ವಿಕ್ಟರ್ ಪ್ರೌಢಶಾಲೆಯಲ್ಲಿ ಚಿಂತನಾ ದಿನಾಚರಣೆ

0

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಫೆ.22 ರಂದು ಚಿಂತನಾ ದಿನಾಚರಣೆಯನ್ನು ಆಚರಿಸಲಾಯಿತು.

ಸರ್ವಧರ್ಮ ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ಗೈಡ್ಸ್ ವಿದ್ಯಾರ್ಥಿನಿ ದಿಶಾ ಪರ್ಲ್ ಮಸ್ಕರೇನ್ಹಸ್ ರವರು ಮಾತನಾಡಿ, ಗೈಡ್ಸ್ ಚಳುವಳಿಗೆ ಸೇರಿದರೆ ವಿದ್ಯಾರ್ಥಿನಿಯರಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ ಎಂದು ವಿದ್ಯಾರ್ಥಿನಿಯರಿಗೆ ಶುಭ ಕೋರಿದರು.

ಮುಖ್ಯ ಶಿಕ್ಷಕಿ ಶ್ರೀಮತಿ ರೋಸ್‌ಲಿನ್ ಲೋಬೊರವರು ಮಾತನಾಡಿ, ವಿದ್ಯಾರ್ಥಿನಿಯರು ಗೈಡ್ಸ್ ಚಳುವಳಿಗೆ ಸೇರಿದಾಗ ಅವರಲ್ಲಿ ಒಳ್ಳೆಯ ಗುಣಗಳು ಬೆಳೆದುಕೊಳ್ಳುತ್ತವೆ, ಮಾತ್ರವಲ್ಲದೆ ಅವರು ಶಿಸ್ತನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳುತ್ತಾರೆ. ಗೈಡ್ಸ್ ನಿಯಮದ ಅಂಶಗಳಂತೆ ವಿದ್ಯಾರ್ಥಿನಿಯರು ಬಾಳಬೇಕು ಹಾಗೂ ಇತರರಿಗೆ ಮಾದರಿಯಾಗಬೇಕು ಎಂಬ ಹಾರೈಕೆ ನಮ್ಮದು ಎಂದು ಶುಭ ಹಾರೈಸಿದರು.

ಆಕಾಂಕ್ಷ ಕೆ.ಜಿ ದಿನದ ಮಹತ್ವವನ್ನು ತಿಳಿಸಿದರು. ಶಿಕ್ಷಕಿ ಡೋರಿನ್ ವಿಲ್ಮ ಲೋಬೊ ವಂದಿಸಿದರು. ಶಿಕ್ಷಕಿ ಶ್ರೀಮತಿ ಅನೀಶ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು. ವಿಷ್ಣುಪ್ರಿಯಾ, ಭೂಮಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಪೂರ್ಣಿಮಾ ಧ್ವಜಾರೋಹಣ ಮಾಡಲು ಮಾರ್ಗದರ್ಶನ ನೀಡಿದರು.

ಚಿಂತನಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿನಿಯರು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಅಂತೆಯೇ ಬೆಂಕಿ ಬಳಸಿ ಹಾಗೂ ಬಳಸದೆ ಇರುವ ತಿನಿಸುಗಳನ್ನು ತಯಾರಿಸಿದರು. ಶಾಲಾ ಸಂಚಾಲಕರ ಲಾರೆನ್ಸ್ ಮಸ್ಕರೇನಸ್ ರವರು ಆಗಮಿಸಿ ವಿದ್ಯಾರ್ಥಿನಿಯರು ತಯಾರಿಸಿದ ಖಾದ್ಯಗಳ ರುಚಿ ನೋಡಿ ಅವರಿಗೆ ಆಶೀರ್ವಚನ ನೀಡಿದರು. ಸಹಾಯಕ ಧರ್ಮ ಗುರುಗಳಾದ ಕೆವಿನ್ ಡಿ’ಸೋಜಾ ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಶ್ ಜೆರಾಲ್ಡ್ ಡಿ’ಕೋಸ್ಟ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here