





ಪುತ್ತೂರು: ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಕೋಲಾರದ ಪೊಲೀಸ್ ಕವಾಯತು ಕ್ರೀಡಾಂಗಣದಲ್ಲಿ ಫೆ.11 ಮತ್ತು 12ರಂದು ನಡೆದ ರಾಜ್ಯಮಟ್ಟದ 41ನೇ ಮಾಸ್ಟರ್ಸ್ ಅಥ್ಲೆಟಿಕ್ಸ್ನಲ್ಲಿ


ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತ ಶಿಕ್ಷಕ, ಪುತ್ತೂರು ತಾಲೂಕು, ದರ್ಬೆತ್ತಡ್ಕ ನಿವಾಸಿ ವೆಂಕಟೇಶ್ ಪ್ರಸಾದ್ರವರು 45ರ ವಯೋಮಾನ ವಿಭಾಗದ ಎತ್ತರ ಜಿಗಿತದಲ್ಲಿ ಪ್ರಥಮ ಮತ್ತು ಉದ್ದಜಿಗಿತದಲ್ಲಿ ತೃತೀಯ ಸ್ಥಾನ ಪಡೆದು





ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಾ.27ರಿಂದ 30ರವರೆಗೆ ನಡೆಯುವ ರಾಷ್ಟಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.










