’ಸಮಸ್ತ’ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾಗಿ ಅಹ್ಮದ್ ದಾರಿಮಿ ಆಯ್ಕೆ

0

ಬಂಟ್ವಾಳ : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಬಂಟ್ವಾಳ ತಾಲೂಕು ಸಮಿತಿ ರಚನೆಯು ಬಿ.ಸಿ ರೋಡು ತಲಪಾಡಿಯ ಸಮಸ್ತ ಕಚೇರಿಯಲ್ಲಿ ನಡೆಯಿತು.

ಸಮಸ್ತ ಕರ್ನಾಟಕ ಮುಶಾವರದ ಪ್ರಧಾನ ಕಾರ್ಯದರ್ಶಿಯಾದ ಶೈಖುನಾ ಬಿ.ಕೆ ಅಬ್ದುಲ್ ಖಾದರ್ ಅಲ್‌ಖಾಸಿಮಿಯವರು ಅಧ್ಯಕ್ಷತೆ ವಹಿಸಿದ್ದು ಅಹ್ಮದ್ ದಾರಿಮಿ ಕಂಬಳಬೆಟ್ಟು ಉದ್ಘಾಟಿಸಿದರು. ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ ಸ್ವಾಗತಿಸಿದರು. ಹನೀಫ್ ದಾರಿಮಿ ಸುರಿಬೈಲು ವಂದಿಸಿದರು.

ನೂತನ ಸಮಿತಿಯ ನಿರ್ದೇಶಕರಾಗಿ ಶೈಖುನಾ ಬಂಬ್ರಾಣ ಉಸ್ತಾದ್, ಹಾಗೂ ಅಧ್ಯಕ್ಷರಾಗಿ ಅಹ್ಮದ್ ದಾರಿಮಿ ಕಂಬಳಬೆಟ್ಟು, ಉಪಾಧ್ಯಕ್ಷರಾಗಿ ಕೆ.ಬಿ ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿ, ಅಶ್ಫಾಖ್ ಪೈಝಿ ನಂದಾವರ, ಕೆ.ಕೆ.ಇಸ್ಮಾಯಿಲ್ ಮುಸ್ಲಿಯಾರ್ ಕೊಡಂಗಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ದಾರಿಮಿ ಪರಂಗಿಪೇಟೆ, ಕಾರ್ಯದರ್ಶಿಗಳಾಗಿ ಅಬೂಸಿರಾಜ್ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ, ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ, ಹನೀಫ್ ದಾರಿಮಿ ಸುರಿಬೈಲು, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ, ಕೋಶಾಧಿಕಾರಿಯಾಗಿ ಮುಸ್ತಫಾ ಅನ್ಸಾರಿ ಬಾಂಬಿಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಕಾಸಿಂ ದಾರಿಮಿ ವಿಟ್ಲ, ಅಬ್ದುಲ್ ಮಜೀದ್ ದಾರಿಮಿ ಏನಾಜೆ, ಅನ್ಸಾರುದ್ದೀನ್ ಪೈಝಿ ಮಿತ್ತಬೈಲು, ಸದಸ್ಯರಾಗಿ ಅಬ್ದುಲ್ ಗಫೂರ್ ಹನೀಫೀ ಕೊಡುಂಗಾಯಿ, ಶೇಖಬ್ಬ ಬಾಖವಿ ಸಜಿಪ, ಇರ್ಷಾದ್ ದಾರಿಮಿ ಮಿತ್ತಬೈಲು, ಶಾಫೀ ದಾರಿಮಿ, ಇಬ್ರಾಹಿಂ ದಾರಿಮಿ ಗೋಳ್ತಮಜಲು, ಅಬೂಸಾಲಿಹ್ ಫೈಝಿ ಅಕ್ಕರಂಗಡಿ, ಅಬ್ದುರ್ರಹ್ಮಾನ್ ಫೈಝಿ ಕೊಡಾಜೆ, ಉಮರ್ ದಾರಿಮಿ ಪರ್ತಿಪ್ಪಾಡಿ ಆಯ್ಕೆಯಾದರು.

LEAVE A REPLY

Please enter your comment!
Please enter your name here