ಪುತ್ತೂರು: ಮಸ್ಜಿದ್ ಎ ನೂರಿ ಸುನ್ನಿ ಹನಫಿ ಜುಮಾ ಮಸೀದಿ ಬನ್ನೂರು ಫೈಝಾನ್ ಎ ಮುಸ್ತಫಾ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ಜಂಟಿ ಆಶ್ರಯದಲ್ಲಿ ಫೆ.25 ಮತ್ತು 26ರಂದು ಬನ್ನೂರು ಮಸೀದಿ ವಠಾರದಲ್ಲಿ ಸಂಜೆ 6.30ರಿಂದ ಮದೀನೇ ಕಿ ಧುನ್ ಫಿರ್‌ಸೆ ಕಾರ್ಯಕ್ರಮ ನಡೆಯಲಿದೆ. ಕಾವಳಕಟ್ಟೆ ಹಝ್ರತ್ ಅಲ್ಲಾಮಾ ಮೌಲಾನಾ ಅಲ್‌ಹಾಜ್ ಡಾ|ಮಹಮ್ಮದ್ ಫಾಝಿಲ್ ರಝ್ವಿರವರು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಇದರ ಉದ್ಘಾಟನೆಯನ್ನು ಸಾಲ್ಮರ ಎಸ್.ಮೊಹಮ್ಮದ್ ತಂಙಳ್ ನೆರವೇರಿಸಲಿದ್ದಾರೆ. ದುವಾಶೀರ್ವಚನವನ್ನು ಪುತ್ತೂರು ಮುದರ್ರಿಸ್ ಸೈಯದ್ ಅಹಮ್ಮದ್ ಪೂಕೋಯ ತಂಙಳ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಬನ್ನೂರು ಅನಫಿ ಜುಮಾ ಮಸೀದಿ ಅಧ್ಯಕ್ಷ ಸೂಫಿ ರಜ್ಜಬ್ ಅಲಿ ವಹಿಸಲಿದ್ದಾರೆ. ಮಸೀದಿಯ ಇಮಾಮ್ ಮೌಲಾನಾ ಸೈಯದ್ ಸೈಫುಲ್ಲಾ ರಝ್ವಿ ರವರು ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಹನೀಫ್ ಹಾಜಿ ಗೋಳ್ತಮಜಲು ಸೇರಿದಂತೆ ಹಲಾರು ಗಣ್ಯರು ಆಗಮಿಸಲಿದ್ದಾರೆ.
ಮುಹಮ್ಮದ್ ಸಫಿಯುಲ್ಲಾ ಖಾನ್ ಖಾದಿರಿಮತ್ತು ತಂಡ ಹೈದರಾಬಾದ ಇವರಿಂದ ಫೆ.25ರಂದು ಸಂಜೆ ಮೆಹಫಿಲ್ ಎ ನಾಥ್ ನಡೆಯಲಿದೆ. ಫೆ.26ರಂದು ಸಂಜೆ 6.30ರಿಂದ ಧಾರ್ಮಿಕ ಮತಪ್ರವಚನ ಮತ್ತು ಜಲಾಲಿಯ ದ್ಸಿಕ್ರ್ ಕಾರ್ಯಕ್ರಮ ನಡೆಯಲಿದೆ. ದುವಾ ಮತ್ತು ಉದ್ಘಾಟನೆಯನ್ನು ಕೂರ್ನಡ್ಕ ಅಲ್‌ಹಬೀಬ್ ಜಾಮಿ ಅ ಮಸ್ಜಿದ ಇಮಾಮ್ ಮೌಲಾನಾ ಮುಹಮ್ಮದ್ ಶುಹೈಬ್ ಆಲಂ ರಝ್ವಿರವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮೌಲಾನಾ ಮೊಹಮ್ಮದ್ ಅಲಿ ಉಸ್ತಾದ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಚೇಯರ್‌ಮೆನ್ ಸಹರಾ ವೆಲ್‌ಫೇರ್ ಟ್ರಸ್ಟ್‌ನ ಚೆಯರ್‌ಮೆನ್ ಡಾ.ಎಮ್.ಸೈಯದ್ ನಝೀರ್ ಸಾಹೇಬ್, ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಚೆಯರ್‌ಮೆನ್ ಮೌಲನ ಶಾಫಿ ಸಹದಿ ಅತಿಥಿಗಳಾ ಭಾಗವಹಿಸಲಿದ್ದಾರೆ.ಮಸ್‌ದರ್ ಎಜು ಮತ್ತು ಚಾರಿಟಿ ಇದರ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫೈನ್ ಸಖಾಫಿ ಅಲ್ ಇಖಾಮಿ ಭಾಷಣ ಮಾಡಲಿದ್ದಾರೆ. ಅಲ್ಲದೆ ಹಲಾರು ಗಣ್ಯರು ಆಗಮಿಸಲಿದ್ದಾರೆ. ತಮಿಳ್ನಾಡು ನಾಗುರು ಶಾಹುಲ್ ಹಮೀದ್ ನಾಹುರಿ(ರಾ.ಅ)ರವರ ವಂಶಸ್ಥ ಸೈಯದ್ ಇಬ್ರಾಹಿಂ ಖಲೀಲುಲ್ಲಾ ಖಾದಿರಿ ನಾಹುರಿ ರವರ ನೇತೃತ್ವದಲ್ಲಿ ಜಲಾಲಿಯ ದ್ಸಿಕ್ರ್ ನಡೆಯಲಿದೆ. ಹಝ್ರತ್ ಅಲ್ಲಾಮಾ ಮೌಲಾನ ಅಲ್‌ಹಾಜ್ ಡಾ. ಮೊಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ದುವಾಶೀರ್ವಚನ ನೀಡಲಿದ್ದಾರೆ. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ ದ್ಸಿಕ್ರ್ ನಂತರ ತಬರುಕ್ ವಿತರಣೆ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.