದು ಸಂಘದ ವಿಚಾರವಾಗಿ ಮಾಹಿತಿ ನೀಡಿದರು.

ಸಂಘದ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಕಾರ್ಯ ನಿರ್ವಹಣಾಧಿಕಾರಿ ಸೌಮ್ಯಾ ಎನ್, ಗುಮಾಸ್ತೆ ಶೃತಿ ಸಹಕರಿಸಿದರು. ನಿರ್ದೇಶಕ ಗೋಪಾಲಕೃಷ್ಣ ಪಡೀಲ್ ಮಂಗಳೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here